*ರೋಟರಿ  ಹಂಗಾರಕಟ್ಟೆ ಸಾಸ್ತಾನ ಕ್ಲಬ್ ನ ಹಿರಿಯ ಸದಸ್ಯರ ಉದ್ಯಮ ಕ್ಷೇತ್ರಕ್ಕೆ ಭೇಟಿ ಹಾಗೂ ಗೌರವ ಸಮರ್ಪಣೆ*

ಕ್ಲಬ್ ನ ಸ್ಥಾಪಕ ಸದಸ್ಯ, ಮೇಜರ್ ಡೋನರ್ ರೊ. ಶ್ರೀನಿವಾಸ ಭಟ್ ರವರ ಆಯುರ್ವೇದ ಔಷಧಗಳ ಸಗಟು ಮಳಿಗೆಗೆ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನದ ಸದಸ್ಯರು ಭೇಟಿ ನೀಡಿದರು.ಇದೇ ಸಂದರ್ಭದಲ್ಲಿ ಗುರು ಪೂರ್ಣಿಮೆ ಆಚರಣೆ ಅಂಗವಾಗಿ ರೊ. ಶ್ರೀನಿವಾಸ ಭಟ್ ದಂಪತಿಗಳನ್ನು ಕ್ಲಬ್ ನ ವತಿಯಿಂದ ಸನ್ಮಾನಿಸಲಾಯಿತು. ರೊ. ಸುಲತಾ ಎಸ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಅಧ್ಯಕ್ಷೆ ರೊ. ಕುಸುಮಾ ಮನೋಜ್, ಕಾರ್ಯದರ್ಶಿ ರೊ. ಕೆ. ರಾಜಾರಾಮ ಐತಾಳ, ರೊ. ಮನೋಜ್ ಕುಮಾರ್, ರೊ.ಅಮಿತಾ ಉಮೇಶ್, ರೊ. ನೈನಾ ಜೆ. ಶೆಟ್ಟಿ, ರೊ. ಮಮತಾ ಎಂ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *