Headlines

Featured posts

Latest posts

All
technology
science

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಸರಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿ ಇಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿರುವ ಸೀತಾನದಿ ವಿಟ್ಟಲ್ ಶೆಟ್ಟಿ ಇವರು ಇಂದಿನ ಸ್ವಾಸ್ಥ್ಯ ಸಮಾಜದಲ್ಲಿ ಆರೋಗ್ಯವಾಗಿ ಇದ್ದಲ್ಲಿ ಮಾತ್ರ ಸಾಧನೆ ಮಾಡಲು ಸಾಧ್ಯ, ಮದ್ಯಪಾನ ಬೀಡಿ ಸಿಗರೇಟು ಗುಟುಕ ಜರ್ದ ಅಫೀಮು ಗಾಂಜಾ ಇನ್ನಿತರ ಮಾದಕ ವಸ್ತುಗಳಿಂದ ದೂರವಿರಬೇಕು ಮಾದಕ ವಸ್ತುಗಳಿಂದ ಆರೋಗ್ಯ ಹಾಳಾಗುವುದರ ಜೊತೆಗೆ ಸಂಬಂಧಗಳು ದೂರವಾಗುತ್ತದೆ, ಕುಟುಂಬದ ಆರ್ಥಿಕ ಸ್ಥಿತಿಗತಿ ದುಸ್ಥಿತಿಗೆ…

Read More

ರಾಜೇಂದ್ರ ಚಕ್ಕೇರ ಅವರ ಗೋಸೇವೆ ನಿಜವಾಗಿಯೂ ಶ್ಲಾಘನೀಯ : ಸಂಸದ ಕೋಟ ಶ್ರೀನಿವಾಸ ಪೂಜಾರಿ

ಬ್ರಹ್ಮಾವರ : ಮಠ ಮಂದಿರಗಳು ಮಾಡುವ ಗೋ ಸೇವೆಯಂತಹ ಸಾಮಾಜಿಕ ಧಾರ್ಮಿಕ ಕೆಲಸಗಳನ್ನು ರಾಜೇಂದ್ರ ಚಕ್ಕೇರ ಎಂಬ ವ್ಯಕ್ತಿ ಏಕಾಂಗಿಯಾಗಿ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ. ಮುನ್ನೂರಕ್ಕೂ ಅಧಿಕ ಸಂಖ್ಯೆಯ ಗೋವುಗಳನ್ನು ಹೊಂದಿರುವ ಕಾಮಧೇನು ಗೋಶಾಲೆಗೆ ದಾನಿಗಳ ಸಹಕಾರ ಅಗತ್ಯವಿದೆ. ಗೋ ಪ್ರೇಮಿಗಳು ಮತ್ತು ಜನರು ಇವರ ಕೆಲಸಕ್ಕೆ ಹೆಚ್ಚಿನ ಸಹಕಾರವನ್ನು ನೀಡಿ ಗೋಮಾತೆಯ ಅನುಗ್ರಹಕ್ಕೆ ಪಾತ್ರರಾಗಬೇಕು ಎಂಬುದಾಗಿ ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿದರು. ಅವರು ಸೆಪ್ಟೆಂಬರ್ 20ರಂದು ಕಾಮಧೇನು ಗೋಶಾಲಾ ಮಹಾ ಸಂಘ…

Read More

ತುಳುವಿಗೆ ಹೆಚ್ಚುವರಿ ಆಡಳಿತ ಭಾಷೆ ಮಾನ್ಯತೆ: ಸರಕಾರಕ್ಕೆ ಧನ್ಯವಾದ ಸಲ್ಲಿಸಿದ ಜನನಿ ದಿವಾಕರ ಶೆಟ್ಟಿ

ನಮ್ಮ ಕರಾವಳಿಯ ಬಹುದಿನದ ಕನಸು ನನಸಾಗಿದೆ. ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರ ತುಳು ಭಾಷೆಗೆ ಕರ್ನಾಟಕದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ನೀಡಿರುವುದು ಐತಿಹಾಸಿಕ ತೀರ್ಮಾನ.ತುಳು ಕೇವಲ ಭಾಷೆಯಲ್ಲ, ಇದು ನಮ್ಮ ಸಂಸ್ಕೃತಿ, ನಮ್ಮ ಅಸ್ಮಿತೆ, ನಮ್ಮ ತಾಯಿಯ ಉಸಿರು. ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳುವಿಗೆ ಈ ಗೌರವ ಈ ಹಿಂದೆಯೇ ಸಿಗಬೇಕಿತ್ತು.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜನರ ದಶಕಗಳ ಹೋರಾಟಕ್ಕೆ ಸಿಕ್ಕಿದ ಜಯ ಇದು. ಈ ನಿರ್ಧಾರಕ್ಕಾಗಿ…

Read More

ಯುವ ಜನೋತ್ಸವ-ರಸಪ್ರಶ್ನೆ ಸ್ಪರ್ಧೆ; ವಿದ್ಯಾರಣ್ಯ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ

ಕುಂದಾಪುರ: ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನ್‌ಶನ್‌ ಸೊಸೈಟಿ ಬೆಂಗಳೂರು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ‘ಯುವ ಜನೋತ್ಸವ-2026’ ರಸಪ್ರಶ್ನೆ ಸ್ಪರ್ಧೆಯಲ್ಲಿ ಕುಂದಾಪುರದ ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಾದ ಸಂಜಿತಾ ನಿಧಿ ಮತ್ತು ಪ್ರತೀಕ್‌ ಜಿ.ಎಂ. ಈ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರತಿಭೆ ಪ್ರದರ್ಶಿಸಿ ವಿಜೇತರಾಗಿದ್ದಾರೆ. ವಿದ್ಯಾರ್ಥಿಗಳ…

Read More

ಪಿ. ವಿ. ಆನಂದರ 75ನೆಯ ಮೆಕ್ಕೆಕಟ್ಟು ನಂದಿ ನೂತನ ಪ್ರಸಂಗ ರಚಿಸಲು ಪ್ರಸಾದ ವಿತರಣೆ

ಬ್ರಹ್ಮಾವರ : ಬಡಗಿನ ಪ್ರಸಿದ್ಧ ಮೇಳವಾಗಿ ಹೊರಹೊಮ್ಮಿದ ಶ್ರೀ ನಂದಿಕೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ ಈ ಸಾಲಿನ ತಿರುಗಾಟದಲ್ಲಿ ಪ್ರದರ್ಶನ ಕಾಣಲು ಮೆಕ್ಕೆಕಟ್ಟು ನಂದಿ ಎಂಬ ನೂತನ ಪ್ರಸಂಗ ರಚಿಸಲು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಸಂಗಕರ್ತ ಪಿ ವಿ ಆನಂದ ಸಾಲಿಗ್ರಾಮ ಅವರಿಗೆ ಸೆಪ್ಟೆಂಬರ್ 17ರಂದು ಸಂಕ್ರಮಣದ ದಿನ ಪ್ರಸಾದ ನೀಡಲಾಯಿತು. ಕಳೆದ ಬಾರಿ ಮಣಿಕಲ್ಲು ಕ್ಷೇತ್ರ ಮಹಾತ್ಮೆ, ಕಾಜ್ರಳ್ಳಿ ಕ್ಷೇತ್ರ ಮಾತ್ಮೆಯಂತಹ ಸೂಪರ್ ಹಿಟ್ ಪ್ರಸಂಗಗಳನ್ನು ನೀಡಿದ ಪಿ ವಿ ಆನಂದರು, ಮಕ್ಕೆಕಟ್ಟು ನಂದಿ…

Read More

ಹಂಗರಕಟ್ಟೆ -ಸಾಸ್ತಾನ ರೋಟರಿ ಕ್ಲಬ್ಬಿನ ಪ್ರಾಯೋಜಕತ್ವದಲ್ಲಿ ಬ್ರಹ್ಮಾವರ ವಲಯದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ‘ಪ್ರಾಚ್ಯ ಪ್ರಜ್ಞೆ ‘ಕಾರ್ಯಕ್ರಮ

ದಿನಾಂಕ: 12/ 09/2026 ರ ಶನಿವಾರದಂದು ಚೇತನಾ ಪ್ರೌಢಶಾಲೆ, ಹಂಗಾರಕಟ್ಟೆ ಇಲ್ಲಿ, ಹಂಗರಕಟ್ಟೆ -ಸಾಸ್ತಾನ ರೋಟರಿ ಕ್ಲಬ್ಬಿನ ಪ್ರಾಯೋಜಕತ್ವದಲ್ಲಿ ಬ್ರಹ್ಮಾವರ ವಲಯದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ‘ಪ್ರಾಚ್ಯ ಪ್ರಜ್ಞೆ ‘ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶ್ರೀಮತಿ ಉಮಾ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಬ್ರಹ್ಮವರ ವಲಯ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಹಂಗಾರಕಟ್ಟೆ- ಸಾಸ್ತಾನ ರೋಟರಿ ಕ್ಲಬ್ಬಿನ ಅಧ್ಯಕ್ಷರು,ರೊ. ಕುಸುಮ ಮನೋಜ್ ರವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅಭ್ಯಾಗತರಾಗಿ ಶ್ರೀ ವಿಘ್ನೇಶ್ವರ ಅಡಿಗ,ರೊ. ರಾಜಾರಾಮ್ ಐತಾಳ್, ಶ್ರೀ ಸುರೇಶ್…

Read More

ಪ್ರಗತಿ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಸಭೆ

35ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ – ರಾಜ್ಯದ 4ನೇ ರ‍್ಯಾಂಕ್ ವಿದ್ಯಾರ್ಥಿನಿಗೆ ವಿಶೇಷ ಸನ್ಮಾನ ಹೆಮ್ಮಾಡಿ, ಸೆ. 12: ಹೆಮ್ಮಾಡಿಯ ಪ್ರಗತಿ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ(ನಿ). ಇದರ 2025–26ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯು ಸೆ. 12ರಂದು ಸಂಘದ ಆವರಣದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀಮತಿ ಸಾಧು ಎಸ್. ಬಿಲ್ಲವ ವಹಿಸಿದ್ದರು. ಸಭೆಯಲ್ಲಿ ಸಂಘದ ವಾರ್ಷಿಕ ವರದಿ, ಆರ್ಥಿಕ ವ್ಯವಹಾರಗಳು ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚಿಸಲಾಯಿತು. ಸಂಘದ ಮುಖ್ಯ…

Read More

ನಿವೃತ್ತ ಶಿಕ್ಷಕ ಶ್ರೀಕಾಂತ ಅಧಿಕಾರಿ ಗುರುಗಳಿಗೆ ಸನ್ಮಾನ

ಇಪ್ಪತ್ತನಾಲ್ಕು ವರ್ಷದ ಹಿಂದೆ 2002ರಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದ, “ಶಿಸ್ತು ಮತ್ತು ಶಿಕ್ಷಣಕ್ಕೆ ಹೆಸರಾದ ಕೋಟ “ *ವಿವೇಕ ಬಾಲಕರ ಪ್ರೌಢಶಾಲೆ” VJC Kota* ಯಲ್ಲಿ ಕಲಿತ ವಿದ್ಯಾರ್ಥಿಗಳು ರಚಿಸಿಕೊಂಡಿರುವ ” *ವಿವೇಕ ಹೈಸ್ಕೂಲ್ ಬಳಗ-2002″ ವಾಟ್ಸಪ್ ಗ್ರೂಪ್* ಯಿಂದ ಪ್ರತೀ ವರ್ಷ ಶಿಕ್ಷಕರ ದಿನಾಚರಣೆಯ ಅಂಗವಾಗಿ ” ನಮ್ಮ ಮಾಷ್ಟ್ರು ” ಅಭಿಯಾನದಡಿ ಹೈಸ್ಕೂಲ್ ಶಿಕ್ಷಕರಾಗಿದ್ದು, ನಿವೃತ್ತಿಯಾಗಿರುವ ಒಬ್ಬರು ಶಿಕ್ಷಕರ ಮನೆಗೇ ತೆರಳಿ, ಕುಶಲೋಪರಿ ವಿಚಾರಿಸಿ, ತಮ್ಮ ತಮ್ಮ ವೃತ್ತಿ ಪರಿಚಯಿಸಿಕೊಂಡು ಗುರುವಂದನೆ ಸಲ್ಲಿಸಲಾಯಿತು ….

Read More

ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) : 2025/2026 ನೇ ವಾರ್ಷಿಕ ಮಹಾಸಭೆ

ವಾರ್ಷಿಕ ಮಹಾಸಭೆ : ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಸಂಘದ 2025/2026 ನೇ ವಾರ್ಷಿಕ ಮಹಾಸಭೆಯು ದಿನಾಂಕ 12-09-2026 ರಂದು “ಸೌಹಾರ್ಧ ಸಭಾಂಗಣ” ಕೊಳಲಾಗಿರಿ ಸಂಘದ ಅಧ್ಯಕ್ಷರಾದ ಎನ್. ರಮೇಶ ಶೆಟ್ಟಿರವರ ಅಧ್ಯಕ್ಷತೆಯಲ್ಲಿ ಮಹಾಸಭೆ ಜರಗಿತು. ಮಹಾಸಭೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಸಂದೀಪ ಶೆಟ್ಟಿ ರವರು 2025/2026 ನೇ ಸಾಲಿನ ವರದಿ ಮಂಡಿಸಿದರು. ಸಂಘವು ವರದಿ ಸಾಲಿನಲ್ಲಿ 333 ಕೋಟಿ ವ್ಯವಹಾರ ನಡೆಸಿ, ಉತ್ತಮ ಪ್ರಗತಿ ಸಾಧಿಸಿದೆ. ಠೇವಣಾತಿಯು 103 ಕೋಟಿ 80 ಲಕ್ಷ ದಾಟಿದ್ದು,…

Read More

ವಿನಯ್ ಕುಮಾರ್ ಸೊರಕೆ ಅವರ ನೇತೃತ್ವದಲ್ಲಿ ನಡೆಯಲಿರುವ ಭಾರತ್ ಜೋಡೋ ಟ್ರೋಫಿ – 2026ಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಅವರಿಗೆ ಅಧಿಕೃತ ಆಹ್ವಾನ

ಹೆಜಮಾಡಿ, ಸೆಪ್ಟೆಂಬರ್ 9: ಮಾಜಿ ಸಚಿವರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಶ್ರೀ ವಿನಯ್ ಕುಮಾರ್ ಸೊರಕೆ ಅವರ ನೇತೃತ್ವದಲ್ಲಿ ಅಕ್ಟೋಬರ್ 2, 3 ಹಾಗೂ 4ರಂದು ಹೆಜಮಾಡಿ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ್ ಜೋಡೋ ಟ್ರೋಫಿ – 2026 ಹಾಗೂ “ಮಾದಕ ವ್ಯಸನ ಮುಕ್ತ ಸಮಾಜಕ್ಕಾಗಿ ಬೃಹತ್ ಭಾರತ್ ಜೋಡೋ ರ‍್ಯಾಲಿ” ಕಾರ್ಯಕ್ರಮಕ್ಕೆ ಕರ್ನಾಟಕ ಸರ್ಕಾರದ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಉಡುಪಿ ಜಿಲ್ಲಾ…

Read More