ಮುನಿಯಾಲಿನಲ್ಲಿ 36ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ ಆಚರಣೆ

ಮುನಿಯಾಲು: ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಮುನಿಯಾಲಿನಲ್ಲಿ ಜಿ.ಎಸ್.ಬಿ. ಮಹಿಳಾ ಮಂಡಳಿಯ ವತಿಯಿಂದ 36ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ ಹಾಗೂ ಸಾಮೂಹಿಕ ಚೂಡಿ ಪೂಜಾ ಕಾರ್ಯಕ್ರಮವು ಭಕ್ತಿಭಾವದಿಂದ ನಡೆಯಿತು.ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9 ಗಂಟೆಗೆ ದೇವರ ಪ್ರಾರ್ಥನೆ ನೆರವೇರಿತು. ಬೆಳಿಗ್ಗೆ 10 ಗಂಟೆಗೆ ಗಂಗೆ ಪೂಜೆ ಹಾಗೂ 10.30ಕ್ಕೆ ಸಾಮೂಹಿಕ ಚೂಡಿ ಪೂಜೆ ನಡೆಯಿತು. ಮಧ್ಯಾಹ್ನ 12 ಗಂಟೆಗೆ ಶ್ರೀ ದೇವರಿಗೆ ಮಹಾಪೂಜೆ ಸಲ್ಲಿಸಿ, ಬಳಿಕ ಭೂರಿ ಸಮಾರಾಧನೆ ನೆರವೇರಿತು.ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ನಮಿತಾ…

Read More

ಭಾರತೀಯ ರೆಡ್ ಕ್ರಾಸ್ ಸಂಸ್ಥೆ- ಹೆಬ್ರಿ ಶಾಖೆಯ ಉದ್ಘಾಟನಾ ಸಮಾರಂಭ.

ಹೆಬ್ರಿ : ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇದರ ಹೆಬ್ರಿ ತಾಲೂಕು ಶಾಖೆಯ ಉದ್ಘಾಟನಾ ಕಾರ್ಯಕ್ರಮವು ಹೆಬ್ರಿ ಶ್ರೀ ಅನಂತ ಪದ್ಮನಾಭ ಸನ್ನಿಧಿ ಸಭಾ ಭವನದಲ್ಲಿಆ. 26 ರಂದು ನಡೆಯಿತು.ಉದ್ಘಾಟನೆಯನ್ನು ನೆರವೇರಿಸಿದ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಡಾ. ಅಶೋಕ್ ಕುಮಾರ್ ವೈ. ಜಿ. ಯವರು ಮಾತನಾಡಿ ಹೆಬ್ರಿ ಶಾಖೆಯ ಕಾರ್ಯವೈಖರಿ ಯಿಂದಾಗಿ ಹೆಬ್ರಿಯಲ್ಲಿ ತಾಲೂಕು ಶಾಖೆಯು ಬಲಿಷ್ಠಗೊಂಡು ಸಂಸ್ಥೆಯ ಮೂಲ ತತ್ವಗಳನ್ನು ಪರಿಪಾಲಿಸಿ ಸಮಾಜಕ್ಕೆ ಸೇವೆ ಒದಗಿಸುವಲ್ಲಿ ಸ್ವಯಂ ಸೇವಕರಾಗಿ ಸೇವೆ ಮಾಡುವುದರ…

Read More

ಅರಣ್ಯ ಇಲಾಖೆಯು ಜನರ ಜೀವದ ಜೊತೆ ಚೆಲ್ಲಾಟ ಆಡುವುದನ್ನು ನಿಲ್ಲಿಸಬೇಕು: ಜನನಿ ದಿವಾಕರ ಶೆಟ್ಟಿ

ಹೆಬ್ರಿ: ಹೆಬ್ರಿ ತಾಲೂಕಿನ ಬಹುತೇಕ ಕಡೆಗಳಲ್ಲಿ ಬೃಹತ್ ಮರಗಳು ರಸ್ತೆಗೆ ವಾಲಿಕೊಂಡು ಅನಾಹುತಗಳನ್ನು ಸೃಷ್ಟಿಸುತ್ತಿವೆ. ಈಗಾಗಲೇ ಸಾವು ಮತ್ತು ಹಲವಾರು ಅಫಘಾತಗಳು ಆಗಿವೆ. ಆದರೂ ಸಂಬಂಧಪಟ್ಟ ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಮನಿಸಿ ಕೆಲವೊಂದಿಷ್ಟು ಮರಗಳನ್ನು ಕಾಟಾಚಾರಕ್ಕೆ ಕಡಿದು ಕೈ ತೊಳೆದುಕೊಂಡಿದೆ ಎಂಬುದಾಗಿ ಉಡುಪಿ ಜಿಲ್ಲಾ ಜಯಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಜನನಿ ದಿವಾಕರ ಶೆಟ್ಟಿಯವರು ಆರೋಪಿಸಿದ್ದಾರೆ. ಅವರು ಇತ್ತೀಚೆಗೆ ಹೆಬ್ರಿಯಲ್ಲಿ ಅರಣ್ಯ ಇಲಾಖೆಯ ಬೇಜವಾಬ್ದಾರಿತನದಿಂದ ನಡೆದ ಸಾವಿನ ಪ್ರಕರಣಗಳ ವಿರುದ್ಧ…

Read More

ಪಿ ವಿ ಆನಂದ್ ಸಾಲಿಗ್ರಾಮ ಅವರ 72ನೆಯ ಪ್ರಸಂಗ ಶ್ರೀ ರಾಘವೇಂದ್ರ ಚರಿತೆ ಯಕ್ಷಗಾನ ಲೋಕಾರ್ಪಣೆ

ಹೆಬ್ರಿ : ಮಹಿಮಾನ್ವಿತ ಯೋಗೀಂದ್ರ ಮಂತ್ರಾಲಯ ಪುರವಾಸ ಶ್ರೀ ರಾಘವೇಂದ್ರ ಗುರು ಸ್ವಾಮಿಗಳ ಜೀವನ ಚರಿತ್ರೆಯನ್ನು ಸಾರುವ ಶ್ರೀ ರಾಘವೇಂದ್ರ ಚರಿತೆ ಎನ್ನುವ ಯಕ್ಷಗಾನ ಪ್ರಸಂಗವನ್ನು ಆಗಸ್ಟ್ 20ರ ಗುರುವಾರದಂದು ಹೆಬ್ರಿಯ ಮುದ್ರಾಡಿ ಆದಿಶಕ್ತಿ ದೇವಸ್ಥಾನದ ರಾಘವೇಂದ್ರ ಸ್ವಾಮಿ ಗುರುಗಳ ಮೂರ್ತಿಯ ಎದುರು ವಿಜಯಕೀರ್ತಿ ಸುಕುಮಾರ ಮೋಹನ್ ಸ್ವಾಮೀಜಿಯವರು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ಪ್ರಸಂಗವು ತಾಳಮದ್ದಲೆ ಮತ್ತು ಯಕ್ಷಗಾನದ ಮೂಲಕ ಉತ್ತಮ ಪ್ರದರ್ಶನ ಕಾಣಲಿ ಎಂದು ಶುಭ ಹಾರೈಸಿದರು. ಬಡಗಿನ ಖ್ಯಾತ ಪ್ರಸಂಗಕರ್ತ, ಜಿಲ್ಲಾ…

Read More

ಹೆಬ್ರಿಯಲ್ಲಿ ಸಂಭ್ರಮದ ಆಟಿ ಕಾರ್ಯಕ್ರಮ

ಹೆಬ್ರಿಯಲ್ಲಿ ಸಂಭ್ರಮದ ಆಟಿ ಕಾರ್ಯಕ್ರಮ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹೆಬ್ರಿ ವಲಯದ ವತಿಯಿಂದ ಚೈತನ್ಯ ಯುವ ಬೃಂದ ಇಲ್ಲಿ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಯೋಚನಾಧಿಕಾರಿ ರೇಷ್ಮಾ ಮೇಡಂ ಇವರು ಆಟಿ ತಿಂಗಳಲ್ಲಿ ಮಾಡುವ ತಿಂಡಿ ತಿನಿಸುಗಳ ಬಗ್ಗೆ, ಆಂಟಿ ತಿಂಗಳ ಹಿಂದಿನ ಕಷ್ಟದ ದಿನಗಳನ್ನು ಮೆಲುಕು ಹಾಕುತ್ತಾ ಕಷ್ಟದ ದಿನಗಳಲ್ಲಿ ತಿಂಡಿ ತಿನಿಸುಗಳನ್ನು ಕಾಡಿನ ಎಲ್ಲ ಕಾದ್ಯ ವಸ್ತುಗಳನ್ನು ಪರಿಚಯ ಮಾಡಿಸುತ್ತಾ ಆರೋಗ್ಯದ ಭದ್ರತೆ ಆಟಿ ಕಾರ್ಯಕ್ರಮ ಎಂದು ಮಾತನಾಡಿದರು. ಈ ಸಂದರ್ಭದಲ್ಲಿ…

Read More

ಸ. ಕಿ. ಪ್ರಾ. ಶಾಲೆ ಗಂಟುಬೀಳು ಸ್ವಾತಂತ್ರ್ಯ ದಿನಾಚರಣೆ ಮತ್ತು ಕೊಡುಗೆಗಳ ಹಸ್ತಾಂತರ

ಸ. ಕಿ. ಪ್ರಾ. ಶಾಲೆ ಗಂಟುಬೀಳು ಇಲ್ಲಿ ಮಕ್ಕಳಿಗೆ ಗುರುತಿನ ಚೀಟಿ ಮತ್ತು ಬೆಲ್ಟ್ ವಿತರಣೆ ಕಾರ್ಯಕ್ರಮ80 ನೆಯ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆಯ ಸಭಾ ಕಾರ್ಯಕ್ರಮದಲ್ಲಿ ಶಾಲೆಯ ದಾನಿಗಳಾದ ಮೂಡುಬೈಲು ಚಂದ್ರಶೇಖರ್ ಶೆಟ್ಟಿ ಅರಸಮ್ಮಕಾನು ಇವರು ಐಡಿ ಕಾರ್ಡ್ ಮತ್ತು ಬೆಲ್ಟ್ ಅನ್ನು ಪ್ರತೀ ವರ್ಷದಂತೆ ಈ ವರ್ಷವೂ ತಮ್ಮ ಸ್ವಂತ ಖರ್ಚಿನಲ್ಲಿ ವಿತರಿಸಿ ಶಾಲೆಯ ಬಗ್ಗೆ ಮೆಚ್ಚುಗೆಯ ಮಾತನ್ನಾಡಿ ಮುಂದೆಯೂ ಕೂಡ ಸಹಕಾರ ನೀಡುತ್ತೇನೆ ಎನ್ನುವ ಭರವಸೆಯೊಂದಿಗೆ, ಊರಿನ ಶಾಲೆಯನ್ನು ಉಳಿಸಿ, ಬೆಳೆಸಿ ಎಂದು…

Read More

ಹೆಬ್ರಿ ತಾಲೂಕು ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ, ವಾತ್ಸಲ್ಯ ಯೋಜನೆ ಅಡಿಯಲ್ಲಿ ಮಾಶಾಸನ ಪಡೆಯುತ್ತಿರುವ ಫಲಾನುಭವಿಗಳ 14 ಮಕ್ಕಳಿಗೆ ಅಧ್ಯಯನಕ್ಕೆ ಅಗತ್ಯವಿರುವ ಸಾಮಗ್ರಿ ಗಳಾದ ಬ್ಯಾಗ್, ಪುಸ್ತಕ, ಛತ್ರಿ,ಚಪ್ಪಲ್ ಇತ್ಯಾದಿ ಸಾಮಗ್ರಿಗಳನ್ನು ವಿತರಣೆ

ಓಂ ಶ್ರೀ ಮಂಜುನಾಥ ನಮಃ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಹೆಬ್ರಿ ತಾಲೂಕು ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ, ವಾತ್ಸಲ್ಯ ಯೋಜನೆ ಅಡಿಯಲ್ಲಿ ಮಾಶಾಸನ ಪಡೆಯುತ್ತಿರುವ ಫಲಾನುಭವಿಗಳ 14 ಮಕ್ಕಳಿಗೆ ಅಧ್ಯಯನಕ್ಕೆ ಅಗತ್ಯವಿರುವ ಸಾಮಗ್ರಿ ಗಳಾದ ಬ್ಯಾಗ್, ಪುಸ್ತಕ, ಛತ್ರಿ,ಚಪ್ಪಲ್ ಇತ್ಯಾದಿ ಸಾಮಗ್ರಿಗಳನ್ನು ವಿತರಿಸಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಧರ್ಮಸ್ಥಳ ಕೇಂದ್ರ ಕಚೇರಿಯ ಜ್ಞಾನ ವಿಕಾಸ ವಿಭಾಗದ ನಿರ್ದೇಶಕರಾದ ಶ್ರೀ ದಿನೇಶ್ ಸರ್ ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ವಾತ್ಸಲ್ಯ ಕಾರ್ಯಕ್ರಮದ ಉದ್ದೇಶ ಹಾಗೂ ಪ ರಮಪೂಜ್ಯ…

Read More

ಕಡ್ತಲ ಅಂಗನವಾಡಿ: ಬ್ಯಾಗ್ ವಿತರಣೆ

ಕಡ್ತಲ ಅಂಗನವಾಡಿ ಕೇಂದ್ರದಲ್ಲಿ ದಾನಿ ಸನ್ ಕ್ರಿಯೇಶನ್ ಬೆಂಗಳೂರು ಮಾಲಕರಾದ ಗೌರವಾನ್ವಿತ ಪಾಂಡುರಂಗ ನಾಯಕ್ ಅವರು ನೀಡಿದ ಉಚಿತ ಬ್ಯಾಗ್ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಐ.ಎ.ಎಸ್ ಅಧಿಕಾರಿ ಸದಾಶಿವ ಪ್ರಭು ಬ್ಯಾಗ್ ವಿತರಣೆ ಮಾಡಿ ಅಂಗನವಾಡಿ ಕೇಂದ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಇರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಬಾಲ ವಿಕಾಸ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸುಷ್ಮಾ, ನಿಕಟಪೂರ್ವ ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಶ್ರೀಯುತ ಸುಕೇಶ್ ಹೆಗ್ಡೆ, ಅರುಣ್ ಕುಮಾರ್ ಹೆಗ್ಡೆ,…

Read More

ಹೆಬ್ರಿ ಸಂತೆಕಟ್ಟೆಯಲ್ಲಿ 2096ನೇ ಮದ್ಯವರ್ಜನ ಶಿಬಿರ ಯಶಸ್ವಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ) ಹೆಬ್ರಿ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಬೆಳ್ತಂಗಡಿ, ಉಡುಪಿ ಜಿಲ್ಲೆ ಮತ್ತು ಹೆಬ್ರಿ ತಾಲೂಕು ಘಟಕ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ದೇರಳಕಟ್ಟೆ (ಕ್ಷೇಮ), ಪ್ರಾಥಮಿಕ ಆರೋಗ್ಯ ಕೇಂದ್ರ ಕರ್ಜೆ, ಆರಕ್ಷಕ ಠಾಣೆ ಹೆಬ್ರಿ, ಗ್ರಾಮ ಪಂಚಾಯಿತಿ 38ನೇ ಕಳ್ತೂರು, ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ಕೊಕ್ಕರ್ಣೆ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ…

Read More

ಜುಲೈ ೨೬ ರಂದು ಮುದ್ರಾಡಿ ಧರ್ಮಯೋಗಿ ಮೋಹನ್‌ ಸ್ವಾಮೀಜಿಯವರ ೫ನೇ ಆರಾಧನಾ ಮಹೋತ್ಸವ

ಮುದ್ರಾಡಿ : ಶ್ರೀ ಕ್ಷೇತ್ರ ಮುದ್ರಾಡಿ ಅಭಯಹಸ್ತೆ ಶ್ರೀ ಆದಿಶಕ್ತಿ ಮತ್ತು ನಂದಿಕೇಶ್ವರ ದೇವಸ್ಥಾನದಲ್ಲಿ ಜುಲೈ ೨೬ರಂದು ಮುದ್ರಾಡಿ ಶ್ರೀ ಆದಿಶಕ್ತಿ ಕ್ಷೇತ್ರವನ್ನು ಬೆಳಗಿಸಿದ ಧರ್ಮಯೋಗಿ ಮೋಹನ ಸ್ವಾಮೀಜಿಯವರ ೫ನೇ ವರ್ಷದ ಆರಾಧನಾ ಮಹೋತ್ಸವ ನಡೆಯಲಿದೆ. ಬೆಳಿಗ್ಗೆ ೬:೩೦ ರಿಂದ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ. ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ಪಟ್ಲ ಸತೀಶ ಶೆಟ್ಟಿ ಬಳಗದವರಿಂದ ಯಕ್ಷಗಾನ ತಾಳಮದ್ದಳೆ ಶ್ರೀ ಕೃಷ್ಣ ಸಂಧಾನ ನಡೆಯಲಿದೆ. ಭಾಗವತರಾಗಿ ಪಟ್ಲ ಸತೀಶ ಶೆಟ್ಟಿ, ಚೆಂಡೆ ಕೌಶಿಕ್‌ ರಾವ್‌,…

Read More