ಪಿ. ವಿ. ಆನಂದರ 75ನೆಯ ಮೆಕ್ಕೆಕಟ್ಟು ನಂದಿ ನೂತನ ಪ್ರಸಂಗ ರಚಿಸಲು ಪ್ರಸಾದ ವಿತರಣೆ

ಬ್ರಹ್ಮಾವರ : ಬಡಗಿನ ಪ್ರಸಿದ್ಧ ಮೇಳವಾಗಿ ಹೊರಹೊಮ್ಮಿದ ಶ್ರೀ ನಂದಿಕೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ ಈ ಸಾಲಿನ ತಿರುಗಾಟದಲ್ಲಿ ಪ್ರದರ್ಶನ ಕಾಣಲು ಮೆಕ್ಕೆಕಟ್ಟು ನಂದಿ ಎಂಬ ನೂತನ ಪ್ರಸಂಗ ರಚಿಸಲು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಸಂಗಕರ್ತ ಪಿ ವಿ ಆನಂದ ಸಾಲಿಗ್ರಾಮ ಅವರಿಗೆ ಸೆಪ್ಟೆಂಬರ್ 17ರಂದು ಸಂಕ್ರಮಣದ ದಿನ ಪ್ರಸಾದ ನೀಡಲಾಯಿತು. ಕಳೆದ ಬಾರಿ ಮಣಿಕಲ್ಲು ಕ್ಷೇತ್ರ ಮಹಾತ್ಮೆ, ಕಾಜ್ರಳ್ಳಿ ಕ್ಷೇತ್ರ ಮಾತ್ಮೆಯಂತಹ ಸೂಪರ್ ಹಿಟ್ ಪ್ರಸಂಗಗಳನ್ನು ನೀಡಿದ ಪಿ ವಿ ಆನಂದರು, ಮಕ್ಕೆಕಟ್ಟು ನಂದಿ ಕಥೆಯನ್ನು ತಮ್ಮ75ನೆಯ ಅದ್ಧೂರಿ ಪ್ರಸಂಗವಾಗಿ ರಚಿಸಲಿದ್ದಾರೆ.
ಕ್ಷೇತ್ರದ ಅರ್ಚಕರು ಪ್ರಸಾದ ವಿತರಣೆ ಮಾಡಿದ್ದು, ಮೇಳದ ಯಜಮಾನರಾದ ರಂಜಿತ್ ಕುಮಾರ್ ಶೆಟ್ಟಿ ಅವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *