ಕೋಟೇಶ್ವರದಲ್ಲಿ ‘ಯಕ್ಷ ಪಂಚಮಿ – 5’ ಸಂಭ್ರಮ: ಐರೋಡಿ ಮಂಜುನಾಥ ಕುಲಾಲ್ ಅವರಿಗೆ ‘ಯಕ್ಷಲೋಕದ ಮಾಸದ ಬಣ್ಣ – 100’ ಪ್ರಶಸ್ತಿ ಪ್ರದಾನ

ಕೋಟೇಶ್ವರ: ಕಲೆಯ ತವರೂರಾದ ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನದ ರಂಗಮಂದಿರದಲ್ಲಿ ‘ಯಕ್ಷ ನಿನಾದ’ ಬಳಗದ ಸಂಯೋಜನೆ, ಎಸ್.ಎಂ. ಕನ್‌ಸ್ಟ್ರಕ್ಷನ್ಸ್ ಪ್ರಾಯೋಜಕತ್ವ ಹಾಗೂ ಶ್ರೀ ಲಕ್ಷ್ಮೀ ನಾರಾಯಣಯ್ಯ ಜನ್ಮ ಶತಮಾನೋತ್ಸವ ಸಮಿತಿ, ಬಣ್ಣದ ಸಕ್ಕಟ್ಟು (ಯಕ್ಷಲೋಕದ ಮಾಸದ ಬಣ್ಣ – 100) ಇವರ ಸಹಯೋಗದೊಂದಿಗೆ ನಡೆದ 5ನೇ ವರ್ಷದ ‘ಯಕ್ಷ ಪಂಚಮಿ – 5’ ಯಕ್ಷಗಾನ ಸಂಭ್ರಮ ಹಾಗೂ ಸಭಾ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಪ್ರಶಸ್ತಿ ಪ್ರದಾನ:ಕಾರ್ಯಕ್ರಮದಲ್ಲಿ ಯಕ್ಷಗಾನ ರಂಗಕ್ಕೆ ಸಲ್ಲಿಸಿದ ಗಣನೀಯ ಸೇವೆ ಹಾಗೂ ಶಿಷ್ಯ ಪರಂಪರೆಯನ್ನು ಬೆಳೆಸಿದ ಸಾಧನೆಗಾಗಿ ಖ್ಯಾತ ಯಕ್ಷಗುರು ಐರೋಡಿ ಮಂಜುನಾಥ ಕುಲಾಲ್ ಯಡ್ತಾಡಿ ಅವರಿಗೆ ‘ಬಣ್ಣದ ಸಕ್ಕಟ್ಟು ಶ್ರೀ ಲಕ್ಷ್ಮೀ ನಾರಾಯಣಯ್ಯ ಯಕ್ಷಲೋಕದ ಮಾಸದ ಬಣ್ಣ – 100’ ಪ್ರಶಸ್ತಿಯನ್ನು ನೀಡಿ, ಗಣ್ಯರ ಸಮ್ಮುಖದಲ್ಲಿ ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು:*

ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಾಗೂ ಗೌರವ ಉಪಸ್ಥಿತಿಯಲ್ಲಿ:* * ಶ್ರೀ ಗೋಪಾಲಕೃಷ್ಣ ಶೆಟ್ಟಿ (ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ, ಕೋಟೇಶ್ವರ) * ಶ್ರೀ ಮಂಜುನಾಥಯ್ಯ ಸಕ್ಕಟ್ಟು (ಅಧ್ಯಕ್ಷರು, ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ ಜನ್ಮಶತಮಾನೋತ್ಸವ ಸಮಿತಿ) * ಶ್ರೀ ಅಶೋಕ್ ಶೆಟ್ಟಿ ಹಂದಕುಂದ (ವಕೀಲರು, ಕುಂದಾಪುರ) * ಡಾ. ಜಗದೀಶ ಶೆಟ್ಟಿ (ಅಧ್ಯಕ್ಷರು, ಯಕ್ಷ ನುಡಿಸಿರಿ ಬಳಗ, ಸಿದ್ದಾಪುರ) * ಶ್ರೀ ಉದಯಕುಮಾರ್ ಹಟ್ಟಿಯಂಗಡಿ (ಆಡಳಿತ ಮಂಡಳಿ ಅಧ್ಯಕ್ಷರು, ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನ, ಶ್ರೀಕ್ಷೇತ್ರ ಬಗ್ವಾಡಿ) * ಶ್ರೀ ಕೆ. ಸುರೇಶ್ ವಿಠ್ಠಲವಾಡಿ (ಸ್ಥಾಪಕ ಅಧ್ಯಕ್ಷರು, ಶ್ರೀ ನಾಗಯಕ್ಷಿ ಯಕ್ಷಕೂಟ, ಮಾರ್ಕೋಡು – ಕೋಟೇಶ್ವರ) * ಶ್ರೀ ಶ್ರೀನಿವಾಸ ಪೂಜಾರಿ ಮಾರ್ಕೋಡು (ಅಧ್ಯಕ್ಷರು, ಶ್ರೀ ನಾಗಯಕ್ಷಿ ಯಕ್ಷಕೂಟ, ಮಾರ್ಕೋಡು – ಕೋಟೇಶ್ವರ) * ಶ್ರೀ ದಿನೇಶ್ ಆಚಾರ್ಯ (ಐಶ್ವರ್ಯ ಜ್ಯುವೆಲ್ಲರಿ, ಶಿರ್ವ – ಮಂಚಕಲ್ಲು) * ಶ್ರೀ ರವೀಂದ್ರ ಪೂಜಾರಿ ರಟ್ಟಾಡಿ (ಉದ್ಯಮಿಗಳು, ಕಾಪು) * ಶ್ರೀ ಸಂದೀಪ್ ಶೆಟ್ಟಿ ಹೆಗ್ಗದ್ದೆ (ಹೆಗ್ಗದ್ದೆ ಸ್ಟುಡಿಯೋಸ್) * ಶ್ರೀ ಕೆ.ಆರ್. ನಾಯ್ಕ್ (ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರರು, ಹಂಗಳೂರು) * ಶ್ರೀ ಸುಧಾಕರ್ ಆಚಾರ್ಯ ಕಂಡ್ಲೂರು (ಕಾರ್ಯದರ್ಶಿ, ಕನ್ನಿಕಾಪರಮೇಶ್ವರಿ ಯಕ್ಷಗಾನ ಕಲಾ ಸಂಘ, ಕಂಡ್ಲೂರು) ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ರಂಜಿಸಿದ ಯಕ್ಷಗಾನ ಪ್ರದರ್ಶನ:ಸಭಾ ಕಾರ್ಯಕ್ರಮದ ಬಳಿಕ ಶ್ರೀ ನಾಗಯಕ್ಷಿ ಯಕ್ಷಕೂಟ ಮಾಕೋಡು-ಕೋಟೇಶ್ವರ ಹಾಗೂ ಪ್ರಸಿದ್ಧ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ, ಯಕ್ಷಗುರು ಐರೋಡಿ ಮಂಜುನಾಥ ಕುಲಾಲ್ ಯಡ್ತಾಡಿ ಹಾಗೂ ವಿಘ್ನೇಶ್ ದೇವಾಡಿಗ ಗಿಳಿಯಾರು ಇವರ ನಿರ್ದೇಶನದಲ್ಲಿ ಮೂಡಿಬಂದ ‘ವೀರ ಮೌರ್ವಿಜ – ಪ್ರಮೀಳಾರ್ಜುನ – ಘೋರಭೀಷಣ ಕಾಳಗ’ ಯಕ್ಷಗಾನ ಪ್ರಸಂಗಗಳು ಕಲಾಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾದವು.ಕಾರ್ಯಕ್ರಮವನ್ನು ಯಕ್ಷ ನಿನಾದ ಬಳಗದ ನಾಗರಾಜ್ ಆಚಾರ್ಯ ಹಟ್ಟಿಯಂಗಡಿ ಸಂಯೋಜಿಸಿ, ಆಗಮಿಸಿದ ಸರ್ವ ಕಲಾವಿದರಿಗೂ, ಗಣ್ಯರಿಗೂ ಹಾಗೂ ಕಲಾಭಿಮಾನಿಗಳಿಗೆ ಧನ್ಯವಾದ ಸಮರ್ಪಿಸಿದರು. ಅಪಾರ ಸಂಖ್ಯೆಯ ಯಕ್ಷಗಾನ ಪ್ರೇಮಿಗಳು ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.

Leave a Reply

Your email address will not be published. Required fields are marked *