ದೇಶಕ್ಕಾಗಿ ದುಡಿದ ಯೋಧರ ಸೇವೆ ಮತ್ತು ತ್ಯಾಗ ಸದಾ ಸ್ಮರಣೀಯ: ಶಾಸಕ ಯಶ್ಪಾಲ್ ಸುವರ್ಣ
ಉಡುಪಿ ಮಂಚಿಯ ಗ್ರೀನ್ ವ್ಯಾಲಿ ಪ್ಯಾರಡೈಸ್ ನಲ್ಲಿರುವ ವಾಯುಪಡೆಯ ನಿವೃತ್ತ *ಸ್ಕ್ವಾಡ್ರನ್ ಲೀಡರ್ ಕೆ ಶಿವರಾಮ ಮಂಜ ದಂಪತಿಯನ್ನು* , ಉಡುಪಿ ಜಿಲ್ಲಾ ರೈತ ಮೋರ್ಚ ವತಿಯಿಂದ ಸನ್ಮಾನಿಸಿ, *ಪ್ರಧಾನಿ ನರೇಂದ್ರ ಮೋದಿ ಅವರ ಪರಿಕಲ್ಪನೆಯಾದ ಹರ್ ಘರ್ ತಿರಂಗಾ* ಕಾರ್ಯಕ್ರಮದಿಂದ, ಸ್ವಾತಂತ್ರ್ಯ ದಿನಾಚರಣೆಯು, ಶಾಲೆ ಮತ್ತು ಸಂಘ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿರದೆ, ಪ್ರತಿ ಮನೆಗೆ ಮತ್ತು ಮನಸ್ಸುಗಳಿಗೆ ತಲುಪಿದೆ ಎಂದು *ಶಾಸಕ ಯಶ್ಪಾಲ್ ಸುವರ್ಣ* ಹೇಳಿದರು.
ಈ ಕಾರ್ಯಕ್ರಮದಲ್ಲಿ ಡಾ| ವಿಶ್ವನಾಥ ಶಾನಭೋಗ, ಡಾ| ತಾರಾ ಶಾನಭೋಗ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ನಗರ ಅಧ್ಯಕ್ಷ ದಿನೇಶ್ ಅಮೀನ್, ಗ್ರಾಮಾಂತರ ಅಧ್ಯಕ್ಷ ರಾಜೀವ ಕುಲಾಲ್, ಲೋಕಯ್ಯ, ಅಶೋಕ್ ನಾಯ್ಕ್ , ನಾರಾಯಣ ಮಂಜ, ಸಂದೀಪ ಮಂಜ , ಪ್ರಸಾದ ಭಟ್ , ರಾಜೇಶ್ವರಿ ಮಂಜ, ಪ್ರಕಾಶ್ ಮಧ್ಯಸ್ಥ, ಲೀಲಾವತಿ ಭಟ್,ರತ್ನಾಕರ್ ಇಂದ್ರಾಳಿ, ಮನೋಜ್ ಕುಮಾರ್ ಶೆಟ್ಟಿ ಮತ್ತು ಪ್ಯಾರಡೈಸ್ ನ ಕುಟುಂಬಸ್ಥರು ಉಪಸ್ಥಿತರಿದ್ದರು. ರೈತ ಮೋರ್ಚಾ ಅಧ್ಯಕ್ಷ ಕಮಲಾಕ್ಷ ಹೆಬ್ಬಾರ್ ಪ್ರಾಸ್ತಾವಿಕ ಮಾತನಾಡಿ, ಡಾ| ಇಂದಿರಾ ಶಾನಭೋಗ ನಿರೂಪಿಸಿ, ಪ್ರಸಾದ ಭಟ್ ವಂದಿಸಿದರು.

