ರೋಟರಿ ಕ್ಲಬ್ ಹಂಗಾರಕಟ್ಟೆ- ಸಾಸ್ತಾನ: ಕಾನೂನು ಅರಿವು ಕಾರ್ಯಕ್ರಮ

ಚೇತನಾ ಪ್ರೌಢಶಾಲೆ ಹಂಗಾರಕಟ್ಟೆ, ಇಲ್ಲಿ ದಿನಾಂಕ:05/08/2026 ರಂದು ರೋಟರಿ ಕ್ಲಬ್ ಹಂಗಾರಕಟ್ಟೆ- ಸಾಸ್ತಾನ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಉಡುಪಿ, ಇವರ ಸಹಯೋಗದಲ್ಲಿ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಶ್ರೀಮತಿ ಮುಕ್ತ ಬಾಯಿ, ಪೋಲಿಸ್ ಉಪ ನಿರೀಕ್ಷಕರು, ಪೊಲೀಸ್ ಠಾಣೆ, ಬ್ರಹ್ಮಾವರ , ಹಾಗೂ ಕು. ಆಶ್ರೀತಾ. ಎ. ಶೆಟ್ಟಿ ಪ್ರೊಫೆಷನರಿ ಪೊಲೀಸ್ ಉಪನಿರೀಕ್ಷಕರು, ಪೊಲೀಸ್ ಠಾಣೆ ಬ್ರಹ್ಮಾವರ ಸಂಪನ್ಮೂಲ ವ್ಯಕ್ತಿಗಳಾಗಿ, ಪೋಕ್ಸೋ, ಸೈಬರ್ ಕ್ರೈಂಸ್, ಮಕ್ಕಳ ಕಳ್ಳ ಸಾಗಣಿಕೆ, ಮಾದಕ ದ್ರವ್ಯ ವ್ಯಸನ, ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಹಾಗೂ ಕಾನೂನಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ನೀಡಿದರು.

ರೊ. ಕುಸುಮ ಮನೋಜ್ , ಅಧ್ಯಕ್ಷರು ರೋಟರಿ ಕ್ಲಬ್ ಹಂಗಾರಕಟ್ಟೆ- ಸಾಸ್ತಾನ ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಕಲ್ಪನಾ ಶೆಟ್ಟಿ ಇವರು ಪ್ರಸ್ತಾವಿಕ ನುಡಿಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀಮತಿ ರೇಖಾ ಉಡುಪ ಪೋಷಕ ಪ್ರತಿನಿಧಿ, ಶ್ರೀ ರಕ್ಷಿತ್ ಕುಮಾರ್ ಶೆಟ್ಟಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ರೊ. ಮನೋಜ್ ಕುಮಾರ್,ರೊ. ಅರವಿಂದ್ ಶರ್ಮಾರೊ. ಲಕ್ಷ್ಮೀನಾರಾಯಣ,ರೊ. ಲೀಲಾವತಿ, ರೊ. ಸುಲತಾ ಹೆಗಡೆ, ರೊ. ಜ್ಯೋತಿ ಉದಯ್ ಕುಮಾರ್,ರೊ. ಅಮಿತಾ, ರೊ. ಮಮತಾ ಶೆಟ್ಟಿ, ಶಾಲಾ ವಿದ್ಯಾರ್ಥಿ ನಾಯಕಿ ಕು. ವರ್ಷ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *