ಸರಕಾರಿ ಪ್ರೌಢಶಾಲೆ ಗುಂಡ್ಮಿ ಸಾಸ್ತಾನ – ಇಂಟ್ರ್ಯಾಕ್ಟ್ ಕ್ಲಬ್ ಪದಪ್ರದಾನ.

ಸಾಸ್ತಾನ: ಸರಕಾರೀ ಪ್ರೌಢಶಾಲೆ ಗುಂಡ್ಮಿ ಸಾಸ್ತಾನ ಇಲ್ಲಿ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಪ್ರವತಿ೯ತ 2026-27ನೇ ಸಾಲಿನ ಇಂಟ್ರ್ಯಾಕ್ಟ್ ಕ್ಲಬ್ ನ ಪದಪ್ರದಾನ ಸಮಾರಂಭವುಇತ್ತೀಚೆಗೆ ನಡೆಯಿತು.

ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನದ ಅಧ್ಯಕ್ಷ ರೊ. ಕುಸುಮಾ ಮನೋಜ್ ಅಧ್ಯಕ್ಷತೆ ವಹಿಸಿದ್ದರು.ಇಂಟ್ರ್ಯಾಕ್ಟ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಕು. ಕೌಸಲ್ಯಾ ಅಧಿಕಾರ ಸ್ವೀಕರಿಸಿದರು. ಉಡುಪಿ ಜಿಲ್ಲಾ ಡಯಟ್ ನ ಉಪನ್ಯಾಸಕ ಡಾ. ಕಿಶೋರ್ ಕುಮಾರ್ ಶೆಟ್ಟಿ, ಇಂಟ್ರ್ಯಾಕ್ಟ್ ಕೋ ಆಡಿ೯ನೇಟರ್ ರೊ.ಆನಂದ್ ಎಮ್, ಕ್ಲಬ್ ನ ಕಾರ್ಯದರ್ಶಿ ರೊ. ಕೆ. ರಾಜಾರಾಮ ಐತಾಳ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ರೀಮತಿ ಸುಜಾತ, ಶಿಕ್ಷಣ ತಜ್ಞ ಗಣೇಶ್ ಜಿ, ಸಮಿತಿ ಸದಸ್ಯರಾದ ಶ್ರೀಮತಿ ಸುಲತಾ ಎಸ್ ಹೆಗ್ಡೆ,ಇಂಟ್ರ್ಯಾಕ್ಟ್ ಮಾರ್ಗದರ್ಶಿ ಶಿಕ್ಷಕಿ ಶ್ರೀಮತಿ ಹೆಲೆನ್ ಬಾಂಝ್ ಹಾಗೂ ಹೆಚ್ಚಿನ ರೋಟರಿ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *