ಸ. ಕಿ. ಪ್ರಾ. ಶಾಲೆ ಗಂಟುಬೀಳು ಸ್ವಾತಂತ್ರ್ಯ ದಿನಾಚರಣೆ ಮತ್ತು ಕೊಡುಗೆಗಳ ಹಸ್ತಾಂತರ

ಸ. ಕಿ. ಪ್ರಾ. ಶಾಲೆ ಗಂಟುಬೀಳು ಇಲ್ಲಿ ಮಕ್ಕಳಿಗೆ ಗುರುತಿನ ಚೀಟಿ ಮತ್ತು ಬೆಲ್ಟ್ ವಿತರಣೆ ಕಾರ್ಯಕ್ರಮ80 ನೆಯ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆಯ ಸಭಾ ಕಾರ್ಯಕ್ರಮದಲ್ಲಿ ಶಾಲೆಯ ದಾನಿಗಳಾದ ಮೂಡುಬೈಲು ಚಂದ್ರಶೇಖರ್ ಶೆಟ್ಟಿ ಅರಸಮ್ಮಕಾನು ಇವರು ಐಡಿ ಕಾರ್ಡ್ ಮತ್ತು ಬೆಲ್ಟ್ ಅನ್ನು ಪ್ರತೀ ವರ್ಷದಂತೆ ಈ ವರ್ಷವೂ ತಮ್ಮ ಸ್ವಂತ ಖರ್ಚಿನಲ್ಲಿ ವಿತರಿಸಿ ಶಾಲೆಯ ಬಗ್ಗೆ ಮೆಚ್ಚುಗೆಯ ಮಾತನ್ನಾಡಿ ಮುಂದೆಯೂ ಕೂಡ ಸಹಕಾರ ನೀಡುತ್ತೇನೆ ಎನ್ನುವ ಭರವಸೆಯೊಂದಿಗೆ, ಊರಿನ ಶಾಲೆಯನ್ನು ಉಳಿಸಿ, ಬೆಳೆಸಿ ಎಂದು ಸಲಹೆ ನೀಡಿದರು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಆಶಾ ಶೆಟ್ಟಿ ವಹಿಸಿದ್ದರು. ಸ್ಥಳೀಯರಾದ LIC ಕೃಷ್ಣ ನಾಯ್ಕ್, ಉಪಾಧ್ಯಕ್ಷರಾದ ರೇಣುಕಾ, ಮುಖ್ಯೋಪಾಧ್ಯಾಯರಾದ ಶಾರದಾ ಉಪಸ್ಥಿತರಿದ್ದರು.ಮುಖ್ಯ ಶಿಕ್ಷಕಿ ಶಾರದಾ ಸ್ವಾಗತಿಸಿ ಸಹಶಿಕ್ಷಕರಾದ ದಿನೇಶ್ ಆಚಾರಿ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜನ ಮನ ಸೂರೆಗೊಳ್ಳುವಂತೆ ಪ್ರದರ್ಶನಗೊಂಡಿತು

Leave a Reply

Your email address will not be published. Required fields are marked *