ಇಂದಿನಿಂದ ಮೂರು ದಿನ ಮಣಿಪಾಲ್ ಮಾನ್ಸೂನ್ ಮೇಳ 2026
ಮೇಳದಲ್ಲಿ ದೇಶಿ ಹಾಗೂ ವಿದೇಶಿ ಹಣ್ಣುಗಳ ಸಂಗಮ ವಿಶೇಷ ಆಕರ್ಷಣೆಯಾಗಿದ್ದು, ವಿವಿಧ ತಳಿಯ ಹಣ್ಣುಗಳು ಮತ್ತು ಅವುಗಳಿಂದ ತಯಾರಿಸಲಾದ ವಿಶೇಷ ಆಹಾರ ಪದಾರ್ಥಗಳು ಗ್ರಾಹಕರನ್ನು ಸೆಳೆಯುತ್ತಿವೆ.
ಹಲಸಿನ ಹಣ್ಣಿನ ಜಿಲೇಬಿ, ನ್ಯಾಚುರಲ್ ಹಲಸಿನ ಜಿಲೇಬಿ, ಪೈನಾಪಲ್ ಹೋಳಿಗೆ, ಕಾಯಿ ಹೋಳಿಗೆ, ಹಲಸಿನ ಹೋಳಿಗೆ, ಹಲಸಿನ ಹಪ್ಪಳ ಸೇರಿದಂತೆ ವಿವಿಧ ಫುಡ್ ಪ್ರಾಡಕ್ಟ್‌ಗಳು, ಮೈಸೂರ್ ಪಾಕ್, ಜಿಲೇಬಿ ಹಾಗೂ ಬಿರಿಯಾನಿ ಸೇರಿದಂತೆ ಹಲವು ಖಾದ್ಯಗಳು ಮೇಳದಲ್ಲಿ ಲಭ್ಯವಿವೆ.
ಇದರ ಜೊತೆಗೆ ಹಳೆ ರೇಷ್ಮೆ ಸೀರೆ ಖರೀದಿ ಸ್ಟಾಲ್, ಮಹಿಳೆಯರಿಗಾಗಿ ವಿವಿಧ ವಿನ್ಯಾಸದ ಉಡುಪುಗಳ ಸ್ಟಾಲ್, 1 ಗ್ರಾಂ ಗೋಲ್ಡ್ ಆಭರಣಗಳು, ಫ್ಯಾನ್ಸಿ ವಸ್ತುಗಳು ಸೇರಿದಂತೆ ವೈವಿಧ್ಯಮಯ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ.
ಸಾವಯವ ಕರಿಬೇವಿನ ಎಲೆಯ ಸೋಪ್, ಆದಿವಾಸಿ ಹರ್ಬಲ್ ಹೇರ್ ಆಯಿಲ್, ಆರೋಗ್ಯ ಮತ್ತು ಸೌಂದರ್ಯ ವರ್ಧಕ ಉತ್ಪನ್ನಗಳು, ಸಾವಯವ ಹಾಗೂ ಗೃಹೋಪಯೋಗಿ ಉತ್ಪನ್ನಗಳೂ ವಿವಿಧ ತಳಿಯ ಗಿಡಗಳು ಮೇಳದಲ್ಲಿ ಪ್ರಮುಖ ಆಕರ್ಷಣೆಯಾಗಿವೆ.

