ಪಂಚವರ್ಣದ ಹಸಿರು ಹೆಜ್ಜೆಯೊಂದಿಗೆ ಹೆಜ್ಜೆ ಹಾಕಿದ ಪರಿಸರ ಪ್ರೇಮಿ ದಂಪತಿಗಳು..ಹಂಗಾರಕಟ್ಟೆ ರೋಟರಿ,ಗೋಳಿಬೆಟ್ಟು ಶಾಲೆ ಸಂಯೋಜನೆ ಯಶಸ್ವಿ..

ಪಂಚವರ್ಣ ಸಂಘಟನೆ ಕೋಟ ಇದರ ಹಸಿರು ಹೆಜ್ಜೆ ಪರಿಸರಸ್ನೇಹಿ 311ನೇ ವಾರದ ಅಭಿಯಾನ 26.07.2026ರಂದು ಐರೋಡಿ ಪರಿಸರದಲ್ಲಿ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ,ಗೋಳಿಬೆಟ್ಟು ಶಾಲೆ ಸಂಯೋಜನೆಯೊಂದಿಗೆ ಗೀತಾನಂದ ಫೌಂಡೇಶನ್ ಮಣೂರು,ಅನ್ನಪೂರ್ಣ ನರ್ಸರಿ ಪೇತ್ರಿ ಇವರುಗಳು ಕೊಡ ಮಾಡಿದ ಗಿಡಗಳನ್ನು ಅರ್ಥಪೂರ್ಣವಾಗಿ ಮನೆ ಮನೆಗೆ ಕೊಂಡ್ಯೊಯ್ದು ನೆಟ್ಟು ಜಾಗೃತಿ ಮೂಡಿಸುವ ಪ್ರಯತ್ನ ಯಶಸ್ವಿಗೊಂಡಿತು.

ಕಾರ್ಯಕ್ರಮದಲ್ಲಿ ವಿಶೇಷವಾಗಿ ಪರಿಸರಪ್ರೇಮಿ ದಂಪತಿಗಳಾದ ಅಕ್ಷತಾ ಅವಿನಾಶ್ ಕಾಮತ್ ದಂಪತಿಗಳು ಮಂಜಾನೆಯೇ ಸಾಸ್ತಾನಕ್ಕೆ ಆಗಮಿಸಿ ಗಿಡ ನೆಡುವ ಕಾರ್ಯಕ್ಕೆ ಕೈಜೋಡಿಸಿತು.ಅಭಿಯಾನಕ್ಕೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಗೋಳಿಬೆಟ್ಟು, ರಾಜೇಶ್ ಪೂಜಾರಿ,ರೋಟರಿ ಕ್ಲಬ್ ಅಧ್ಯಕ್ಷೆ ಕುಸುಮಾ ಮನೋಜ್ ಸಹಕರಿಸಿದರು..

Leave a Reply

Your email address will not be published. Required fields are marked *