ಮೆಕ್ಕೆಕಟ್ಟು ನಂದಿ ಪ್ರಸಂಗ ಬಿಡುಗಡೆ ಮತ್ತು ಸನ್ಮಾನ

  ಪುರಾಣ ಮತ್ತು ಇತಿಹಾಸ ಪ್ರಸಿದ್ಧ ಶಿರಿಯಾರ ಮೆಕ್ಕೆಕಟ್ಟು ಶ್ರೀ ನಂದಿಕೇಶ್ವರ ಯಕ್ಷಗಾನ ಮಂಡಳಿಯ ಈ ಸಾಲಿನ ತಿರುಗಾಟಕ್ಕೆ ಯಕ್ಷಕವಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಿವಿ ಆನಂದ ಸಾಲಿಗ್ರಾಮ ವಿರಚಿತ 75th ಯಕ್ಷಗಾನ ಪ್ರಸಂಗವನ್ನು ನವೆಂಬರ್ 24ರಂದು ಮೆಕ್ಕೆ ಕಟ್ಟು ಕ್ಷೇತ್ರದ ಧರ್ಮದರ್ಶಿ ಮತ್ತು ಜಿಲ್ಲಾ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೊಳ್ಕೆಬೈಲು ಕಿಶನ್ ಹೆಗಡೆಯವರು ಬಿಡುಗಡೆ ಮಾಡಿ ಮೇಳದ ಭಾಗವತರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮೇಳದ ಮತ್ತು ಕ್ಷೇತ್ರದ ವತಿಯಿಂದ ಪ್ರಸಂಗಕರ್ತರನ್ನು ಸನ್ಮಾನಿಸಲಾಯಿತು. ಬಳಿಕ ಮೆಕ್ಕೆಕಟ್ಟು ನಂದಿ ನೂತನ ಯಕ್ಷಗಾನ ಪ್ರಸಂಗವು ಜನಮನ ಸೂರೆ ಗೊಳ್ಳುವಂತೆ ಅದ್ದೂರಿಯಾಗಿ ಪ್ರದರ್ಶಿತಗೊಂಡಿತು. ಈ ಸಂದರ್ಭದಲ್ಲಿ ಕ್ಷೇತ್ರದ ಹಿರಿಯರಾದ ಕೊಳ್ಕೆಬೈಲು ಪ್ರಸಾದ್ ಶೆಟ್ಟಿ, ಮೇಳದ ಯಜಮಾನರಾದ ರಂಜಿತ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *