ಬೆಳ್ಳೆ ಕಟ್ಟಿಂಗೇರಿ ನವೋದಯ ಒಕ್ಕೂಟದಿಂದ ಆಟಿದಲೇಸ್ 2026

ನವೋದಯ ಒಕ್ಕೂಟ ವತಿಯಿಂದ ಗೀತಾ ಮಂದಿರದಲ್ಲಿ ಆಯೋಜಿಸಲಾದ ಆಟಿದ ಲೇಸ್ ಕಾರ್ಯಕ್ರಮವು ಅತ್ಯಂತ ವಿಜ್ರಂಭಣೆಯಿಂದ ಯಶಸ್ವಿಯಾಗಿ ಸಂಪನ್ನಗೊಂಡಿತು. ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿವೃತ್ತ ಆಡಳಿತ ನಿರ್ದೇಶಕರಾದ ಅಣ್ಣಯ್ಯ ಸೇರಿಗಾರ್, ದೀಪ ಬೆಳಗಿಸಿ ಉದ್ಘಾಟಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಬೆಳ್ಳೆ ಸಿಎ ಬ್ಯಾಂಕಿನ ಅಧ್ಯಕ್ಷರಾದ ಶಿವಾಜಿ ಎಸ್ ಸುವರ್ಣ ಸ್ವಾಗತವನ್ನು ನೆರವೇರಿಸಿ, ಆಟಿದ ಲೇಸ್ ಕಾರ್ಯಕ್ರಮ ಒಂದು ಆಚರಣೆಯಲ್ಲ, ಅದು ತುಳುನಾಡಿನ ಸಂಸ್ಕೃತಿ ಪರಂಪರೆ ಮತ್ತು ಸಾಮಾಜಿಕ ಸಾಮರ್ಥ್ಯವನ್ನು ಬಿಂಬಿಸುವ ಹಬ್ಬ. ಇಂತಹ ಕಾರ್ಯಕ್ರಮ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವ ಮೂಲಕ ಮುಂದುವರಿಸಬೇಕಾಗಿದೆ ಎಂಬುದಾಗಿ ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಅಣ್ಣಯ್ಯ ಸೇರಿಗಾರರವರು ಆಟಿ ತಿಂಗಳ ವಿಶೇಷತೆ ಕುರಿತು ಮಾಹಿತಿಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಅತಿಥಿಗಳಾದ ಅಣ್ಣಯ್ಯ ಸೇರಿಗಾರ್ , ಪ್ರಿಯದರ್ಶಿನಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರಾದ ಸುರೇಂದ್ರ ರಾವ್ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿ ಬೆಳ್ಳೆ ಕಟ್ಟಿಂಗೇರಿ ಇದರ ಅಧ್ಯಕ್ಷರಾದ ಸುಜಾತ ಸುವರ್ಣ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನವೋದಯ ಒಕ್ಕೂಟದ ಅಧ್ಯಕ್ಷ ಹರಿಶ್ಚಂದ್ರ ಆಚಾರ್ಯ, ಅತಿಥಿ ದೇವದಾಸ್, ನವೋದಯ ತಾಲೂಕು ಸೂಪರ್ ಕೃಷ್ಣ ಸಾಲಿಯಾನ್, ಚಾರ್ಲ್ಸ್ ಕ್ವಾಡ್ರಸ್ , ಒಕ್ಕೂಟ ಪ್ರೇರಕಿ ಗೀತಾ ಶೆಟ್ಟಿ, ಕಾರ್ಯದರ್ಶಿ ರಂಜನಿ ಹೆಗಡೆ, ಕೋಶಾಧಿಕಾರಿ ಅಂಬಿಕಾ ಉಪಸಿತರಿದ್ದು ಸುಜಾತ ಸುವರ್ಣ ನಿರೂಪಣೆಯನ್ನು ಮಾಡಿದರು.

Leave a Reply

Your email address will not be published. Required fields are marked *