ತುಳುವಿಗೆ ಹೆಚ್ಚುವರಿ ಆಡಳಿತ ಭಾಷೆ ಮಾನ್ಯತೆ: ಸರಕಾರಕ್ಕೆ ಧನ್ಯವಾದ ಸಲ್ಲಿಸಿದ ಜನನಿ ದಿವಾಕರ ಶೆಟ್ಟಿ
ನಮ್ಮ ಕರಾವಳಿಯ ಬಹುದಿನದ ಕನಸು ನನಸಾಗಿದೆ. ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರ ತುಳು ಭಾಷೆಗೆ ಕರ್ನಾಟಕದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ನೀಡಿರುವುದು ಐತಿಹಾಸಿಕ ತೀರ್ಮಾನ.ತುಳು ಕೇವಲ ಭಾಷೆಯಲ್ಲ, ಇದು ನಮ್ಮ ಸಂಸ್ಕೃತಿ, ನಮ್ಮ ಅಸ್ಮಿತೆ, ನಮ್ಮ ತಾಯಿಯ ಉಸಿರು. ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳುವಿಗೆ ಈ ಗೌರವ ಈ ಹಿಂದೆಯೇ ಸಿಗಬೇಕಿತ್ತು.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜನರ ದಶಕಗಳ ಹೋರಾಟಕ್ಕೆ ಸಿಕ್ಕಿದ ಜಯ ಇದು. ಈ ನಿರ್ಧಾರಕ್ಕಾಗಿ ಶ್ರಮಿಸಿದ ಎಲ್ಲಾ ತುಳು ಸಂಘಟನೆಗಳು, ಸಾಹಿತಿಗಳು, ಹೋರಾಟಗಾರರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.ಕರ್ನಾಟಕ ಸರ್ಕಾರ ತುಳು ಭಾಷೆಯ ಬೆಳವಣಿಗೆಗೆ ವಾರ್ಷಿಕ 82 ಲಕ್ಷ ಅನುದಾನ ಘೋಷಿಸಿರುವುದನ್ನು ನಾವು ಸ್ವಾಗತಿಸುತ್ತೇವೆ.ಈ ತೀರ್ಮಾನವು ತುಳು ಭಾಷೆಯನ್ನು ಭಾರತ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಹೋರಾಟಕ್ಕೆ ದೊಡ್ಡ ಶಕ್ತಿ ನೀಡಲಿದೆ.ನಮ್ಮ ಸರ್ಕಾರ ಜನರ ಭಾವನೆಯನ್ನೂ, ಬದುಕನ್ನೂ ಗೌರವಿಸುತ್ತದೆ ಎಂಬುದಕ್ಕೆ ಇದೇ ಸಾಕ್ಷಿ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತುಳುನಾಡಿನ ಪರವಾಗಿ ಅನಂತ ಕೃತಜ್ಞತೆಗಳು.
ಜೈ ಕರ್ನಾಟಕ, ಜೈ ತುಳುನಾಡು.
ಜನನಿ ದಿವಾಕರ ಶೆಟ್ಟಿಅಧ್ಯಕ್ಷರು, ಜಯಕರ್ನಾಟಕ ಜನಪರ ಸಂಘಟನೆ,ಉಡುಪಿ ಜಿಲ್ಲೆ

