ದೇವಾಡಿಗ ಸಮಾಜ ಸೇವಾ ಸಂಘ ( ರಿ) ಬೆಲ್ಮನ್ ವಲಯ ಇದರ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ನಂದಳಿಕೆ ಮಾವಿನಕಟ್ಟೆ ಸಂಘದ ಸಭಾಭವನದಲ್ಲಿ ನಡೆಯಿತು
ದೇವಾಡಿಗ ಸಮಾಜ ಸೇವಾ ಸಂಘ ( ರಿ) ಬೆಲ್ಮನ್ ವಲಯ ಇದರ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ನಂದಳಿಕೆ ಮಾವಿನಕಟ್ಟೆ ಸಂಘದ ಸಭಾಭವನದಲ್ಲಿ ನಡೆಯಿತು ಕಾರ್ಯಕ್ರಮವನ್ನು ಚೆನ್ನೆ ಮನೆ ಆಟದ ಮೂಲಕ ಶ್ರೀ ರವಿಶಂಕರ್ ಸೇರಿಗಾರ್ ಮಾಜಿ ಅಧ್ಯಕ್ಷರು ದೇವಾಡಿಗ ಸುಧಾರಕ ಸಂಘ ಕಾರ್ಕಳ ಉದ್ಘಾಟಿಸಿ ನಮ್ಮ ಸಮಾಜ ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಕೂಡ ಎಲ್ಲಾ ಸಮಾಜದಂತೆ ಸದೃಢವಾಗಿ ಬೆಳೆಯಬೇಕು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತುಕೊಟ್ಟು ಇತರ ಸಮಾಜಕ್ಕೆ ಮಾದರಿಯಾಗಬೇಕು ಎಂದು ಹೇಳಿದರು ಉಡುಪಿ ದೇವಾಡಿಗ ಸಂಘದ ಅಧ್ಯಕ್ಷರಾದ ಶ್ರೀ ರತ್ನಾಕರ ದೇವಾಡಿಗ ಮಾತಾಡಿ ಡಿಸೆಂಬರ್ ನಲ್ಲಿ ನಡೆಯುವ ವಿಶ್ವ ಮಹಾ ಸಮ್ಮೇಳನದಲ್ಲಿ ದೇವಾಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸರಕಾರಕ್ಕೆ ನಮ್ಮ ಶಕ್ತಿಯನ್ನು ತೋರಿಸಬೇಕಾಗಿದೆ ಅಲ್ಲದೆ ಡಿಸೆಂಬರ್ 20 ರಂದು ನಮ್ಮ ಸಮಾಜದ ಯಾವುದೇ ಕಾರ್ಯಕ್ರಮವನ್ನು ಇಟ್ಟುಕೊಳ್ಳಬಾರದು ಎಂದು ಈ ಬಗ್ಗೆ ವಿನಂತಿಸಿದರು ಆಟಿಯ ವಿಶೇಷತೆಯ ಬಗ್ಗೆ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ನಿವೃತ್ತ ಮುಖ್ಯ ಶಿಕ್ಷಕರು ಖ್ಯಾತ ವಾಸ್ತುತಜ್ಞರಾದ ಶ್ರೀ ಕೃಷ್ಣ ಮೊಯ್ಲಿ ಆಟಿ ತಿಂಗಳ ಹಿಂದಿನ ಕಷ್ಟದ ದಿನಗಳನ್ನು ನೆನಪಿಸಿದರು ಸಂಘದ ಮಹತ್ವವನ್ನು ಮಹಿಳೆಯರಿಗೆ ತಿಳಿಸಿದರು ಶ್ರೀಮತಿ ಶಾಂತಿ ವಸಂತ್ ಕುಮಾರ್ ನಿಟ್ಟೆ ಇವರು ಶ್ರೀ ದಿ.ವಸಂತ್ ಕುಮಾರ್ ನಿಟ್ಟೆ ಇವರ ಸ್ಮರಣಾರ್ಥ ಪೋಡಿಯಂ ಸಂಘಕ್ಕೆ ನೀಡಿದರುಕಾರ್ಯಕ್ರಮದ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೀ ಜಯರಾಮದೇವಾಡಿಗ ಬೋಳ ಮತ್ತು ರಂಗ ಭೂಮಿ ಕಲಾವಿದ ಖ್ಯಾತ ಕಾಮಿಡಿ ಕಿಲಾಡಿ ಖ್ಯಾತಿಯ ಸಂದೀಪ್ ದೇವಾಡಿಗ ಇವರನ್ನು ಅಭಿನಂದಿಸಲಾಯಿತು ಕಾರ್ಯಕ್ರಮದ ನಂತರ ಖ್ಯಾತ ಗಾಯಕರಾದ ಶರತ್ ದೇವಾಡಿಗ ಕಡಂದಲೆ ಇವರ ರಸಮಂಜರಿ ಕಾರ್ಯಕ್ರಮ ನಡೆಯಿತು ಅಧ್ಯಕ್ಷತೆಯನ್ನು ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಉಷಾ ವಿಠಲ್ ದೇವಾಡಿಗ ಬೆಳ್ಮಣ್ ವಯಸಿದ್ದರುವಾಸ್ತವಿಕ ಭಾಷಣವನ್ನು ಶ್ರೀಮತಿ ಶುಭ ಗಣೇಶ್ ದೇವಾಡಿಗ ಮಾತಾಡಿದರು ಸಂಘದ ಅಧ್ಯಕ್ಷರಾದ ಶ್ರೀ ಸುನಿಲ್ ದೇವಾಡಿಗ ಬೋಳ ಸ್ವಾಗತಿಸಿದರು ಕಾರ್ಯಕ್ರಮದಲ್ಲಿ ಶ್ರೀ N.ಕೆ ಶ್ರೀಧರ್ ದೇವಾಡಿಗ ಅಧ್ಯಕ್ಷರು ಕಟ್ಟಡ ಸಮಿತಿ ಹಿರಿಯರಾದ ಶ್ರೀ ಭೋಜ ದೇವಾಡಿಗ ನಂದಳಿಕೆ ಗೌರವಾಧ್ಯಕ್ಷರಾದ ರಾಜೇಶ್ ದೇವಾಡಿಗ ನಂದಳಿಕೆ ನೀನಾದ ವಾದ್ಯ ಸಂಗೀತ ಶಾಲೆಯ ಸಂಚಾಲಕರಾದ ಶ್ರೀ ಸುನಿಲ್ ದೇವಾಡಿಗ ಸೂಡ ಶಿಕ್ಷಕರಾದ ಶ್ರೀ ಸುಧಾಕರ್ ದೇವಾಡಿಗ ಎಳ್ಳಾರೆ ಶ್ರೀಮತಿ ಜ್ಯೋತಿ ಶ್ರೀಧರ್ ದೇವಾಡಿಗ ಕುಮಾರಿ ಯಶೋಧ ದೇವಾಡಿಗ ನಂದಳಿಕೆ ಶ್ರೀ ಪ್ರದೀಪ್ ದೇವಾಡಿಗ ಸೂಡ ನಿತಿನ್ ದೇವಾಡಿಗ ಸೂಡ ಉಪಸ್ಥಿತರಿದ್ದರು ಕಾರ್ಯಕ್ರಮದ ಕೊನೆಯದಾಗಿ ಶ್ರೀ ವಸಂತ ದೇವಾಡಿಗ ನಂದಳಿಕೆ ಧನ್ಯವಾದ ಸಲ್ಲಿಸಿದರು ಕಾರ್ಯಕ್ರಮವನ್ನು ಶ್ರೀ ಸತೀಶ್ ದೇವಾಡಿಗ ಬೆಳ್ಮಣ್ಣು ನಿರೂಪಿಸಿದರು ಸುಮಾರು ಹದಿಮೂರು ಗ್ರಾಮಗಳಿಂದ 40 ಬಗೆಯ ತಿಂಡಿ ತಿನಿಸುಗಳನ್ನು ಮಹಿಳೆಯರು ತಂದು ಸಹಕರಿಸಿದರು

