ಗೆಳೆಯರ ಬಳಗ (ರಿ ) ಆನಗಳ್ಳಿಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆ
ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಗೆಳೆಯರ ಬಳಗ ಕಲಾಮಂದಿರದಲ್ಲಿ ಸ್ವತಂತ್ರೋತ್ಸವವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು.. ಆ ಪ್ರಯುಕ್ತ ಧ್ವಜಾರೋಹಣವನ್ನು,ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ನಿವೃತ್ತ ನೌಕರ ರಾದ *ನಾರಾಯಣ* ಅವರು ನೆರವೇರಿಸಿದರು.. ಶಾಲಾ ವಿದ್ಯಾರ್ಥಿಗಳು ಧ್ವಜ ಗೀತೆ ಹಾಡಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು.. ಈ ಸಂದರ್ಭದಲ್ಲಿ ಆನಗಳ್ಳಿಯ ಆಶಾ ಕಾರ್ಯಕರ್ತೆಯರಾದ ಶ್ರೀಮತಿ ನಾಗರತ್ನ ಹಾಗೂ ಪುಲ್ಮೇಲಾ ಅವರು ಉಪಸ್ಥಿತರಿದ್ದರು, ಹಾಗೆ ಗೆಳೆಯರ ಬಳಗದ ಮುಖ್ಯ ಸಲಹೆಗಾರರು, ಹಾಗೂ ಆನಗಳ್ಳಿಯ ಗ್ರಾಮಸ್ಥರು ಉಪಸ್ಥಿತರಿದ್ದರು.. ಬಳಿಕ ಬಸ್ರುರು ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ನಿವೃತ್ತ ನೌಕರರಾದ *ನಾರಾಯಣ* ಇವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು… ಕಾರ್ಯಕ್ರಮದ ನಿರೂಪಣೆಯನ್ನು ಮಂಜುನಾಥ ಹೆಬ್ಬಾರ್ ಇವರು ನೆರೆವೇರಿಸಿದರು..ಧ್ವಜಾರೋಹಣ ಕಾರ್ಯಕ್ರಮಕ್ಕೆ ಸುಸಜ್ಜಿತವಾಗಿ ವ್ಯವಸ್ಥೆ ಮಾಡಿಕೊಟ್ಟಂತಹ ಶರತ್ ಎಲ್, ಕಾಂಚನ್. ರಿಜಾಯ್ಸ್ ಗ್ರೂಪ್ ಮಾಲೀಕರು ಹಾಗೂ ಸರ್ವ ಸಿಬ್ಬಂದಿ ವರ್ಗಕ್ಕೂ, ನಮ್ಮೊಂದಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ. ಬಳಿಕ ಸಿಹಿತಿಂಡಿಯನ್ನು ವಿತರಿಸಲಾಯಿತು..

