ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) : 2025/2026 ನೇ ವಾರ್ಷಿಕ ಮಹಾಸಭೆ

ವಾರ್ಷಿಕ ಮಹಾಸಭೆ : ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಸಂಘದ 2025/2026 ನೇ ವಾರ್ಷಿಕ ಮಹಾಸಭೆಯು ದಿನಾಂಕ 12-09-2026 ರಂದು “ಸೌಹಾರ್ಧ ಸಭಾಂಗಣ” ಕೊಳಲಾಗಿರಿ ಸಂಘದ ಅಧ್ಯಕ್ಷರಾದ ಎನ್. ರಮೇಶ ಶೆಟ್ಟಿರವರ ಅಧ್ಯಕ್ಷತೆಯಲ್ಲಿ ಮಹಾಸಭೆ ಜರಗಿತು.

ಮಹಾಸಭೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಸಂದೀಪ ಶೆಟ್ಟಿ ರವರು 2025/2026 ನೇ ಸಾಲಿನ ವರದಿ ಮಂಡಿಸಿದರು. ಸಂಘವು ವರದಿ ಸಾಲಿನಲ್ಲಿ 333 ಕೋಟಿ ವ್ಯವಹಾರ ನಡೆಸಿ, ಉತ್ತಮ ಪ್ರಗತಿ ಸಾಧಿಸಿದೆ. ಠೇವಣಾತಿಯು 103 ಕೋಟಿ 80 ಲಕ್ಷ ದಾಟಿದ್ದು, 74 ಕೋಟಿ 60 ಲಕ್ಷ ಸಾಲ ಹೊರ ಬಾಕಿ ಇರುತ್ತದೆ. ವರದಿ ಸಾಲಿನಲ್ಲಿ ಶೇಕಡಾ 96% ರಷ್ಟು ಸಾಲ ವಸೂಲಾಗಿದ್ದು ಶೇಕಡಾ 4% ರಷ್ಟು ಸುಸ್ತಿ ಸಾಲ ಬಾಕಿ ಇರುತ್ತದೆ. ವರದಿ ಸಾಲಿನಲ್ಲಿ 1 ಕೋಟಿ 12 ಲಕ್ಷ ಲಾಭ ಗಳಿಸಿದ್ದು, ಸತತವಾಗಿ 27 ವರ್ಷಗಳಿಂದ ‘ಎ” ಶ್ರೇಣಿಯಲ್ಲಿ ಮುಂದುವರಿಯುತ್ತಿದೆ. ಸುಮಾರು 39 ಕೋಟಿ ಹಣವನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ವಿವಿಧ ರೀತಿಯ ಠೇವಣಾತಿ ರೂಪದಲ್ಲಿ ವಿನಿಯೋಗ ಮಾಡಿರುತ್ತೇವೆ ಎಂದು ವರದಿಯಲ್ಲಿ ವಿವರಿಸಿದರು. 2025/26 ನೇ ಸಾಲಿನ ವರದಿ ಮತ್ತು ಆರ್ಥಿಕ ತಃಖ್ತೆ, ಲಾಭ ವಿಂಗಡಣೆ, ಮುಂದಿನ ಸಾಲಿನ 2026/27 ರ ಬಜೆಟ್ ಮಂಜೂರಾತಿಗೆ, ಬೈಲಾ ತಿದ್ದುಪಡಿಗೆ ಅನುಮೋದನೆ ಪಡೆಯಲಾಯಿತು.

ಅಧ್ಯಕ್ಷರ ಭಾಷಣದಲ್ಲಿ ಎನ್. ರಮೇಶ ಶೆಟ್ಟಿರವರು ಸಂಸ್ಥೆಗೆ ಸಾಧನೆಯ ನೆಲೆಯಲ್ಲಿ ಈ ವರೆಗೆ ಸತತವಾಗಿ ರಾಜ್ಯ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ದೊರಕುತಿದ್ದು ಪ್ರಸ್ತುತ ಸಾಲಿನಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಾಧನ ಪ್ರಶಸ್ತಿ ದೊರಕಿರುವ ಸಂತಸಕ್ಕೆ ಗ್ರಾಹಕರೆಲ್ಲರಿಗೂ ಮೆಚ್ಚುಗೆ ವ್ಯಕ್ತಪಡಿಸಿದರು. ಉಪ್ಪೂರು ಮತ್ತು ಹಾವಂಜೆ ಕೇವಲ 2 ಗ್ರಾಮದ ಕಾರ್ಯವ್ಯಾಪ್ತಿಗೆ ಒಳಪಟ್ಟು ವ್ಯವಹಾರ ನಡೆಸಿ ಮುನ್ನಡೆಯುತ್ತಿರುವ ಸಂಘದ ಪ್ರಗತಿಯಲ್ಲಿ ಠೇವಣಾತಿ ಸಂಗ್ರಹಣೆ, ಸಾಲ ವಸೂಲಾತಿ, ಸಂಘದ ನಿರ್ವಹಣೆಗೆ ಸಹಕಾರ ನೀಡಿದ ಎಲ್ಲಾ ಸದಸ್ಯರಿಗೂ, ಗ್ರಾಹಕರಿಗೂ, ಠೇವಣಾತಿದಾರರಿಗೂ, ಸಾಲಗಾರ ಸದಸ್ಯರಿಗೂ, ಸಿಬ್ಬಂದಿ ವರ್ಗದವರಿಗೂ ಅಭಿನಂದನೆ ಸಲ್ಲಿಸಿದರು. ಸಂಘವು ಗಳಿಸಿದ ಲಾಭದಂತೆ ಸದಸ್ಯರಿಗೆ ಶೇಕಡಾ 15% ಡಿವಿಡೆಂಡು ಘೋಷಣೆ ಮಾಡಿದರು.

ಸದಸ್ಯರಿಂದ ಬಂದ ಸಲಹೆ ಸೂಚನೆಗಳಿಗೆ ಸಭೆಯಲ್ಲಿ ಆರೋಗ್ಯಕರ ಚರ್ಚೆ ನಡೆಸಲಾಯಿತು. “ಸಹಕಾರ ರತ್ನ” ಪ್ರಶಸ್ತಿ ಪಡೆದ ಸಂಘದ ಅಧ್ಯಕ್ಷರಾದ ಎನ್. ರಮೇಶ್ ಶೆಟ್ಟಿ, ದೇಹದಾನಿ ರಕ್ತದಾನಿ ನಿರ್ದೇಶಕರಾದ ರಮೇಶ್ ಕರ್ಕೇರಾ ಉಗ್ಗೆಲ್ ಬೆಟ್ಟು ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಸಂಘದ ಸದಸ್ಯರ ಮಕ್ಕಳಲ್ಲಿ ಹಾಗೂ ಸದಸ್ಯರಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾಕ್ಟರ್ ಸಂದೇಶ್ ಶೆಟ್ಟಿ ಹಾವಂಜೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗೋವಿಂದ ಭಂಡಾರಿ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಮಂಜುಳಾ ಜಯಕರ್, ಪಿಯುಸಿಯಲ್ಲಿ ರಾಜ್ಯಕ್ಕೆ ಏಳನೇ ರೇಂಕ್ ಪಡೆದ ನಿಶಾ ಎಸ್, ಹಾಗೂ ಸಿ ಎಸ್ ಉತ್ತೀರ್ಣರಾದ ವಿಂಧ್ಯಾ ಶೆಟ್ಟಿ, ಕ್ರೀಡಾ ಸಾಧಕಿ ಶಿಯಾನ ಡಿ ಅಲ್ಮೇಡ, ರವರನ್ನು ಸನ್ಮಾನಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವಜನ ಮಂಡಲ ಉಪ್ಪೂರು ಹಾಗೂ ಯುವ ವಿಚಾರ ವೇದಿಕೆ ಕೊಳಲಗಿರಿ ಸಮಾಜಸೇವಾ ಸಂಘವನ್ನು ಗುರುತಿಸಿ ಅಧ್ಯಕ್ಷರು ಕಾರ್ಯದರ್ಶಿ ರವರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯರ ಮಕ್ಕಳಿಗೆ ನೀಡುವ ಸ್ಕಾಲರ್‌ಶಿಪ್ ಬಗ್ಗೆ ಪ್ರತಿಭಾನ್ವಿತ 65 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಅನಾರೋಗ್ಯದಲ್ಲಿರುವ ಸದಸ್ಯರ ವೈದ್ಯಕೀಯ ಆರೋಗ್ಯ ಚಿಕಿತ್ಸೆಗೆ ಆರ್ಥಿಕ ನೆರವಿನ ಚಕ್ಕನ್ನು ವಿತರಿಸಲಾಯಿತು.

ಸಂಘದ ಅಧ್ಯಕ್ಷರಾದ ಎನ್. ರಮೇಶ್ ಶೆಟ್ಟಿ, ನಿರ್ದೇಶಕರಾದ ಯು. ಹೂವಯ್ಯ ಸೇರ್ವೆಗಾರ್, ಪ್ರಪುಲ್ಲಚಂದ್ರ, ದೋಗು ಪೂಜಾರಿ ಸುರೇಶ್ ಸುವರ್ಣ, ಪರಮೇಶ್ವರ ಯು,, ಪ್ರೇಮಾ ಲೂವಿಸ್, ವಿದ್ಯಾ ಜಯರಾಮ ಶೆಟ್ಟಿ, ರಮೇಶ್ ಕರ್ಕೆರಾ, ಜಯಕರ ಆಚಾರ್, ಗುಣಕರ ನಾಯ್ಕ, ಕರುಣಾಕರ ಪೂಜಾರಿ, ವ್ರತ್ತಿಪರ ಶಂಕರ ಶೆಟ್ಟಿ, ವಲಯ ಮೇಲ್ವಿಚಾರಕರಾದ ಕೆ. ರಾಜಾರಾಮ್ ಶೆಟ್ಟಿ ಉಪಸ್ಥಿತರಿದ್ದರು. ಸದಸ್ಯರಾದ ವನಿತಾ ಆಚಾರ್ ಪ್ರಾರ್ಥನೆ ಮಾಡಿ, ನಿರ್ದೇಶಕರಾದ ಪ್ರೇಮಾ ಲೂವಿಸ್ ರವರು ಸ್ವಾಗತಿಸಿ, ನಿರ್ದೇಶಕರಾದ ಪ್ರಫುಲ್ಲಚಂದ್ರ ರವರು ಸಂಘದ ಸದಸ್ಯರು ಸಭೆಗೆ ಭಾಗವಹಿಸಿ ಯಶಸ್ವೀ ನಿರ್ವಹಣೆಗೊಳಿಸಿದ ಸರ್ವ ಸದಸ್ಯರನ್ನು ಅಭಿನಂದಿಸಿ ವಂದನಾರ್ಪಣೆ ಗೈದರು.

Leave a Reply

Your email address will not be published. Required fields are marked *