ನಿವೃತ್ತ ಶಿಕ್ಷಕ ಶ್ರೀಕಾಂತ ಅಧಿಕಾರಿ ಗುರುಗಳಿಗೆ ಸನ್ಮಾನ
ಇಪ್ಪತ್ತನಾಲ್ಕು ವರ್ಷದ ಹಿಂದೆ 2002ರಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದ, “ಶಿಸ್ತು ಮತ್ತು ಶಿಕ್ಷಣಕ್ಕೆ ಹೆಸರಾದ ಕೋಟ “ *ವಿವೇಕ ಬಾಲಕರ ಪ್ರೌಢಶಾಲೆ” VJC Kota* ಯಲ್ಲಿ ಕಲಿತ ವಿದ್ಯಾರ್ಥಿಗಳು ರಚಿಸಿಕೊಂಡಿರುವ ” *ವಿವೇಕ ಹೈಸ್ಕೂಲ್ ಬಳಗ-2002″ ವಾಟ್ಸಪ್ ಗ್ರೂಪ್* ಯಿಂದ ಪ್ರತೀ ವರ್ಷ ಶಿಕ್ಷಕರ ದಿನಾಚರಣೆಯ ಅಂಗವಾಗಿ ” ನಮ್ಮ ಮಾಷ್ಟ್ರು ” ಅಭಿಯಾನದಡಿ ಹೈಸ್ಕೂಲ್ ಶಿಕ್ಷಕರಾಗಿದ್ದು, ನಿವೃತ್ತಿಯಾಗಿರುವ ಒಬ್ಬರು ಶಿಕ್ಷಕರ ಮನೆಗೇ ತೆರಳಿ, ಕುಶಲೋಪರಿ ವಿಚಾರಿಸಿ, ತಮ್ಮ ತಮ್ಮ ವೃತ್ತಿ ಪರಿಚಯಿಸಿಕೊಂಡು ಗುರುವಂದನೆ ಸಲ್ಲಿಸಲಾಯಿತು .
ಈ ಬಾರಿ ಗಣಿತ ಅಧ್ಯಾಪಕರಾಗಿದ್ದ ಶ್ರೀ ಶ್ರೀಕಾಂತ ಅಧಿಕಾರಿ- ಇವರ ಮನೆಗೆ ತೆರಳಿ, ಗ್ರೂಪಿನ ಪುರೋಹಿತ ಮಿತ್ರರ ಮಂತ್ರಘೋಷದೊಂದಿಗೆ ಶಾಲು ಹೊದೆಸಿ, ಫಲವಸ್ತು, ಸ್ಮರಣಿಕೆನೀಡಿ ಆಶೀರ್ವಾದ ಪಡೆದುಕೊಂಡುರು, ಹಾಗೇ ತಾವು ಹೈಸ್ಕೂಲು ಸಮಯದಲ್ಲಿ ಮಾಡಿದ ತಮಾಷೆ, ಪೆಟ್ಟುತಿಂದ ಬಗೆ ಎಲ್ಲಾ ನೆನಪಿಸಿಕೊಂಡು ಸಂತೋಷಪಡಲಾಯಿತು
ಈ ಸಂದರ್ಭದಲ್ಲಿ ಗ್ರೂಪ್ ನ ವೆಂಕಟೇಶ್ ಐತಾಳ್, ರಾಮಕೃಷ್ಣ ಕೆದಿಲಾಯ, ನಾಗೇಶ್ ಸೋಮಯಾಜಿ, ಪ್ರಸನ್ನ ಭಟ್, ರಾಜೇಶ್ ಆಚಾರ್ಯ, ಪ್ರವೀಣ್ಆಚಾರ್ಯ , ಪ್ರವೀಣ್ ಶೆಟ್ಟಿ, ಗುರುರಾಜ್ ಆಚಾರ್ಯ,ಸುಬ್ರಹ್ಮಣ್ಯ ಸೋಮಯಾಜಿ, , ರೋಹಿತಾಕ್ಷ ಉಪಾಧ್ಯ, ರಿತೇಶ್ ಕಾಮತ್, ಸುಧೀಂದ್ರ ಆಚಾರ್ಯ ಉಪಸ್ಥಿತರಿದ್ದರು, ಪ್ರವೀಣ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು, ರಾಮಕೃಷ್ಣ ಕೆದಿಲಾಯ ವಂದಿಸಿದರು.

