ಹಂಗರಕಟ್ಟೆ -ಸಾಸ್ತಾನ ರೋಟರಿ ಕ್ಲಬ್ಬಿನ ಪ್ರಾಯೋಜಕತ್ವದಲ್ಲಿ ಬ್ರಹ್ಮಾವರ ವಲಯದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ‘ಪ್ರಾಚ್ಯ ಪ್ರಜ್ಞೆ ‘ಕಾರ್ಯಕ್ರಮ

ದಿನಾಂಕ: 12/ 09/2026 ರ ಶನಿವಾರದಂದು ಚೇತನಾ ಪ್ರೌಢಶಾಲೆ, ಹಂಗಾರಕಟ್ಟೆ ಇಲ್ಲಿ, ಹಂಗರಕಟ್ಟೆ -ಸಾಸ್ತಾನ ರೋಟರಿ ಕ್ಲಬ್ಬಿನ ಪ್ರಾಯೋಜಕತ್ವದಲ್ಲಿ ಬ್ರಹ್ಮಾವರ ವಲಯದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ‘ಪ್ರಾಚ್ಯ ಪ್ರಜ್ಞೆ ‘ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಶ್ರೀಮತಿ ಉಮಾ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಬ್ರಹ್ಮವರ ವಲಯ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಹಂಗಾರಕಟ್ಟೆ- ಸಾಸ್ತಾನ ರೋಟರಿ ಕ್ಲಬ್ಬಿನ ಅಧ್ಯಕ್ಷರು,ರೊ. ಕುಸುಮ ಮನೋಜ್ ರವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅಭ್ಯಾಗತರಾಗಿ ಶ್ರೀ ವಿಘ್ನೇಶ್ವರ ಅಡಿಗ,ರೊ. ರಾಜಾರಾಮ್ ಐತಾಳ್, ಶ್ರೀ ಸುರೇಶ್ ಕುಂದರ್, ಶ್ರೀ ನಾಗರಾಜ್ ಭಟ್, ರೊ. ಮನೋಜ್ ಕುಮಾರ್, ರೊ. ಸುಲತಾ ಹೆಗ್ಡೆ,ರೊ. ಲೀಲಾವತಿ, ರೊ. ಮುರಳಿಧರ್ ನಾಯಿರಿ, ರೊ. ಚಂದ್ರನಾಯಿರಿ ಮುಂತಾದವರು ಭಾಗವಹಿಸಿದ್ದರು. ಮುಖ್ಯೋಪಾಧ್ಯರು ಶ್ರೀಮತಿ ಕಲ್ಪನಾ ಅತಿಥಿಗಳನ್ನು ಸ್ವಾಗತಿಸಿದರು, ಶ್ರೀ ನಾಗರಾಜ್ ಭಟ್ ಪ್ರಾಸ್ತಾವಿಕ ಮಾತುಗಳಾಡಿದರು.

ಕನ್ನಡ ಅಧ್ಯಾಪಕ ಶ್ರೀ.ಯಂ ಫಕೀರಪ್ಪ, ಕಾರ್ಯಕ್ರಮ ನಿರೂಪಣೆ ಮಾಡಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಹಂಗಾರಕಟ್ಟೆ -ಸಾಸ್ತಾನ, ಇವರು ಶಾಲೆಗೆ ವೈಟ್ ಪ್ಯಾನಲ್ ಬೋರ್ಡ್ ಅನ್ನು ಕೊಡುಗೆಯಾಗಿ ನೀಡಿದರು. ಇವರಿಗೆ ಸಂಸ್ಥೆಯ ವತಿಯಿಂದ ಮನದಾಳದ ಕೃತಜ್ಞತೆಗಳನ್ನು ಸಲ್ಲಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *