ರಾಜೇಂದ್ರ ಚಕ್ಕೇರ ಅವರ ಗೋಸೇವೆ ನಿಜವಾಗಿಯೂ ಶ್ಲಾಘನೀಯ : ಸಂಸದ ಕೋಟ ಶ್ರೀನಿವಾಸ ಪೂಜಾರಿ

ಬ್ರಹ್ಮಾವರ : ಮಠ ಮಂದಿರಗಳು ಮಾಡುವ ಗೋ ಸೇವೆಯಂತಹ ಸಾಮಾಜಿಕ ಧಾರ್ಮಿಕ ಕೆಲಸಗಳನ್ನು ರಾಜೇಂದ್ರ ಚಕ್ಕೇರ ಎಂಬ ವ್ಯಕ್ತಿ ಏಕಾಂಗಿಯಾಗಿ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ. ಮುನ್ನೂರಕ್ಕೂ ಅಧಿಕ ಸಂಖ್ಯೆಯ ಗೋವುಗಳನ್ನು ಹೊಂದಿರುವ ಕಾಮಧೇನು ಗೋಶಾಲೆಗೆ ದಾನಿಗಳ ಸಹಕಾರ ಅಗತ್ಯವಿದೆ. ಗೋ ಪ್ರೇಮಿಗಳು ಮತ್ತು ಜನರು ಇವರ ಕೆಲಸಕ್ಕೆ ಹೆಚ್ಚಿನ ಸಹಕಾರವನ್ನು ನೀಡಿ ಗೋಮಾತೆಯ ಅನುಗ್ರಹಕ್ಕೆ ಪಾತ್ರರಾಗಬೇಕು ಎಂಬುದಾಗಿ ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿದರು.

ಅವರು ಸೆಪ್ಟೆಂಬರ್ 20ರಂದು ಕಾಮಧೇನು ಗೋಶಾಲಾ ಮಹಾ ಸಂಘ ಟ್ರಸ್ಟ್ (ರಿ) ಇವರ ಆಶ್ರಯದಲ್ಲಿ ಗೋ ಶಾಲೆಯಲ್ಲಿ ಹಲವು ಯೋಜನೆಗೆ ಚಾಲನೆಯನ್ನು ನೀಡಿ ಮಾತುಗಳನ್ನಾಡಿದರು

ಈ ಸಂದರ್ಭದಲ್ಲಿ ಗೋಗ್ರಾಸ ಸೇವೆಯ ಚಾಲನೆ, ನೇಪಿಯರ್ ಹುಲ್ಲಿನ ನಾಟಿಯ ಚಾಲನೆ, ಸ್ಲರಿ ಹೊಂಡದ ಚಾಲನೆ, ಗೋ ದತ್ತು ಸ್ವೀಕಾರ, ಸಣ್ಣಕರುಗಳಿಗೆ ಕೊರಳ ಪಟ್ಟಿ ಚಾಲನೆ ಮತ್ತಿತರ ಕಾರ್ಯಕ್ರಮಗಳು ಗಣ್ಯರಿಂದ ನೆರವೇರಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕಿನ ನಿರ್ದೇಶಕ ಬಾಲಕೃಷ್ಣ ಅಲ್ಸೆ, ಪಶು ಸಂಗೋಪನ ಇಲಾಖೆಯ ಉಪನಿರ್ದೇಶಕರಾದ ಎಂ ಸಿ ರೆಡ್ಡಪ್ಪ, ಪಶು ಸಂಜೀವಿನಿ ವಿಭಾಗದ ಕೆ ಸರ್ವೋತ್ತಮ ಉಡುಪ, ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಯುಟ್ಯೂಬ್ ಚಾನೆಲ್ ನ ಚಂದ್ರಶೇಖರ್ ನಾವುಡ, ಡಾ. ಉದಯ್ ಕುಮಾರ್ ಶೆಟ್ಟಿ, ಡಾ . ಮಂಜುನಾಥ ಅಡಿಗ, ಸ್ಥಳೀಯ ಮುಖಂಡರಾದ ಪ್ರತಾಪ್ ಹೆಗಡೆ ಮಾರಾಳಿ, ಸತೀಶ್ ಶೆಟ್ಟಿ, ಕೊಕ್ಕರ್ಣೆ ಕ್ರಿಯೇಟಿವ್ ಯೂತ್ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.

ಸಂಸ್ಥೆಯ ಮುಖ್ಯಸ್ಥರಾದ ರಾಜೇಂದ್ರ ಚಕ್ಕೇರ ಪ್ರಾಸ್ತಾವಿಕ ಮಾತುಗಳನ್ನ ಅಡಿ ಸ್ವಾಗತಿಸಿದರು. ಶಿಕ್ಷಕರಾದ ಶಶಿಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *