ಬ್ರಹ್ಮಗಿರಿಯಲ್ಲಿ ಜನಜಾಗೃತಿ ಪ್ರಥಮ ತ್ರೈಮಾಸಿಕ ಸಭೆ

ಜನತಾ ಸುದ್ಧಿ ಉಡುಪಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ (ರಿ )ಉಡುಪಿ ತಾಲೂಕು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಸ್ಟ್ (ರಿ )ಉಡುಪಿ ತಾಲೂಕು ಇದರ 2026-27 ನೇ ಸಾಲಿನ ತ್ರೈಮಾಸಿಕ ಪ್ರಥಮ ಸಭೆಯು ಬ್ರಹ್ಮಗಿರಿಯ ಪ್ರಗತಿಸೌಧದ ಸಭಾಭವನದಲ್ಲಿ ಮೇ 28ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಧ್ಯಕ್ಷತೆ ವಹಿಸಿದ ಶ್ರೀ ಸತ್ಯಾನಂದ ನಾಯಕ್ ರವರು ದೀಪ ಬೆಳಗಿಸಿ ಉದ್ಘಾಟನೆಯನ್ನು ನೆರವೇರಿಸಿದರು.
ಗತ ಸಭೆಯ ವರದಿಯನ್ನು ತಾಲೂಕು ವೇದಿಕೆಯ ಕಾರ್ಯದರ್ಶಿಗಳಾದ ಯೋಜನಾಧಿಕಾರಿ ಶ್ರೀ ಸುರೇಂದ್ರ ನಾಯ್ಕ್ ರವರು ವಾಚಿಸಿದರು.
ಎಲ್ಲಾ ವಲಯದ ಮೇಲ್ವಿಚಾರಕರು 2025 – 26 ನೇ ಸಾಲಿನ ಜನಜಾಗೃತಿ ಕಾರ್ಯಕ್ರಮಗಳ ಸಾಧನ ವರದಿಯನ್ನು ಮಂಡಿಸಿದರು.
2026 – 27 ನೇ ಸಾಲಿನ ಕ್ರಿಯಾಯೋಜನೆಯ ಅನುಷ್ಠಾನದ ಕುರಿತು ಕರಾವಳಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿಗಳಾದ ಶ್ರೀ ಗಣೇಶ್ ಆಚಾರ್ಯರವರು ಮಾತಾಡುತ್ತ… ಮೇ 31 ವಿಶ್ವ ತಂಬಾಕು ವಿರೋಧಿ ದಿನಾಚರಣೆ, ಜೂನ್ 26 ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ, ತಾಲೂಕಿನಲ್ಲಿ ಒಟ್ಟು 15 ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ಎಲ್ಲಾ ವಲಯದಲ್ಲಿ ನವಜೀವನ ಸಮಿತಿಗಳನ್ನು ಬಲಪಡಿಸುವುದರ ಜೊತೆಗೆ ತಾಲೂಕು ಮಟ್ಟದ ನವಜೀವನೋತ್ಸವ ಕಾರ್ಯಕ್ರಮ, ಅಕ್ಟೋಬರ್ 2 ಗಾಂಧಿ ಜಯಂತಿ ಕಾರ್ಯಕ್ರಮ, ಹಾಗೂ ತಾಲೂಕು ವೇದಿಕೆಯ ಸಭೆಯ ಬಗ್ಗೆ ವಿವರವಾದ ಮಾಹಿತಿ ನೀಡಿ ವಲಯವಾರು ವಿಂಗಡಣೆಯನ್ನು ಮಾಡಿದರು.
ತಾಲೂಕು ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷರಾಗಿ ಶ್ರೀ ರಾಜು ಪೂಜಾರಿ ಉಪ್ಪೂರು ಇವರು ಸರ್ವಾನುಮತದಿಂದ ಆಯ್ಕೆಯಾದರು.
ಅವರನ್ನು ವೇದಿಕೆಯ ವತಿಯಿಂದ ಪ್ರೀತಿ ಪೂರಕವಾಗಿ ಸ್ವಾಗತಿಸಲಾಯಿತು.
ಅದೇ ರೀತಿ ಎಲ್ಲಾ ವಲಯದ ವಲಯ್ಯಾಧ್ಯಕ್ಷರುಗಳ ಆಯ್ಕೆಯನ್ನು ಮಾಡಲಾಯಿತು. ಉಪ್ಪುರು ನಿಂದ ಶ್ರೀ ಸುನಿಲ್ ಶೆಟ್ಟಿ,ಮಣಿಪಾಲದಿಂದ ಶ್ರೀ ವಸಂತ ಶೆಟ್ಟಿ, ಪೆರ್ಡೂರ್ ನಿಂದ ಶ್ರೀ ಸತೀಶ್ ಶೆಟ್ಟಿ ಅಂಬಾಗಿಲಿನಿಂದ ಶ್ರೀ ಮಹಾಬಲ ಶೆಟ್ಟಿ, ಅಂಬಲಪಾಡಿಯಿಂದ ಶ್ರೀ ಮಹೇಶ್ ಕುಮಾರ್, ಮಲ್ಪೆಯಿಂದ ಉದಯ್ ಕುಮಾರ್ ಶೆಟ್ಟಿ, ಹಿರಿಯಡ್ಕದಿಂದ ಶ್ರೀಮತಿ ನಳಿನಾ ರವರು ಆಯ್ಕೆಯಾದರು.
ಸಭೆಯು ಶ್ರೀಮತಿ ಪ್ರತಿಭಾ ಹಾಗೂ ಶ್ರೀಮತಿ ಚಂದ್ರಾವತಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, ಮೇಲ್ವಿಚಾರಕರಾದ ಶ್ರೀ ಬಾಲಚಂದ್ರ ರವರು ಸ್ವಾಗತಿಸಿದರು. ಶ್ರೀಮತಿ ಪ್ರೇಮ ರವರು ವಂದಿಸಿದರು. ಯೋಜನಾಧಿಕಾರಿಗಳಾದ ಶ್ರೀ ಗಣೇಶ್ ಆಚಾರ್ಯರವರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *