ಎಲ್ಐಸಿ ಕಾಪು : ವಿಮಾ ಪ್ರತಿನಿಧಿಗಳಿಂದ ಅಭಿವೃದ್ಧಿ ಅಧಿಕಾರಿಗೆ ಸೇವಾ ಗೌರವ ಮತ್ತು ಬೀಳ್ಕೊಡುಗೆ

ಕಾಪು : ಭಾರತೀಯ ಜೀವವಿಮಾ ನಿಗಮದ ಕಾಪು ಶಾಖೆಯಲ್ಲಿ ಕಳೆದ 13 ವರ್ಷಗಳಿಂದ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಉತ್ತರ ಕನ್ನಡ ಜಿಲ್ಲೆಯ ಕುಮುಟಾಕ್ಕೆ ಶಾಖಾ ಸಹಾಯಕ ವ್ಯವಸ್ಥಾಪಕರಾಗಿ ಪದೋನ್ನತಿ ಹೊಂದಿದ ಪ್ರವೀಣ್ ಕುಮಾರ್ ಎನ್ ಕೆ ಅವರಿಗೆ ಅವರ ತಂಡದ ವಿಮಾ ಪ್ರತಿನಿಧಿಗಳಿಂದ ಸೇವಾ ಗೌರವ ಮತ್ತು ಬೀಳ್ಕೊಡುಗೆ ಕಾರ್ಯಕ್ರಮವನ್ನು ಕಾಪುವಿನ ಜೆಸಿ ಭವನದಲ್ಲಿ ಹಮ್ಮಿಕೊಳ್ಳಲಾಯಿತು.

ಕಾಪು ಶಾಖೆಯ ಹಿರಿಯ ಶಾಖ ವ್ಯವಸ್ಥಾಪಕ ಬಾಲಚಂದ್ರ ಬಿ ಮತ್ತು ಕುಂದಾಪುರ ಶಾಖೆಯ ಸಹಾಯಕ ವ್ಯವಸ್ಥಾಪಕ, ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ರವರ ಸೇವೆಯ ಬಗ್ಗೆ ಗುಣಗಾನ ಮಾಡಿ, ಶುಭ ಹಾರೈಸಿದರು.ತನ್ನ ತಂಡದ ವಿಮಾ ಪ್ರತಿನಿಧಿಗಳಿಂದ ಸೇವಾ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಎನ್ ಕೆ, ನನ್ನ ತಂಡವು ಒಂದು ಕುಟುಂಬ ಸದಸ್ಯರಂತೆ ಇದ್ದು, ಪ್ರತಿಯೋರ್ವ ಸಾಧನೆ ಮಾಡುವಂತೆ ಮುನ್ನಡೆಸಿದ್ದೀರಿ. ಹಲವು ಸದಸ್ಯರು ಎಲ್ ಐ ಸಿ ಯಲ್ಲಿ ವಿಶೇಷ ಸಾಧನೆ ಮಾಡಿದ್ದೀರಿ. ನನ್ನಿಂದ ಆಗುವ ಸಹಕಾರವನ್ನು ತಮಗೆ ನೀಡಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಅವರ ಪತ್ನಿ ಪಲ್ಲವಿ, ಪುತ್ರಿ ಧ್ವನಿ, ತಂದೆ ಕೃಷ್ಣಮೂರ್ತಿ, ಕಾಪು ಶಾಖೆಯ ಅಭಿವೃದ್ಧಿ ಅಧಿಕಾರಿಗಳು, ಹಿರಿಯ – ಕಿರಿಯ ವಿಮಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ಝೆಡ್ ಎಮ್ ಸದಸ್ಯ ಫೆಲಿಕ್ಸ್ ಡಿಸೋಜಾ ಕೃತಜ್ಞತಾ ಪತ್ರ ವಾಚಿಸಿದರು. ವಿಮಾ ಪ್ರತಿನಿಧಿ ರೂಪೇಶ್ ಸ್ವಾಗತಿಸಿದರೆ, ನವೀನ್ ಕ್ವಾಡ್ರಸ್ ಧನ್ಯವಾದ ಸಮರ್ಪಿಸಿದರು. ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು

Leave a Reply

Your email address will not be published. Required fields are marked *