ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆಯ‌ ಸರದಾರ. ಪ್ರಥ್ವಿಕ್ .ಆರ್. ನಾಯ್ಕ್

ಸಾಧನೆ ಎನ್ನುವುದು ಸಾಧಕನ ಸೊತ್ತು ಹೊರತು ಸೋಮಾರಿಯ ಸೊತ್ತು ಅಲ್ಲ ಎನ್ನುವುದನ್ನು ದೇಶಕ್ಕೆ ತೋರಿಸಿಕೊಟ್ಟ ಕುಂಜಾಲು ಸಮೀಪದ ಹೆರಂಜೆ ಕ್ರಾಸ್ ಬಳಿಯ ರವಿಂದ್ರ ನಾಯ್ಕ್ ಭವಾನಿ ದಂಪತಿಗಳ ಮಗನೇ ಸಾಧನೆಯ ಸಾಧಕ ಪ್ರಥ್ವಿಕ್ ಆರ್.ನಾಯ್ಕ್ .

ದುರ್ಗಾ ಇಂಗ್ಲೀಷ ಮೀಡಿಯಂ ಸ್ಕೂಲ್ ನಲ್ಲಿ 3 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 9 ವರ್ಷ ಪ್ರಾಯದ ಚಿಕ್ಕ ಬಾಲಕ ಕರಾಟೆ ಹಾಗೂ ಕಿಕ್ ಬಾಕ್ಸಿಂಗನಲ್ಲಿ ವಯಸ್ಸಿಗೂ ಮೀರಿದ ಸಾಧನೆ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರನಾಗಿರುತ್ತಾನೆ.ಈ ಚಿಕ್ಕ ವಯಸ್ಸಿನಲ್ಲಿ.ಎಲ್ಲಾ ಕಡೆ ಭಾಗವಹಿಸಿದ ಈ ಪೋರಾ 100 ಕ್ಕೂ ಹೆಚ್ಚು ಪದಕ ಗಳಿಸಿರುತ್ತಾನೆ.

ಉಡುಪಿಯಲ್ಲಿ ನಡೆದ ರಾಷ್ಟೀಯ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕಶಿವಮೊಗ್ಗದಲ್ಲಿ ನಡೆದ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ.ಬೈಂದೂರಿನಲ್ಲಿ ನೆಡೆದ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ.ಮಧ್ಯಪ್ರದೇಶದಲ್ಲಿ ನೆಡೆದ ಇಂಟರ್ ನ್ಯಾಶನಲ್ ಕಿಕ್ ಬಾಕ್ಸಿಂಗ್ ಸ್ಪರ್ಧೆಗೆ ಕರ್ನಾಟಕ ಪ್ರತಿನಿಧಿ ಆಗಿ ಭಾಗವಹಿಸಿ ಜಯಶಾಲಿ ಆಗಿ ಇಂದೋರಿನಲ್ಲಿ ನೆಡೆಯುವ ಸ್ಪರ್ಧೆಗೆ ಆಯ್ಕೆ ಆಗಿರುವುದು ಕರ್ನಾಟಕಕ್ಕೆ ಸಂದ ಗೌರವ.

ಈ ಬಾಲಕ ಸಾಧನೆಯ ಹಿಂದೆ ಮುಖ್ಯ ತರಬೇತಿದಾರರಾದ ವಾಮನ ಪಾಲನ್. ಹಾಗೂ ಪೋಷಕರು ಸಹಕಾರವನ್ನು ನೀಡಿರುತ್ತಾರೆ…ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದು ಹಾರೈಸೋಣ

Leave a Reply

Your email address will not be published. Required fields are marked *