ಶಿಕ್ಷಕರಿಗೆ ಗೌರವ ಸಮರ್ಪಣ ಕಾರ್ಯಕ್ರಮ:
ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಅಶೋಕ್ ತೆಕ್ಕಟ್ಟೆ ಶಿಕ್ಷಕರು ಸ.ಹಿ.ಪ್ರಾ.ಶಾ ಹೆಸ್ಕತ್ತೂರು, ಡಾ| ಶಿವರಾಮ ಕಾರಂತ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ವಿಜಯ ಸ. ಹಿ. ಪ್ರಾ ಶಾ ಹೆಸ್ಕತ್ತೂರು ಹಾಗೂ ರೋಟರಿ ತೆಕ್ಕಟ್ಟೆ ಇವರಿಂದ ನೇಶನ್ ಬಿಲ್ಡರ್ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ಡಿ ಕನ್ನಡ ಭಾಷಾ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಹೆಸ್ಕತ್ತೂರು ಇವರಿಗೆ ಗೌರವ ಸಮರ್ಪಣ ಕಾರ್ಯಕ್ರಮ ಶಾಲೆಯ ಸಭಾಂಗಣದಲ್ಲಿ ಜರುಗಿತು.
ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ಕೆ ಎನ್ ಚಂದ್ರಶೇಖರ್ ಶೆಟ್ಟಿ ನೂಜಿ ಇವರು, ಶಿಕ್ಷಣ ಕ್ಷೇತ್ರದಲ್ಲಿ ಹೊಸತನದೊಂದಿಗೆ, ಸೃಜನಶೀಲ ಚಟುವಟಿಕೆಗಳೊಂದಿಗೆ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕ ತ್ರಯರುಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸ್ಕತ್ತೂರು ಇಲ್ಲಿಯ ಮುಖ್ಯೋಪಾಧ್ಯಾಯರಾದ ಸರೋಜಿನಿ ಹೆಗಡೆ, ಸಹ ಶಿಕ್ಷಕರಾದ ವಿಜಯ, ರವೀಂದ್ರ, ದೈಹಿಕ ಶಿಕ್ಷಣ ಶಿಕ್ಷಕರಾದ ಸಂಜೀವ, ಪ್ರಾಥಮಿಕ ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಸುಧಾಕರ ಕುಲಾಲ್, ಕೊರ್ಗಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಪಲ್ಲವಿ,
ಪ್ರೌಢ ಶಾಲಾ ಎಸ್ಡಿಎಂಸಿ ಸದಸ್ಯರಾದ ರಾಜೇಂದ್ರ ಐತಾಳ್, ಕೃಷ್ಣ ಕೆದ್ಲಾಯ, ರಾಘವೇಂದ್ರ, ಆಶಾ ಕಾರ್ಯಕರ್ತೆ ಸಾಧು, ಪ್ರೌಢ ಶಾಲೆಯ ಶಿಕ್ಷಕರಾದ ರಾಧಿಕಾ, ಉದಯ್ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕರಾದ ಜಯಪ್ರಸಾದ ಶೆಟ್ಟಿ, ದ್ವಿ.ದ.ಸ ಸುಪ್ರೀತ್ ಕಾಮತ್, ಅತಿಥಿ ಶಿಕ್ಷಕಿಯರಾದ ಲಲಿತಾ, ಸ್ವಾತಿ, ನವ್ಯ ಹಾಗೂ ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.
ತಮ್ಮನ್ನು ಗುರುತಿಸಿ ಗೌರವಿಸಿದ್ದಕ್ಕಾಗಿ ಸನ್ಮಾನಿತ ಶಿಕ್ಷಕರು ಕೃತಜ್ಞತಾ ನುಡಿಗಳನ್ನು ಆಡಿದರು. ಸಂಸ್ಥೆಯ ವಿದ್ಯಾರ್ಥಿಗಳಿಗೆ ಸಿಹಿ ಹೋಳಿಗೆಯನ್ನು ವಿತರಿಸಿದರು.
ಪ್ರೌಢಶಾಲೆಯ ಎಸ್ ಡಿ ಎಂ ಸಿ ಯ ಅಧ್ಯಕ್ಷರಾದ ಪುರುಷೋತ್ತಮ ಡಿ ಇವರು ಸಭಾಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಮುಖ್ಯ ಶಿಕ್ಷಕ ಅಬ್ದುಲ್ ರವೂಫ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಹಿರಿಯ ಸಹ ಶಿಕ್ಷಕ ವೆಂಕಟೇಶ ಇವರು ವಂದಿಸಿದರು. ಆಂಗ್ಲ ಭಾಷೆ ಶಿಕ್ಷಕ ಗೋಪಾಲ ಸೋಮಯಾಜಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ವೇದಿಕೆ ಸಿದ್ಧತೆ, ಸಭಾಂಗಣದ ಸಿದ್ಧತೆಯಲ್ಲಿ ಚಿತ್ರಕಲಾ ಶಿಕ್ಷಕರಾದ ಸುಂದರ್ ತೋಡಾರ್ ಇವರು ತೊಡಗಿಸಿಕೊಂಡರು.

