ನವಕಿರಣ್ ನವತಾರೆ ಸೇವಾವೇದಿಕೆಯಲ್ಲಿ ಆಷಾಡ ಸಂಭ್ರಮ
ಬ್ರಹ್ಮಾವರ, ಆಗಸ್ಟ್ 9: ನವಕಿರಣ್ ನವತಾರೆ ಸೇವಾವೇದಿಕೆ ವತಿಯಿಂದ“ಆಷಾಢ ಸಂಭ್ರಮ–2026” ಕಾರ್ಯಕ್ರಮವನ್ನು ಆಗಸ್ಟ್ 9ರಂದು ಭಾನುವಾರ ಶ್ರೀ ದೇವಿ ಪಿಯೂಷ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.ಆಷಾಢ ಮಾಸದ ಸಂಭ್ರಮವನ್ನು ಸಾಂಪ್ರದಾಯಿಕವಾಗಿ ಆಚರಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷರಾದ ಕುಸುಮ ಮನೋಜ್ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಟಿ ಎಂ ಎ ಪೈ ಪ್ರೌಢಶಾಲೆಯ ಕನ್ನಡ ಶಿಕ್ಷಕಿ ಶ್ರೀಮತಿ ಸುರೇಖಾ ಶೆಟ್ಟಿಯವರು ಮಾತನಾಡಿ ಆಷಾಢ ತಿಂಗಳ ವಿಶೇಷತೆ, ಆಚರಣೆಯ ಉದ್ದೇಶ, ಆಷಾಢ ಖಾದ್ಯಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು. ಸಪ್ತಸ್ವರ ಸವಿತಾ ಜೋಗಿಯವರ ಪ್ರಾರ್ಥನೆಯೊಂದಿಗೆ ಈ ಕಾರ್ಯಕ್ರಮವು ಆರಂಭವಾಯಿತು. ಸಂಘದ ಕಾರ್ಯದರ್ಶಿ ನೈನಾ ಜೆ ಶೆಟ್ಟಿಯವರು ಸರ್ವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಸಂಘದ ಸದಸ್ಯರಾದ ಭಾರತಿ ವಂದನಾರ್ಪಣೆ ಮಾಡಿದರು. ಸಂಘದ ಸಂಚಾಲಕರಾದ ಉಮೇಶ್ ಪೂಜಾರಿಯವರು ಮತ್ತು ಎಲ್ಲಾ ಸದಸ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ತುಂಬಾ ಸುಂದರವಾಗಿ ಮೂಡಿ ಬಂತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕರಾವಳಿಯ ಸಾಂಪ್ರದಾಯಿಕ ಖಾದ್ಯಗಳ ಪ್ರದರ್ಶನ ಮತ್ತು ಸವಿಯುವ ವ್ಯವಸ್ಥೆಯಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗನ್ನು ತಂದು ಕೊಟ್ಟರು.

