ರಾಮಕೃಷ್ಣ ಬಿ ಜಿ ಯವರಿಗೆ ಸನ್ಮಾನ
ಲಯನ್ಸ್ ಕ್ಲಬ್ ಕುಂದಾಪುರ ವೆಯಿಟ್ ಝೋನ್ ಇವರ ಆಶ್ರಯ ದಲ್ಲಿ ಕುಂದಾಪುರ ದ ಏನ್ ಏನ್ ಒ ಕಮ್ಯೂನಿಟಿ ಸೆಂಟರ್ ನ ಮಿನಿ ಸಭಾಂಗಣ ದಲ್ಲಿ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲಿನ ಪ್ರಾOಶುಪಾಲರಾದ ರಾಮಕೃಷ್ಣ ಬಿ ಜಿ ಯವರನ್ನು ಸನ್ಮಾನಿಸಲಾಯಿತು.
ಲಯನ್ಸ್ ಕ್ಲಬ್ ಕುಂದಾಪುರ ವೆಯಿಟ್ ಝೋನ್ ನ ಅಧ್ಯಕ್ಷ ರಾದ ಹುಸೇನ್ ಹೈಕಾಡಿ ಅಧ್ಯಕ್ಷ ತೇ ವಹಿಸಿ ಗುರು ಎಂದರೆ ಕೇವಲ ಪಾಠ ಹೇಳಿ ಕೊಡುವ ವ್ಯೆಕ್ತಿ ಯಲ್ಲ, ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳೆಕಿನೆಡೆಗೆ ಮನುಷ್ಯನನ್ನು ಕರೆದೋಯ್ಯುವ ಮಹಾನ್ ಮಾರ್ಗದರ್ಶಕ.ತಂದೆ ತಾಯಿ ನಮಗೆ ಈ ಲೋಕದಲ್ಲಿ ಜನ್ಮ ನೀಡುತ್ತಾರೆ, ಆದರೇ ಬದುಕನ್ನು ಹೇಗೆ ಅರ್ಥ ಪೂರ್ಣವಾಗಿ ನಡೆಸಬೇಕು, ಹೇಗೆ ಯೋಚಿಸಬೇಕು, ಹೇಗೆ ಸತ್ಯ – ನ್ಯಾಯದ ಹಾದಿಯಲ್ಲಿ ನಡೆಯಬೇಕು ಎಂಬುದನ್ನು ಕಲಿಸುವವರು ಗುರುಗಳು. ಆದ್ದರಿಂದ ಸಮಾಜದಲ್ಲಿ ಗುರುವಿಗೆ ಅತ್ಯಂತ ಉನ್ನತ ಮತ್ತು ಗೌರವಾನ್ವಿತ ಸ್ಥಾನವಿದೆ ಎಂದು ಮಾತನಾಡಿದರು.ಸನ್ಮಾನ ಪಡೆದು ಮಾತನಾಡಿದ ರಾಮಕೃಷ್ಣ ಬಿ ಜಿ ಯವರು ಒಬ್ಬ ಗುರು ಕೇವಲ ಪಠ್ಯ ಪುಸ್ತಕದ ಪಾಠವನ್ನು ಕಲಿಸುವುದಿಲ್ಲ, ಅವನು ವ್ಯೆಕ್ತಿತ್ವ ವನ್ನು ರೂಪಿಸುತ್ತಾನೆ, ಪ್ರತಿಭೆಯನ್ನು ಗುರುತಿಸುತ್ತಾನೆ, ಆತ್ಮವಿಶ್ವಾಸ ವನ್ನು ಬೆಳೆಸುತ್ತಾನೆ ಮತ್ತು ಭವಿಷ್ಯದ ದಾರಿಯನ್ನು ತೋರಿಸುತ್ತಾನೆ, ಒಳ್ಳೆಯ ಗುರು ತನ್ನ ವಿದ್ಯಾರ್ಥಿಯೊಳಗೆ ಅಡಗಿರುವ ಸಾಮರ್ಥ್ಯ ವನ್ನು ಗುರುತಿಸಿ, ಅವನ ದೌರ್ಬಲ್ಯ ಗಳನ್ನು ಸರಿಪಡಿಸಲು ಸಹಾಯ ಮಾಡುತ್ತಾನೆ, ಯಶಸ್ವಿ ಯ ಸಂದರ್ಭದಲ್ಲಿ ವಿನಯವನ್ನು ಕಲಿಸುತ್ತಾನೆ.ಗುರುವಿನ ಸೇವೆ ಕೇವಲ ಶಿಕ್ಷಣ ಕ್ಷೇತ್ರಕ್ಕೆ ಸೀಮಿತವಾಗಿಲ್ಲ, ಅದು ಸಮಾಜ ನಿರ್ಮಾಣ ದ ಮಹತ್ವ ದ ಕಾರ್ಯವಾಗಿದೆ ಎಂದು ನುಡಿದರು.
ಸಮಾರಂಭ ದಲ್ಲಿ ಲಯನ್ಸ್ ಕ್ಲಬ್ ಕುಂದಾಪುರ ವೆಯಿಟ್ ಝೋನ್ ನ ನಿಕಟ ಪೂರ್ವ ಅಧ್ಯಕ್ಷ ರಾದ ವಿಜಯ ಭಂಡಾರಿ, ನಿರ್ದೇಶಕ ರಾದ ರಾಘವೇಂದ್ರ ವಿಠಲ್ವಾಡಿ ಕಾರ್ಯದರ್ಶಿ ಪ್ರದೀಪ್ ಬಂಗೇರ ಖಜಾಂಚಿ ಸಂದೀಪ್ ಕಾಮತ್ ಸದ್ಯಸ್ಯರಾದ ಸುಧೀರ್ ನಾಯ್ಕ್, ತ್ರಿ ವಿಕ್ರಮ್ ನಾಯಕ್, ದೀಪಕ್ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.

