ಪಾರಂಪಳ್ಳಿ ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ಇವರಿಂದ ಗುಡ್ಡೆ ಶಾಲೆ ಮಕ್ಕಳಿಗೆ ಕಲಿಕಾ ಪರಿಕರಗಳ ಹಸ್ತಾಂತರ
ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ (ರಿ ).ಪಾರಂಪಳ್ಳಿ ಪಡುಕೆರೆ ಇವರಿಂದ ಸತತ 14 ನೆ ವರ್ಷ ಉಚಿತ ನೋಟ್ ಬುಕ್ ಹಾಗೂ ಕಲಿಕೆ ಪರಿಕರಗಳನ್ನು ಗುಡ್ಡೆ ಶಾಲೆ ಮಕ್ಕಳಿಗೆ ಉಚಿತವಾಗಿ ನೀಡಲಾಯಿತು.ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಶೇಷ ಐತಾಳ ವಹಿಸಿದ್ದರು. ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬಿನ ಗೌರವ ಅಧ್ಯಕ್ಷರಾದ ರಾಜೇಶ್ ಉಪಾಧ್ಯ, ಅಧ್ಯಕ್ಷರಾದ ಕೃಷ್ಣ ದೇವಾಡಿಗ, ಕಾರ್ಯದರ್ಶಿ ಸುಧಾಕರ್ ಪೂಜಾರಿ ಸೇರಿದಂತೆ ಕೃಷ್ಣ. ಪಿ.,ಸುಧೀರ್ ಪೂಜಾರಿ, ಉಲ್ಲಾಸ್ ಪೂಜಾರಿ ಹಾಗೂ ಮುಖ್ಯ ಅತಿಥಿ ಯಾಗಿ ಅಶೋಕ್ ಸೋಮಯಾಜಿ ಅವರು ಉಪಸ್ಥಿತರಿದ್ದರು.

