ತುಳು ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲು ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಮುಖ್ಯಮಂತ್ರಿಗಳಿಗೆ ಮನವಿ

ತುಳು ಭಾಷೆ , ಸಂಸ್ಕೃತಿ, ಹಾಗೂ ಪರಂಪರೆಯ ಉಳಿವು ಮತ್ತು ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ತುಳು ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪನೆ ಮಾಡಬೇಕೆಂದು ಕಾಂಗ್ರೆಸ್ ಮುಖಂಡ, ಸಮಾಜ ಸೇವಕ, ಸಾಮಾಜಿಕ ನ್ಯಾಯದ ಹೋರಾಟಗಾರ, ಬಡವರ ಬಂಧು ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

ತುಳು ಭಾಷೆಯು ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ. ಲಕ್ಷಾಂತರ ಜನರು ಇಂದಿಗೂ ವ್ಯವಹಾರಿಕ ಭಾಷೆಯಾಗಿ ಮತ್ತು ಇತ್ತೀಚೆಗೆ ಗ್ರಾಂಥಿಕ ಭಾಷೆಯಾಗಿ ಬಳಕೆ ಮಾಡುತ್ತಿದ್ದಾರೆ. ತುಳು ನಾಡಿನ ಸಂಸ್ಕೃತಿ, ಪರಂಪರೆ ಮತ್ತು ಜೀವನ ಶೈಲಿಗೆ ತುಳು ಭಾಷೆ ಅವಿಭಾಜ್ಯ ಅಂಗವಾಗಿದೆ. ಹಾಗಾಗಿ ಈ ಭಾಷೆಯ ಅಭಿವೃದ್ಧಿ ಮತ್ತು ಸಂರಕ್ಷಣೆ ಮಾಡಬೇಕಾದ ಅಗತ್ಯತೆ ಇದೆ.

ಕಾರ್ಕಳ ತಾಲ್ಲೂಕಿನಲ್ಲಿ ತುಳು ಭವನ ನಿರ್ಮಾಣ ಮಾಡಬೇಕು. ಯಾಕೆಂದರೆ ಕಾರ್ಕಳದಲ್ಲಿ ತುಳುನಾಡಿನ ಸಾಂಸ್ಕೃತಿಕ ಶಕ್ತಿ ಇದೆ. ಅದರ ಅನಾವರಣ ಈ ಭವನದ ಮೂಲಕ ಆಗಬೇಕಾಗಿದೆ. ಇಲ್ಲಿ ಗ್ರಂಥಾಲಯ, ಸಂಶೋಧನೆ, ಸಭಾಂಗಣ, ವಸ್ತು ಸಂಗ್ರಹಾಲಯ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲು ಅವಕಾಶ ಇರಬೇಕು ಎಂಬುದಾಗಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಮನವಿಯಲ್ಲಿ ಕೋರಿದ್ದಾರೆ.

ರಾಜಕೀಯ ಮತ್ತು ಉದ್ಯಮದ ಒತ್ತಡದ ನಡುವೆ ಕಾರ್ಕಳದಲ್ಲಿ ಭಾಷೆ ಮತ್ತು ಸಂಸ್ಕೃತಿಯ ಹೆಚ್ಚುಗಾರಿಕೆಗೆ ಉದಯ್ ಕುಮಾರ್ ಶೆಟ್ಟಿ ಮಹತ್ವ ನೀಡಿರುವುದು ತುಳುವರಿಗೆ ಮತ್ತು ಸಂಸ್ಕೃತಿಯ ಅನುಪಾಲಕರಿಗೆ ಖುಷಿಯನ್ನು ಉಂಟು ಮಾಡಿದೆ. ಸರಕಾರವು ಉದಯ ಶೆಟ್ಟರ ಈ ಆಶಯವನ್ನು ಜನತೆಯ ಆಶಯ ಎಂದು ಭಾವಿಸಿ ಆದಷ್ಟು ಶೀಘ್ರವಾಗಿ ನೆರವೇರಿಸಲಿ ಎಂದು ಕಾರ್ಕಳ ಜನತೆ ಆಶಿಸಿದ್ದಾರೆ.

Leave a Reply

Your email address will not be published. Required fields are marked *