ಸ್ಯಾಬ್ರ ಕಟ್ಟೆ: ನಿವೃತ ಹಿರಿಯ ಬ್ಯಾಂಕ್ ಅಧಿಕಾರಿ ಗಳಿಗೆ ಸನ್ಮಾನ

ಬ್ಯಾಂಕಿಂಗ್ ಕ್ಷೇತ್ರದಲ್ಲಿ 32 ವರ್ಷಗಳ ಸುದೀರ್ಘ, ನಿಷ್ಠಾವಂತ ಹಾಗೂ ಜನಸ್ನೇಹಿ ಸೇವೆಯನ್ನು ಸಲ್ಲಿಸಿರುವ ದ. ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ ನಿವೃತ ರಾದ  ಹಿರಿಯ ಬ್ಯಾಂಕ್ ಅಧಿಕಾರಿ ಗಳಾದ ಕರುಣಾಕರ್ ದಾಸ್ ಮತ್ತು *ಪ್ರಬೋಧ್ ಚಂದ್ರ ಹೆಜಮಾಡಿ* ಅವರನ್ನು ಸೌತ್ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ (SCDCC Bank), ಸಾಹೇಬರಕಟ್ಟೆ ಶಾಖೆ ವತಿಯಿಂದ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ *ಅಧ್ಯಕ್ಷತೆಯನ್ನು ಬಿ. ಪ್ರದೀಪ್ ಬಲ್ಲಾಳ್, ಅಧ್ಯಕ್ಷರು, ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘ, ಶಿರಿಯಾರ ವಹಿಸಿದ್ದರು. ಶರತ್ ಕುಮಾರ್ ಶೆಟ್ಟಿ, ನಿರ್ದೇಶಕರು, ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘ, ಕೆ. ರಾಜಾರಾಮ್ ಶೆಟ್ಟಿ, ಸಹಕಾರಿ ಸಂಘಗಳ ವಲಯ ಮೇಲ್ವಿಚಾರಕರು,* ಉಡುಪಿ ತಾಲೂಕು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

*ವರದರಾಜ ಶೆಟ್ಟಿ,* ಸಹಾಯಕ ಮಹಾ ಪ್ರಬಂಧಕರು, ಉಡುಪಿ ಮುಖ್ಯ ಶಾಖೆ ಅವರು ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರಲ್ಲದೆ, ಕಾರ್ಯಕ್ರಮದ ನಿರೂಪಣೆಯನ್ನು ನಿರ್ವಹಿಸಿದರು. *ಮಲ್ಯಾಡಿ ಪ್ರವೀಣ್ ಕುಮಾರ್ ಶೆಟ್ಟಿ,* ಶಾಖಾ ವ್ಯವಸ್ಥಾಪಕರು, ಸಾಹೇಬರಕಟ್ಟೆ ಶಾಖೆ ಅವರು ವಂದನಾರ್ಪಣೆ ಸಲ್ಲಿಸಿದರು.

ಈ ಸಂದರ್ಭದಲ್ಲಿ *ಜೀವನ್ ಕುಮಾರ ಶೆಟ್ಟಿ, ಶಾಖಾ ವ್ಯವಸ್ಥಾಪಕರು, ಬ್ರಹ್ಮಾವರ ಶಾಖೆ, ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ *ಚಂದ್ರಶೇಖರ್ ಶೆಟ್ಟಿ, ಶರತ್ ಕುಮಾರ್ ಶೆಟ್ಟಿ, ಸುಭಾಷ್ ಶೆಟ್ಟಿ, ವಿಜಯ ಪೂಜಾರಿ ಹಾಗೂ ರಾಮಕೃಷ್ಣ ಶೆಟ್ಟಿ, ಸಾಹೇಬರಕಟ್ಟೆ ಶಾಖೆಯ ಸಿಬ್ಬಂದಿಗಳಾದ ಭಾಸ್ಕರ ಶೆಟ್ಟಿ, ಗುರುಪ್ರಸಾದ್ ಶೆಟ್ಟಿ, ಮಿಥುನ್ ಮೊಗವೀರ, ಸಚಿನ್, ಧನುಷ್ ಕುಮಾರ್, ಆಶೀಶ್ ಹೆಗ್ಡೆ ಹಾಗೂಉಪಸ್ಥಿತರಿದ್ದರು.

*ಸನ್ಮಾನ ಸ್ವೀಕರಿಸಿದ ಕರುಣಾಕರ್ ಮತ್ತು ಪ್ರಭೋದ್ ಚಂದ್ರ ಹೆಜ್ಮಾಡಿ ಅವರು ತಮ್ಮ 32 ವರ್ಷಗಳ ಸೇವೆಯನ್ನು ಗುರುತಿಸಿ ಗೌರವಿಸಿದ ಎಸ್‌ಸಿಡಿಸಿಸಿ ಬ್ಯಾಂಕ್ ನ ಸಹೋದ್ಯೋಗಿಗಳು ಹಾಗೂ ಸಾಹೇಬರಕಟ್ಟೆ ಶಾಖೆಯ ಸಿಬ್ಬಂದಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.*

ಕಾರ್ಯಕ್ರಮವು ಆತ್ಮೀಯ ಹಾಗೂ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು.

Leave a Reply

Your email address will not be published. Required fields are marked *