ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ಕ್ರೀಡಾ ಸಮವಸ್ತ್ರ ವಿತರಣೆ
*ಪ್ರತಿಭಾ ಪುರಸ್ಕಾರ* 2025-26 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕು. ಅಮೃತಾ ಇವರಿಗೆ ನಗದು ಪುರಸ್ಕಾರ ನೀಡಲಾಯಿತು.
*ಕ್ರೀಡಾಸಮವಸ್ತ್ರ,ವಿಜ್ಞಾನ ಮಾಹಿತಿ ಪುಸ್ತಕ ವಿತರಣೆ*ಶಾಲೆಯ ಖೋ ಖೋ ಪಂದ್ಯಾಟದ ಕ್ರೀಡಾಳುಗಳಿಗೆ ಸಮವಸ್ತ್ರ ಹಾಗೂ ವಿಜ್ಞಾನ ಸಂಘಕ್ಕೆ ವಿಜ್ಞಾನ ಮಾಹಿತಿ ಪುಸ್ತಕಗಳನ್ನು ರೋಟರಿ ಕ್ಲಬ್ ನ ವತಿಯಿಂದ ವಿತರಿಸಲಾಯಿತು.ಮುಖ್ಯ ಶಿಕ್ಷಕ ಶ್ರೀ ಕೆ. ಸತೀಶ ಐತಾಳ ಸ್ವಾಗತಿಸಿದರು. ಕು.ಪ್ರಣತಿ ಕಾರ್ಯಕ್ರಮ ನಿರೂಪಿಸಿ. ಕು. ವೈಷ್ಣವಿ ವಂದಿಸಿದರು.
ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನದ ಅಧ್ಯಕ್ಷ ರೊ. ಕುಸುಮಾ ಮನೋಜ್ ಅಧ್ಯಕ್ಷತೆ ವಹಿಸಿದ್ದರು.ಇಂಟ್ರ್ಯಾಕ್ಟ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಕು. ಕೌಸಲ್ಯಾ ಅಧಿಕಾರ ಸ್ವೀಕರಿಸಿದರು. ಉಡುಪಿ ಜಿಲ್ಲಾ ಡಯಟ್ ನ ಉಪನ್ಯಾಸಕ ಡಾ. ಕಿಶೋರ್ ಕುಮಾರ್ ಶೆಟ್ಟಿ, ಇಂಟ್ರ್ಯಾಕ್ಟ್ ಕೋ ಆಡಿ೯ನೇಟರ್ ರೊ.ಆನಂದ್ ಎಮ್, ಕ್ಲಬ್ ನ ಕಾರ್ಯದರ್ಶಿ ರೊ. ಕೆ. ರಾಜಾರಾಮ ಐತಾಳ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ರೀಮತಿ ಸುಜಾತ, ಶಿಕ್ಷಣ ತಜ್ಞ ಗಣೇಶ್ ಜಿ, ಸಮಿತಿ ಸದಸ್ಯರಾದ ಶ್ರೀಮತಿ ಸುಲತಾ ಎಸ್ ಹೆಗ್ಡೆ,ಇಂಟ್ರ್ಯಾಕ್ಟ್ ಮಾರ್ಗದರ್ಶಿ ಶಿಕ್ಷಕಿ ಶ್ರೀಮತಿ ಹೆಲೆನ್ ಬಾಂಝ್ ಹಾಗೂ ಹೆಚ್ಚಿನ ರೋಟರಿ ಸದಸ್ಯರು ಉಪಸ್ಥಿತರಿದ್ದರು.

