ಪರಿಸರ ಸಂರಕ್ಷಣೆಯು ನಮ್ಮೆಲ್ಲರ ಜವಾಬ್ದಾರಿ: ಸಂಸದ ಕೋಟಾ

ಪರಿಸರ ಸಂರಕ್ಷಣೆಯು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ದೇವರು ನೀಡಿದ ಪ್ರಕೃತಿ ಸಂಪತ್ತನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು .

ಅನ್ನಪೂರ್ಣ ನರ್ಸರಿಯ ಪ್ರಾಯೋಜಕತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಮೃದ್ಧಿ ಮಹಿಳಾ ಮಂಡಳಿ, ಪೇತ್ರಿ ಲಯನ್ಸ್ ಕ್ಲಬ್ ಮತ್ತು ಸೈಂಟ್ ಪೀಟರ್ ಚರ್ಚ್ ಸಹಭಾಗಿತ್ವದಲ್ಲಿ ಪೇತ್ರಿ ರಸ್ತೆಯ ವಿಭಜಕದಲ್ಲಿ ಸುಮಾರು 1000 ಗಿಡ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಾಸಕರಾದ ಯಶಪಾಲ್ ಎ ಸುವರ್ಣ ಇವರು ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತ ನಿರ್ಮಾಣಕ್ಕೆ ಸಸ್ಯ ಸಂಪತ್ತನ್ನು ಬೆಳೆಸಿ ಉಳಿಸುವುದು ಕೂಡ ಒಂದು ಅಂಶವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಚರ್ಚಿನ ಧರ್ಮಗುರುಗಳಾದ ವಿಕ್ಟರ್ ಡಿಸೋಜಾ ,ಶ್ಯಾಮ್ ಪ್ರಸಾದ್ ಭಟ್, ಪ್ರಸನ್ನ ಭಟ್, ಹಿಮರಾಜ, ಶೈಲಾ ಶೆಟ್ಟಿ ,ರವಿರಾಜ್ ಶೆಟ್ಟಿ, ದಿನೇಶ್ ಆಚಾರ್ಯ, ಭಾಸ್ಕರ್ ಶೆಟ್ಟಿ, ಪ್ರಭಾಕರ್ ಶೆಟ್ಟಿ, ಜನೇಟ ಡಿಸೋಜಾ, ಪ್ರಭಾಕರ್ ಶೆಟ್ಟಿ, ಬಿ ಟಿ ನಾಯ್ಕ , ಅಶೋಕ ಮಡಿವಾಳ, ಪ್ರಥ್ವೀಶ್ ಭಟ್ , ಡಾ. ಪ್ರಿಯಾಂಕ ,ಚಂದ್ರ ನಾಯ್ಕ, ಪಿಡಿಒ ಅನಿತಾ, ನಾರಾಯಣ ಪ್ರಭು ಉಪಸ್ಥಿತರಿದ್ದರು. ಹರೀಶ್ ಶೆಟ್ಟಿ ಚೇರ್ಕಾಡಿ ಸ್ವಾಗತಿಸಿ, ಕಮಲಾಕ್ಷ ಹೆಬ್ಬಾರ್ ಕನ್ನಾರು ನಿರೂಪಿಸಿ ಪ್ರಸಾದ್ ಭಟ್ ವಂದಿಸಿದರು.

Leave a Reply

Your email address will not be published. Required fields are marked *