ಪಲ್ಸ್ ಪೋಲಿಯೋ : ಉದ್ಯಾವರ ಮೆಲ್ಪೇಟೆ ಅಂಗನವಾಡಿಯಲ್ಲಿ ಚಾಲನೆ

ಉದ್ಯಾವರ : ಐದು ವರ್ಷದ ಒಳಗಿನ ಮಕ್ಕಳಿಗೆ ರಾಜ್ಯದಾದ್ಯಂತ ಇಂದು ಪಲ್ಸ್ ಪೋಲಿಯೋ ನೀಡಲಾಗುತ್ತಿದ್ದು, ಉದ್ಯಾವರ ಮೇಲ್ಪೇಟೆ ಅಂಗನವಾಡಿಯಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ರಿಯಾಜ್ ಪಳ್ಳಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಇಲ್ಲಿಯ ಮೇಲ್ವಿಚಾರಕಿಯಾದ ಫಿಲೋಮಿನ ರೆಬೆಲ್ಲೊ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಅಶ್ವಿನಿ ಕೆ., ಆಶಾ ಕಾರ್ಯಕರ್ತೆಯರಾದ ನಸೀಮ, ಅಂಗನವಾಡಿ ಕಾರ್ಯಕರ್ತೆಯರಾದ ಅಕ್ಷತಾ ಪೈ, ನಮ್ರತಾ, ಸ್ಥಳೀಯರಾದ ಸುರೇಶ್ ಪೂಜಾರಿ, ಶೋನ್ ಮೋನಿಸ್, ರೋಶ್ನಿ ಕುಲಾಸೊ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *