ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಸರಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿ ಇಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿರುವ ಸೀತಾನದಿ ವಿಟ್ಟಲ್ ಶೆಟ್ಟಿ ಇವರು ಇಂದಿನ ಸ್ವಾಸ್ಥ್ಯ ಸಮಾಜದಲ್ಲಿ ಆರೋಗ್ಯವಾಗಿ ಇದ್ದಲ್ಲಿ ಮಾತ್ರ ಸಾಧನೆ ಮಾಡಲು ಸಾಧ್ಯ, ಮದ್ಯಪಾನ ಬೀಡಿ ಸಿಗರೇಟು ಗುಟುಕ ಜರ್ದ ಅಫೀಮು ಗಾಂಜಾ ಇನ್ನಿತರ ಮಾದಕ ವಸ್ತುಗಳಿಂದ ದೂರವಿರಬೇಕು ಮಾದಕ ವಸ್ತುಗಳಿಂದ ಆರೋಗ್ಯ ಹಾಳಾಗುವುದರ ಜೊತೆಗೆ ಸಂಬಂಧಗಳು ದೂರವಾಗುತ್ತದೆ, ಕುಟುಂಬದ ಆರ್ಥಿಕ ಸ್ಥಿತಿಗತಿ ದುಸ್ಥಿತಿಗೆ ಬಂದು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಇದರ ಜೊತೆಗೆ ಸಮಾಜದಲ್ಲಿ ಅಶಾಂತಿ ನಿರ್ಮಾಣವಾಗುತ್ತದೆ ಹಾಗಾಗಿ ಮಕ್ಕಳೇ ದುಶ್ಚಟಗಳಿಂದ ದೂರ ಇರಿ ಎಂದು ಮಾಹಿತಿ ಮಾರ್ಗದರ್ಶನ ನೀಡಿದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಡಾ. ವಿದ್ಯಾಧರ್ ಹೆಗ್ಡೆ ಎಸ್ ಪ್ರಾಂಶುಪಾಲರು ಇವರು ಮಾತನಾಡುತ್ತಾ, ಇಂದಿನ ಮಕ್ಕಳು ಮುಂದಿನ ದೇಶದ ಆಸ್ತಿ, ಅತಿ ಹೆಚ್ಚು ಮೊಬೈಲ್ ಬಳಸುವುದು ಕೂಡ ದುಶ್ಚಟ, ಆದಕಾರಣ ಇದರಿಂದ ಹೆಚ್ಚು ಓದುವುದರ ಬಗ್ಗೆ ಗಮನಕೊಟ್ಟಲ್ಲಿ ನಿಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು. ಹೆಚ್ಚ ಉದಯ್ ಕುಲಾಲ್ ಮೇಲ್ವಿಚಾರಕರು ಇವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀಮತಿ ಸುಷ್ಮಾ ರಾವ್ ಕೆ ಸಂಚಾಲಕರು ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ, ಡಾ. ಗಣೇಶ್ ಎಸ್ ಸಂಚಾಲಕರು ಐ.ಕ್ಯು.ಎ.ಸಿ, ಡಾ. ಮನೋಜ್ ಕುಮಾರ್ ಎಂ ದೈಹಿಕ ಶಿಕ್ಷಣ ನಿರ್ದೇಶಕರು, ಶ್ರೀ ಪ್ರವೀಣ್ ಶೆಟ್ಟಿ ರೆಡ್ ರಿಬ್ಬನ್ ಹಾಗೂ ಎನ್ ಎಸ್ ಎಸ್ ಯೋಜನಾಧಿಕಾರಿ. ಸೇವಾ ಪ್ರತಿನಿಧಿ ಕಾಂತಿ ಹೆಗಡೆ, ನಾಗರತ್ನ ಇನ್ನಿತರು ಉಪಸ್ಥಿತರಿದ್ದರು

