ನಮ್ಮ ಉಡುಪಿ ಯು ಚಾನೆಲ್ನಲ್ಲಿ ನೂತನ ಸುದ್ದಿ ವಿಭಾಗ ಜನತಾ ನ್ಯೂಸ್ ಅಸ್ತಿತ್ವಕ್ಕೆ

ಉಡುಪಿ ಜಿಲ್ಲೆಯ ಏಕೈಕ ಅಧಿಕೃತ ಟಿವಿ ಮಾಧ್ಯಮವಾದ ನಮ್ಮ ಉಡುಪಿ ಯು ಚಾನೆಲ್ನಲ್ಲಿ ನೂತನ ಸುದ್ಧಿ ವಿಭಾಗ ಜನತಾ ನ್ಯೂಸ್ ಜೂನ್ 3ರಂದು ಉಡುಪಿಯ ರಾಮಕೃಷ್ಣ ಹೋಟೆಲಿನಲ್ಲಿ ಉದ್ಘಾಟನೆಗೊಂಡಿತು. ಕೋಟ ಜನತಾ ಫಿಶ್ ಮಿಲ್ ಮತ್ತು ಆಯಿಲ್ ಪ್ರಾಡಕ್ಟ್ ಮಾಲಕ, ಗೀತಾನಂದ ಫೌಂಡೇಶನ್ ಪ್ರವರ್ತಕ, ಧರ್ಮರತ್ನಕರ, ಅಧುನಿಕ ಬಸವಣ್ಣ ಆನಂದ ಸಿ ಕುಂದರ್ ಅವರು ಜನತಾ ನ್ಯೂಸ್ ಅನ್ನು ಬಿಡುಗಡೆ ಮಾಡಿ, ಜನತಾ ಎಂಬುದು ನನ್ನ ಅಣ್ಣನ ಕನಸಿನ ಹೆಸರು. ಜನರಿಂದ ಜನರಿಗಾಗಿ ನಾವು ಜನತಾ ಸಂಸ್ಥೆಯನ್ನು ಸ್ಥಾಪನೆ ಮಾಡಿ ಇಂದು ಸಾವಿರಾರು ಕುಟುಂಬಗಳಿಗೆ ಆಸರೆ ಆಗಿದ್ದೇವೆ. ಅಂತೆಯೇ ಉಡುಪಿ ಚಾನೆಲ್ ಟಿವಿಯಲ್ಲಿ ಪ್ರಸಾರ ಆಗುವ ಜನತಾ ನ್ಯೂಸ್ ಕೂಡ ಹಲವರ ಬಾಳಿಗೆ ಬೆಳಕಾಗಲಿ ಎಂದು ಹಾರೈಸಿದರು. ಬೆಳ್ವೆಯ ಉದ್ಯಮಿ, ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರು, ಧಾರ್ಮಿಕ – ಸಾಮಾಜಿಕ – ರಾಜಕೀಯ ಮುಖಂಡರು ಆದ ಸತೀಶ ಕಿಣಿಯವರು ಉಪಸ್ಥಿತರಿದ್ದು, ಹೆಬ್ರಿ ನ್ಯೂಸ್, ಮಲ್ನಾಡ್ ನ್ಯೂಸ್ ಎಂಬ ಹೆಸರಿನಿಂದ ಈಗಾಗಲೇ ಕಾರ್ಯ ನಿರ್ವಹಿಸಿ, ಇದೀಗ ಇಡೀ ಜಿಲ್ಲೆಯ ಸುದ್ದಿಗಳನ್ನು ಪ್ರಸಾರ ಮಾಡುವ ಉದ್ದೇಶದಿಂದ ಜನತಾ ನ್ಯೂಸ್ ಕಾರ್ಯಾಚರಣೆ ಮಾಡುತ್ತಿದೆ. ಸಮಾಜಮುಖಿ ಸುದ್ದಿಗಳನ್ನು ನೀಡುವುದರ ಮೂಲಕ ಇದು ಯಶಸ್ಸನ್ನು ಪಡೆಯಲಿ ಎಂದು ಹಾರೈಸಿದರು. ವಕೀಲರು, ಜನತಾ ನ್ಯೂಸ್ ಕಾನೂನು ಸಲಹೆಗಾರರು, ಉಡುಪಿ ಜಿಲ್ಲಾ ದಸಂಸ ಅಂಬೇಡ್ಕರ್ ವಾದ ಸಂಚಾಲಕರಾದ ಟಿ ಮಂಜುನಾಥ್ ಗಿಳಿಯಾರು ಮಾತನಾಡಿ, ಕೇವಲ ಟಿವಿ ಮಾತ್ರವಲ್ಲದೇ ವೆಬ್ ಸೈಟ್, ಯೂಟ್ಯೂಬ್ ಮತ್ತಿತರ ಜಾಲ ತಾಣಗಳಲ್ಲಿ ಜನತಾ ನ್ಯೂಸ್ ಪ್ರಸಾರ ಕಾಣುತ್ತಿದ್ದು, ಇದು ಇಂದಿನ ಕಾಲಕ್ಕೆ ವೇಗದ ಬೆಳವಣಿಗೆ. ಖಂಡಿತಾ ಜನತಾ ನ್ಯೂಸ್ ಯಶಸ್ಸನ್ನು ಕಾಣುತ್ತದೆ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ನಮ್ಮ ಉಡುಪಿ ಯು ಚಾನೆಲ್ ವ್ಯವಸ್ಥಾಪಕರಾದ ಪ್ರಸಾದ್ ರಾವ್, ಜನತಾ ನ್ಯೂಸ್ ವ್ಯವಸ್ಥಾಪಕ ಸಂತೋಷ್ ಹೆಬ್ರಿ ಉಪಸ್ಥಿತರಿದ್ದರು. ಟಿವಿ ನಿರೂಪಕರಾದ ರೋಹಿತ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಯಕ್ಷಗಾನ ಪ್ರಸಂಗಕರ್ತ ಪಿ. ವಿ ಆನಂದ ಸಾಲಿಗ್ರಾಮ ನಿರೂಪಿಸಿದರು. ನಿರೂಪಕಿ ತೀರ್ಥಕಲಾ ವಂದಿಸಿದರು. ಕಾರ್ಯಕ್ರಮದಲ್ಲಿ ವರದಿಗಾರರಾದ ಕುಂದಾಪುರ ಮತ್ತು ಬೈಂದೂರು ವ್ಯಾಪ್ತಿಯ ವಿಜಯ್ ಆರ್ಡಿ, ಹೆಬ್ರಿ ಮತ್ತು ಕಾರ್ಕಳ ವ್ಯಾಪ್ತಿಯ ಸಂತೋಷ್, ಬ್ರಹ್ಮಾವರ ವ್ಯಾಪ್ತಿಯ ಶ್ರೀನಿವಾಸ, ಉಡುಪಿ ಮತ್ತು ಕಾಪು ವ್ಯಾಪ್ತಿಯ ಮಿಥುನ್, ಲೈವ್ ವಿಭಾಗದ ರವಿಚಂದ್ರ ಹೆಗ್ಡೆ ಪಾಲ್ಗೊಂಡಿದ್ದರು. ಉಡುಪಿ ಜಿಲ್ಲೆಯಾದ್ಯಂತ ಯಾವುದೇ ಸುದ್ದಿಗಳು ಟಿವಿಯಲ್ಲಿ ಪ್ರಸಾರವಾಗಲು 9606045137 ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.

Leave a Reply

Your email address will not be published. Required fields are marked *