ಪ್ರಧಾನಿ ಮೋದಿ ಭಾರತಕ್ಕೆ ಮಾತ್ರವಲ್ಲ, ಪ್ರಪಂಚದ ಹೆಮ್ಮೆ : ಯಶಪಾಲ್ ಸುವರ್ಣ
ಮೋದಿಯವರ ಸಮರ್ಥ ಆಡಳಿತ, ಭಾರತವನ್ನು ಬಲಿಷ್ಠಗೊಳಿಸಿದೆ. ಅವರು ಕೈಗೊಂಡ ಅಭಿವೃದ್ಧಿಯ ಕಾರ್ಯಗಳನ್ನು ವಿಶ್ವವೇ ಬೆರಗಾಗಿ ನೋಡಿದೆ. ಮೋದಿಯವರು ದೇಶ ಮಾತ್ರವಲ್ಲ ಪ್ರಪಂಚದ ಹೆಮ್ಮೆ ಎಂಬುದಾಗಿ ಶಾಸಕ ಯಶಪಾಲ್ ಸುವರ್ಣ ಹೇಳಿದರು. ಅವರು ಉಡುಪಿ ಜಿಲ್ಲೆಯ ಬಿಜೆಪಿ ಮತ್ತು ಜಿಲ್ಲಾ ರೈತ ಮೋರ್ಚಾ ವತಿಯಿಂದ ನೀಲಾವರ ಗೋಶಾಲೆಯಲ್ಲಿ ಜೂನ್ 5 ರಂದು ನಡೆದ ಪ್ರಧಾನಿ ನರೇಂದ್ರ ಮೋದಿ ಅವರ 12ವರ್ಷಗಳ ಅಭಿವೃದ್ಧಿ ಪರ ಆಡಳಿತದ ಅಭಿಯಾನ ಕಾರ್ಯಕ್ರಮದಲ್ಲಿ ಮಾತುಗಳನ್ನು ಆಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಎಲ್ಲಾ ಮೋರ್ಚಾಗಳ ಸಂಘಟಿತ ಪ್ರಯತ್ನದಿಂದ ರಾಜ್ಯದಲ್ಲೂ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿದೆ. ಹಾಗಾಗಿ ಪಕ್ಷದ ಬಲವರ್ಧನೆಗೆ ಎಲ್ಲಾ ಕಾರ್ಯಕರ್ತರು ಶ್ರಮಿಸಬೇಕು ಎಂಬುದಾಗಿ ಕರೆ ನೀಡಿದರು. ಟೀಕೆಗಳನ್ನು ಮಾಡುವವರು ಎಲ್ಲಾ ಕಾಲದಲ್ಲೂ ಇದ್ದೆ ಇರುತ್ತಾರೆ. ಪಕ್ಷಕ್ಕಾಗಿ ನಾವು ಕೆಲಸವನ್ನು ಮಾಡಬೇಕು. ಟೀಕೆಗಳು ಸಾಯುತ್ತದೆ, ಮಾಡಿದ ಕೆಲಸಗಳು ಉಳಿಯುತ್ತದೆ. ರೈತ ಮೋರ್ಚಾವು ಇನ್ನಷ್ಟು ಜನಪರವಾಗಿ ಕೆಲಸ ಮಾಡಿ ಜನ ಮನ್ನಣೆ ಪಡೆಯಲಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಕಮಲಾಕ್ಷ ಹೆಬ್ಬಾರ್ ಪೇತ್ರಿ ಹೇಳಿದರು. ಕಾರ್ಯಕ್ರಮದಲ್ಲಿ ಉಡುಪಿ ಶಾಸಕರಾದ ಯಶಪಾಲ್ ಸುವರ್ಣ, ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಪ್ರಮುಖರಾದ ಹೆರ್ಗ ದಿನಕರ ಶೆಟ್ಟಿ, ಅಲೆವೂರು ಶ್ರೀಕಾಂತ್ ನಾಯಕ್, ಮಹಾವೀರ ಹೆಗ್ಡೆ,ರಾಜೀವ್ ಕುಲಾಲ್, ಶಿವಕುಮಾರ್, ಶಿಲ್ಪಾ ಜಿ ಸುವರ್ಣ, ಅನಿತಾ ಶ್ರೀಧರ್, ಪೃಥ್ವಿರಾಜ್ , ವಿಜಯ ಕೊಡವೂರು, ವೀಣಾ ಶೆಟ್ಟಿ, ಸಂಧ್ಯಾ ರಮೇಶ್, ಶ್ಯಾಮಲ ಕುಂದರ್, ರುಡಾಲ್ಫ್ ಡಿಸೋಜ, ಕಿರಣ್ ಕುಮಾರ್, ಪ್ರವೀಣ್ ಕುಪ್ಪೆಟ್ಟು, ಪ್ರಭಾಕರ ಪೂಜಾರಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತಿತರರು ಪಾಲ್ಗೊಂಡಿದ್ದರು. ಪ್ರಗತಿಪರ ಕೃಷಿಕರಿಗೆ ಸನ್ಮಾನ, ವಿಶ್ವೇಶತೀರ್ಥ ಸ್ವಾಮೀಜಿ ಗ್ಯಾಲರಿ ವೀಕ್ಷಣೆ, ವಿಶ್ವ ಪರಿಸರ ದಿನದ ಅಂಗವಾಗಿ ಗಿಡಗಳ ವಿತರಣೆ ಮತ್ತಿತರ ಕಾರ್ಯಕ್ರಮಗಳು ನಡೆದವು.

