ಇಂದು ನೀಲಾವರ ಗೋಶಾಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ12 ವರ್ಷದ ಆಡಳಿತ ಸಾಧನೆಯ ಅಭಿಯಾನ
ದಿನಾಂಕ 05/06/2026 ನೇ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನೀಲಾವರ ಗೋಶಾಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ 12 ವರ್ಷ ಆಡಳಿತದ ಸಾಧನೆಯ ಜಿಲ್ಲಾ ಮಟ್ಟದ ಅಭಿಯಾನದ ಉದ್ಘಾಟನಾ ಸಮಾರಂಭ ನಡೆಯಲಿರುವುದು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರು, ಸಂಸದರು, ಶಾಸಕರು ಮತ್ತು ಪ್ರಮುಖರು ಭಾಗವಹಿಸುವರಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಉಪಸ್ಥಿತರಾಗಬೇಕಾಗಿ ಉಡುಪಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರು, ಸಮಾಜ ಸೇವಕರೂ ಆದ ಕಮಲಾಕ್ಷ ಹೆಬ್ಬಾರ್ ಪೇತ್ರಿ ಮನವಿ ಮಾಡಿದ್ದಾರೆ

