ಹೆಮ್ಮಾಡಿಯಲ್ಲಿ ವಿಶ್ವ ಪರಿಸರ ದಿನ ಆಚರಣೆ
ಜೆಸಿಐ ಕುಂದಾಪುರ ಸಿಟಿ, ಹಳೆ ವಿದ್ಯಾರ್ಥಿ ಸಂಘ, ಸರಕಾರಿ ಮಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗ್ರಾಮ ಪಂಚಾಯತ್ ಹೆಮ್ಮಾಡಿ ಇವರುಗಳ ಸಹಯೋಗದೊಂದಿಗೆ ವನಮಹೋತ್ಸವ ಕಾರ್ಯಕ್ರಮ, ವಿಶ್ವ ಪರಿಸರ ದಿನಾಚರಣೆ ಹಾಗು ವಿದ್ಯಾರ್ಥಿಗಳಿಗೆ ಸಸಿ ನೀಡುವ ಕಾರ್ಯಕ್ರಮ ನಡೆಯಿತು.
ಈ ಪ್ರಪಂಚ ನಮ್ಮ ಪ್ರಕೃತಿಯ ಮಡಿಲು ಈ ಮಡಿಲ ಕಣ ಕಣವು ನಮ್ಮೆಲ್ಲರ ಜೀವಾಳದ ಉಸಿರೇ ಈ ಪರಿಸರ,ನಾವಿರೋತನಕ ಇದನ್ನು ಬೆಳೆಸಿ ಉಳಿಸುವುದು ನಮ್ಮೆಲ್ಲರ ಕರ್ತವ್ಯ, ಇದನ್ನು ನಿಷ್ಠೆಯಿಂದ ಪಾಲಿಸೋಣ,ಎಂದು ಜೆಸಿಐ ಕುಂದಾಪುರ ಸಿಟಿ ಯಾ ಸ್ಥಾಪಕ ಅಧ್ಯಕ್ಷ ರಾದ ಹುಸೇನ್ ಹೈಕಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಮ್ಮಾಡಿ ಇಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗು ಸಸಿ ನೆಡುವ ಕಾರ್ಯಕ್ರಮ ದಲ್ಲಿ ಮಾತನಾಡಿದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾದ ರಾಘವೇಂದ್ರ ಕುಲಾಲ್ ಹೆಮ್ಮಾಡಿ ಮಾತನಾಡಿ ವಿಶ್ವ ಪರಿಸರ ದಿನ ದೀರ್ಘಕಾಲದ ಉತ್ತಮ ಜೀವನಕ್ಕಾಗಿ ಈ ಪ್ರಕೃತಿಯ ಸಂರಕ್ಷಣೆಯ ಜಾಗ್ರತಿ ಮೂಡಿಸಲು ಧನಾತ್ಮಕವಾದ ಜಾಗ್ರತಿಯ ಕ್ರಮಗಳನ್ನು ಉತ್ತೇಜಿಸುವುದಕ್ಕಕ್ಕಾಗಿಯೇ ಈ ಅಂತರಾಷ್ಟ್ರೀಯ ದಿನವಾಗಿದೆ, ಈ ಪರಿಸರದ ಉಳಿವಿಗಾಗಿ ಪ್ರತಿಯೊಬ್ಬರೂ ಕೈಜೋಡಿಸಿ ಆಚರಿಸಿ, ನಮ್ಮ ಉಸಿರನ್ನು ಹಸಿರಾಗಿಸೋಣ ಎಂದು ನುಡಿದರು.
ಜೆಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷ ಕಿರಣ್ ದೇವಾಡಿಗ ಮಾತನಾಡಿ ಪರಿಸರ ಮಾಲಿನ್ಯ, ಸ್ವಚ್ಛತೆ , ಗಿಡನೆಡುವುದು, ಮಕ್ಕಳಲ್ಲಿ ಪರಿಸರದ ಜಾಗ್ರತಿ ಮೂಡಿಸುವುದು, ನೈಸರ್ಗಿಕ ಸಂಪತ್ತಿನ ಸಂರಕ್ಷಣೆ, ಗಾಳಿ ನೀರಿನ ಸಂರಕ್ಷಣೆ ಹೀಗೆ ಹಲವಾರು ರೀತಿಯಲ್ಲಿ ನಮ್ಮಪರಿಸರ ರಕ್ಷಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜೇಸಿಐ ಕುಂದಾಪುರ ಸಿಟಿಯ ಅಧ್ಯಕ್ಷರಾದ ಶ್ರೀ ಕಿರಣ್ ದೇವಾಡಿಗ, ಜೇಸಿಐ ಕುಂದಾಪುರ ಸಿಟಿಯ ಸ್ಥಾಪಕಾಧ್ಯಕ್ಷರಾದ ಹುಸೈನ್ ಹೈಕಾಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀಮತಿ ಭಾವನ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾ ಶ್ರೀ ರಾಘವೇಂದ್ರ ಕುಲಾಲ್ ಹೆಮ್ಮಾಡಿ, ಕೋಶಾಧಿಕಾರಿ ಗುರುರಾಜ್ ಬಿ ಹೆಮ್ಮಾಡಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಭಾರತಿ ಆಚಾರ್, ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಶಶಿಕಲಾ ಜಿ. ಹಾಗೂ ಪಂಚಾಯತ್ ನ ಸಿಬ್ಬಂದಿಗಳಾದ ಮಿಥುನ್, ಪ್ರಭಾಕರ್, ರಮ್ಯ ಉಪಸ್ಥಿತರಿದ್ದರು. ಕಾರ್ಯಕರ್ಮದ ನಿರೂಪಣೆ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ, ಶಿಕ್ಷಕಿ ಮಮತಾ ವಂದಿಸಿದರು

