ಹೆಜಮಾಡಿ ಬೈಪಾಸ್ ಟೋಲ್ – ಪ್ರತಿಭಟನೆ
15 ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹಾಗೂ ಅನಿರ್ದಿಷ್ಟಾವಧಿಯ ಹೋರಾಟ: ವಿನಯ್ ಕುಮಾರ್ ಸೊರಕೆ ಎಚ್ಚರಿಕೆ ಹೆಜಮಾಡಿ ಬೈಪಾಸ್ ಟೋಲ್ ಪ್ಲಾಜಾದಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಅನ್ಯಾಯ, ಸ್ಥಳೀಯ ನಿವಾಸಿಗಳ ಮೇಲಿನ ಟೋಲ್ ದೌರ್ಜನ್ಯ ಹಾಗೂ ವರ್ಷಗಳಿಂದ ಮುಂದುವರಿದಿರುವ ಸಮಸ್ಯೆಯನ್ನು ಖಂಡಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಶ್ರೀ ವಿನಯ್ ಕುಮಾರ್ ಸೊರಕೆ ಅವರ ನೇತೃತ್ವದಲ್ಲಿ, ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರಬೋಧ್ ಚಂದ್ರ ಹೆಜ್ಮಾಡಿ ಹಾಗೂ ಪಡುಬಿದ್ರಿ…

