Headlines

ರೋಟರಿ ಕುಂದಾಪುರ ಮಿಡ್ ಟೌನ್ ಕ್ರೀಡಾ ಸಮವಸ್ತ್ರ ವಿತರಣೆ

ರೋಟರಿ ಕ್ಲಬ್ ಕುಂದಾಪುರ ಮಿಡ್ ಟೌನ್ ವತಿಯಿಂದ,ಕ್ಲಬ್ ನ ಮಾಜಿ ಅಧ್ಯಕ್ಷ ದಿ. ಸಟ್ವಾಡಿ ಸುಧೀರ್ ಹೆಗ್ಡೆಯವರ ಸ್ಮರಣಾರ್ಥವಾಗಿ, ಗಿರಿಜಾ ಚಂದ್ರಶೇಖರ ಹೆಗ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊರ್ಗಿ ಇಲ್ಲಿನ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರವನ್ನು ಹಸ್ತಾಂತರಿಸಲಾಯಿತು ಕ್ಲಬ್ ನ ಅಧ್ಯಕ್ಷರಾದ ಸಚಿನ್ ಕುಮಾರ್ ಶೆಟ್ಟಿ ಹುಂಚನಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ, ರೋಟರಿ ಕ್ಲಬ್ ಸದಸ್ಯರಾದ,ರಂಜಿತ್ ಕುಮಾರ್ ಶೆಟ್ಟಿ ಕೆ. ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ ವಿತರಿಸಿ ಶುಭ ಹಾರೈಸಿದರು. ರವಿರಾಜ ಶೆಟ್ಟಿ ಎಚ್.,…

Read More

ಹೆಜಮಾಡಿಯಲ್ಲಿ ಆಟಿಡೊಂಜಿ ದಿನಕ್ಕೆ ಸಕಲ ಸಿದ್ಧತೆ

ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ವತಿಯಿಂದ 19-07-2026 (ಭಾನುವಾರ) ಹೆಜಮಾಡಿಯ ಬಿಲ್ಲವರ ಸಂಘದ ಸಭಾಂಗಣದಲ್ಲಿ ಸಾಂಪ್ರದಾಯಿಕ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಮಾಜಿ ಸಚಿವರು ಹಾಗೂ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ಶ್ರೀ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಲಿದ್ದು, ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀ ದಯಾನಂದ್ ಕತ್ತಲ್‌ಸರ್ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ತಮ್ಮ ಭಾಷಣದಲ್ಲಿ ತುಳುನಾಡಿನ ಆಟಿ ತಿಂಗಳ ಸಾಂಸ್ಕೃತಿಕ…

Read More

*ಉಡುಪಿ ಜಿಲ್ಲೆಗೆ ಮಂಜೂರಾತಿ ಆದ 100 ಮಂದಿ ಜ್ಞಾನದೀಪ ಶಿಕ್ಷಕರ ಸಂದರ್ಶನ ಪೃಕ್ರಿಯೆ

ಪರಮ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು *ಜ್ಞಾನ ದೀಪ ಶಿಕ್ಷಣ ಕಾರ್ಯಕ್ರಮ* ದಡಿಯಲ್ಲಿ 2026-27ನೇ ಸಾಲಿನಲ್ಲಿ ಕರ್ನಾಟಕ ರಾಜ್ಯಾದ್ಯಂತ 1000 ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಗೌರವ ಶಿಕ್ಷಕರ ನೇಮಕಾತಿ ನೀಡಿದ್ದು, *ಉಡುಪಿ ಜಿಲ್ಲೆಗೆ ಮಂಜೂರಾತಿ ಆದ 100 ಮಂದಿ ಜ್ಞಾನದೀಪ ಶಿಕ್ಷಕರ ಸಂದರ್ಶನ ಪೃಕ್ರಿಯೆ* ಈ ದಿನ ಉಡುಪಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಸೌಧ ಕಟ್ಟಡದಲ್ಲಿ ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ ಇವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.ಉಡುಪಿ ಜಿಲ್ಲೆಯ ನಿರ್ದೇಶಕರಾದ ನಾಗರಾಜ ಶೆಟ್ಟಿ…

Read More

*ಮಾತಿಬೆಟ್ಟಿನ ಹಿರಿಯ ಕೃಷಿಕ ಹಾಗೂ ವ್ಯಾಪಾರಿ ಶಿಶುಪಾಲ್ ಜೈನ್ ನಿಧನ*

ವರಂಗ ಸಮೀಪದ ಮಾತಿಬೆಟ್ಟಿನ ನಿವಾಸಿ, ಹಿರಿಯ ಕೃಷಿಕ ಹಾಗೂ ಸಣ್ಣ ಜಿನಸಿ ಅಂಗಡಿಯ ಮಾಲಕರಾಗಿದ್ದ ಶ್ರೀ ಶಿಶುಪಾಲ್ ಜೈನ್ (82) ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.ಸರಳ, ಸಜ್ಜನಿಕೆ ಹಾಗೂ ಪ್ರಾಮಾಣಿಕ ವ್ಯಕ್ತಿತ್ವದಿಂದ ಎಲ್ಲರ ಪ್ರೀತಿ-ವಿಶ್ವಾಸ ಗಳಿಸಿದ್ದ ಅವರು, ಕೃಷಿಯ ಜೊತೆಗೆ ಸಣ್ಣ ಜಿನಸಿ ಅಂಗಡಿಯನ್ನು ನಡೆಸುತ್ತಾ ಗ್ರಾಮಸ್ಥರಿಗೆ ಉತ್ತಮ ಸೇವೆ ಸಲ್ಲಿಸುತ್ತಿದ್ದರು. ಅವರ ನೇರ ನಡೆ-ನುಡಿ, ಪ್ರಾಮಾಣಿಕ ವ್ಯವಹಾರ ಮತ್ತು ಸಮಾಜಮುಖಿ ಮನೋಭಾವದಿಂದ ಸ್ಥಳೀಯರಲ್ಲಿ ಗೌರವಕ್ಕೆ ಪಾತ್ರರಾಗಿದ್ದರು.ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.ಅವರ…

Read More

*ಮಹಿಳೆಯರಿಗೆ ಕಾನೂನು ಅರಿವು ಅತ್ಯಗತ್ಯ: ಪದ್ಮಪ್ರಸಾದ್ ಜೈನ್*

ಅಜೆಕಾರು , ಜು. 5: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.), ದಕ್ಷಿಣ ಕನ್ನಡ–ಉಡುಪಿ ಜಿಲ್ಲೆ, ಕಾರ್ಕಳ ವಲಯದ ವತಿಯಿಂದ ಅಜೆಕಾರು ಕೈಕಂಬದ ಶ್ರೀ ಮಹಾದೇವಿ ಭಜನಾ ಮಂಡಳಿ (ರಿ.) ಮಹಿಳಾ ಸದಸ್ಯರಿಗಾಗಿ ಕಾನೂನು ಮಾಹಿತಿ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಖ್ಯಾತ ನ್ಯಾಯವಾದಿಗಳು ಹಾಗೂ ಕಾರ್ಕಳ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪದ್ಮಪ್ರಸಾದ್ ಜೈನ್ ಅವರು ಮಹಿಳೆಯರ ಹಕ್ಕುಗಳು, ಕುಟುಂಬ ಸಂಬಂಧಿತ ಕಾನೂನುಗಳು, ಸೈಬರ್ ಅಪರಾಧಗಳು, ಆಸ್ತಿ ಹಕ್ಕು,…

Read More

ಎಲ್ಐಸಿ ಕಾಪು : ವಿಮಾ ಪ್ರತಿನಿಧಿಗಳಿಂದ ಅಭಿವೃದ್ಧಿ ಅಧಿಕಾರಿಗೆ ಸೇವಾ ಗೌರವ ಮತ್ತು ಬೀಳ್ಕೊಡುಗೆ

ಕಾಪು : ಭಾರತೀಯ ಜೀವವಿಮಾ ನಿಗಮದ ಕಾಪು ಶಾಖೆಯಲ್ಲಿ ಕಳೆದ 13 ವರ್ಷಗಳಿಂದ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಉತ್ತರ ಕನ್ನಡ ಜಿಲ್ಲೆಯ ಕುಮುಟಾಕ್ಕೆ ಶಾಖಾ ಸಹಾಯಕ ವ್ಯವಸ್ಥಾಪಕರಾಗಿ ಪದೋನ್ನತಿ ಹೊಂದಿದ ಪ್ರವೀಣ್ ಕುಮಾರ್ ಎನ್ ಕೆ ಅವರಿಗೆ ಅವರ ತಂಡದ ವಿಮಾ ಪ್ರತಿನಿಧಿಗಳಿಂದ ಸೇವಾ ಗೌರವ ಮತ್ತು ಬೀಳ್ಕೊಡುಗೆ ಕಾರ್ಯಕ್ರಮವನ್ನು ಕಾಪುವಿನ ಜೆಸಿ ಭವನದಲ್ಲಿ ಹಮ್ಮಿಕೊಳ್ಳಲಾಯಿತು. ಕಾಪು ಶಾಖೆಯ ಹಿರಿಯ ಶಾಖ ವ್ಯವಸ್ಥಾಪಕ ಬಾಲಚಂದ್ರ ಬಿ ಮತ್ತು ಕುಂದಾಪುರ ಶಾಖೆಯ ಸಹಾಯಕ ವ್ಯವಸ್ಥಾಪಕ, ಅಭಿವೃದ್ಧಿ ಅಧಿಕಾರಿ…

Read More

ಲಯನ್ಸ್ ಎಂದರೆ ಸೇವೆ ಮಾತ್ರವಲ್ಲ, ಅದು ವ್ಯಕ್ತಿತ್ವ ಬೆಳವಣಿಗೆ : ಲ. ಹರಿಪ್ರಸಾದ್ ರೈ

ಉಡುಪಿ : ಲಯನ್ಸ್ ನಮ್ಮ ದೇಶಕ್ಕೆ ಬಂದು 70 ವರ್ಷಗಳಾದರೂ, ಅದು ವರ್ಷಗಳಲ್ಲ, ಬದಲಾಗಿ ಅದು ಇತಿಹಾಸದ ಪುಟಗಳಾಗಿದೆ. ಲಯನ್ಸ್ ನ ಮೂಲಭೂತ ತತ್ವಗಳು ಬಲಿಷ್ಠವಾಗಿರುವುದರಿಂದ, ಈ ಸಂಘಟನೆಯು ದೇಶದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯದಲ್ಲಿಯೂ ಬಲಿಷ್ಠವಾಗಿದೆ. ಲಯನ್ ಎಂದರೆ ಕೇವಲ ಸೇವೆಯಲ್ಲ, ಬದಲಾಗಿ ಅದು ವ್ಯಕ್ತಿತ್ವ ಬೆಳವಣಿಗೆ ಎಂದು ಜಿಲ್ಲೆ 317C ಇದರ ಪ್ರಥಮ ಜಿಲ್ಲಾ ಉಪ ಗವರ್ನರ್ ಲಯನ್ ಹರಿಪ್ರಸಾದ್ ರೈ ತಿಳಿಸಿದರು. ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಇದರ ಎಂಟನೇ ವರ್ಷದ ಕಾರ್ಯಕಾರಿ ಸಮಿತಿಯ…

Read More

ಪಲ್ಸ್ ಪೋಲಿಯೋ : ಉದ್ಯಾವರ ಮೆಲ್ಪೇಟೆ ಅಂಗನವಾಡಿಯಲ್ಲಿ ಚಾಲನೆ

ಉದ್ಯಾವರ : ಐದು ವರ್ಷದ ಒಳಗಿನ ಮಕ್ಕಳಿಗೆ ರಾಜ್ಯದಾದ್ಯಂತ ಇಂದು ಪಲ್ಸ್ ಪೋಲಿಯೋ ನೀಡಲಾಗುತ್ತಿದ್ದು, ಉದ್ಯಾವರ ಮೇಲ್ಪೇಟೆ ಅಂಗನವಾಡಿಯಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ರಿಯಾಜ್ ಪಳ್ಳಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಇಲ್ಲಿಯ ಮೇಲ್ವಿಚಾರಕಿಯಾದ ಫಿಲೋಮಿನ ರೆಬೆಲ್ಲೊ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಅಶ್ವಿನಿ ಕೆ., ಆಶಾ ಕಾರ್ಯಕರ್ತೆಯರಾದ ನಸೀಮ, ಅಂಗನವಾಡಿ ಕಾರ್ಯಕರ್ತೆಯರಾದ ಅಕ್ಷತಾ ಪೈ, ನಮ್ರತಾ, ಸ್ಥಳೀಯರಾದ ಸುರೇಶ್ ಪೂಜಾರಿ, ಶೋನ್ ಮೋನಿಸ್, ರೋಶ್ನಿ…

Read More

ಪರಿಸರ ಸಂರಕ್ಷಣೆಯು ನಮ್ಮೆಲ್ಲರ ಜವಾಬ್ದಾರಿ: ಸಂಸದ ಕೋಟಾ

ಪರಿಸರ ಸಂರಕ್ಷಣೆಯು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ದೇವರು ನೀಡಿದ ಪ್ರಕೃತಿ ಸಂಪತ್ತನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು . ಅನ್ನಪೂರ್ಣ ನರ್ಸರಿಯ ಪ್ರಾಯೋಜಕತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಮೃದ್ಧಿ ಮಹಿಳಾ ಮಂಡಳಿ, ಪೇತ್ರಿ ಲಯನ್ಸ್ ಕ್ಲಬ್ ಮತ್ತು ಸೈಂಟ್ ಪೀಟರ್ ಚರ್ಚ್ ಸಹಭಾಗಿತ್ವದಲ್ಲಿ ಪೇತ್ರಿ ರಸ್ತೆಯ ವಿಭಜಕದಲ್ಲಿ ಸುಮಾರು 1000 ಗಿಡ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಸಕರಾದ ಯಶಪಾಲ್ ಎ ಸುವರ್ಣ ಇವರು ಪ್ರಧಾನಿ ನರೇಂದ್ರ…

Read More

ರಮೋಲಜೆ. ಹೆಜಮಾಡಿ ನುಡಿನಮನ ಕಾರ್ಯಕ್ರಮ

ಹೆಜಮಾಡಿ : ಜೈ ಕರ್ನಾಟಕ ಮಹಿಳಾ ಸಮಾಜ (ರಿ.), ಹೆಜಮಾಡಿಯ ಸ್ಥಾಪಕಾಧ್ಯಕ್ಷೆ ಹಾಗೂ ಗೌರವಾಧ್ಯಕ್ಷೆಯಾಗಿದ್ದ ದಿವಂಗತ ಶ್ರೀಮತಿ ರಮೋಲ ಜೆ. ಹೆಜಮಾಡಿ ಅವರ ನುಡಿನಮನ ಕಾರ್ಯಕ್ರಮವು ಇತ್ತೀಚೆಗೆ ಹೆಜಮಾಡಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜನಪ್ರಿಯ ನಾಯಕ ವಿನಯ ಕುಮಾರ್ ಸೊರಕೆ ಅವರು ರಮೋಲ ಅಮ್ಮನವರು ಮಹಿಳಾ ಸಬಲೀಕರಣ, ಸಮಾಜಸೇವೆ ಹಾಗೂ ಸಂಘಟನಾ ಕ್ಷೇತ್ರದಲ್ಲಿ ಸಲ್ಲಿಸಿದ ಅಮೂಲ್ಯ ಸೇವೆಯನ್ನು ಸ್ಮರಿಸಿ ನುಡಿನಮನ ಸಲ್ಲಿಸಿದರು. ಬಿಲ್ಲವ ಸಂಘದ ಅಧ್ಯಕ್ಷ ಮೋಹನದಾಸ್ ಹೆಜಮಾಡಿ ಅವರು ಮಾತನಾಡಿ, ಜೈ ಕರ್ನಾಟಕ…

Read More