ಕಾರ್ಕಳ ತಾಲೂಕು ಮಟ್ಟದ ಕ್ರೀಡಾಕೂಟ:ಕುಚ್ಚೂರಿನ ರೋಶಿತ್ ಚಾಂಪಿಯನ್
ಕಾರ್ಕಳ ತಾಲೂಕು ಮಟ್ಟದ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ 14 ರ ವಯೋಮಾನದ ಬಾಲಕರ ವಿಭಾಗದಲ್ಲಿ ಸರಕಾರಿ ಪ್ರೌಢಶಾಲೆ ಕುಚ್ಚೂರಿನ ರೋಶಿತ್ ಚಾಂಪಿಯನ್ ಆಗಿ ಮೂಡಿ ಬಂದಿದ್ದಾನೆ.
600ಮೀ ಪ್ರಥಮ, 400ಮೀ ಪ್ರಥಮ, 4*100ಮೀ ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆಯುವುದರ ಮುಖೇನ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾನೆ.
ಮೂಲತ ಹೆಬ್ರಿಯ ಬಂಗಾರಗುಡ್ಡೆಯ ಬೆಳ್ವೆ ಪಂಚಾಯತಿಯ ಸಿಬ್ಬಂದಿಯಾದ ಶ್ರೀ ರಾಜು ಮತ್ತು ಶೋಭ ದಂಪತಿಗಳ ಪುತ್ರನಾಗಿರುವ ಈತನು ದೈಹಿಕ ಶಿಕ್ಷಣ ಶಿಕ್ಷಕಿಯಾದ ಶ್ರೀಮತಿ ಕಮಲಿನಿಯವರಲ್ಲಿ ತರಬೇತಿಯನ್ನು ಪಡೆದಿರುತ್ತಾನೆ. ಇವನ ಕ್ರೀಡಾ ಭವಿಷ್ಯ ಉಜ್ವಲವಾಗಿರಲಿ.

