ಜಿಲ್ಲಾ ಮಟ್ಟದ ಕ್ರೀಡಾಕೂಟ: ಹೆಬ್ರಿ ಬಂಗಾರಗುಡ್ಡೆಯ ರೋಶಿತ್ ಚಾಂಪಿಯನ್

ಶಾಲಾ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆಯ ವತಿಯಿಂದ ನಡೆದ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಕುಚ್ಚೂರು ಪ್ರೌಢಶಾಲೆಯಲ್ಲಿ ಓದುತ್ತಿರುವ ಬಂಗಾರಗುಡ್ಡೆಯ ರೋಶಿತ್ 14 ರ ವಯೋಮಾನದ ಬಾಲಕರ ವಿಭಾಗದಲ್ಲಿ *600ಮೀ ಪ್ರಥಮ, 400ಮೀ ದ್ವಿತೀಯ ಹಾಗೂ 4*100ಮೀ ರಿಲೇ ತೃತೀಯ* ಸ್ಥಾನವನ್ನು ಪಡೆಯುವುದರ ಮುಖೇನ *ವೈಯುಕ್ತಿಕ ಚಾಂಪಿಯನ್* ಆಗಿ ಮೂಡಿ ಬಂದಿದ್ದಾನೆ.

ಈ ಹಿಂದೆ ನಡೆದಂತಹ ತಾಲೂಕು ಮಟ್ಟದ ಕ್ರೀಡಾಕೂಟದಲ್ಲೂ ಚಾಂಪಿಯನ್ ಆಗಿರುವ ಈತನು ಜಿಲ್ಲಾ ಮಟ್ಟದಲ್ಲೂ ಚಾಂಪಿಯನ್ ಆಗಿ ಮೂಡಿಬಂದು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾನೆ. ಬೆಳ್ವೆ ಪಂಚಾಯತ್ ಸಿಬ್ಬಂದಿಯಾದ ಶ್ರೀ ರಾಜು ಮತ್ತು ಶೋಭಾ ದಂಪತಿಗಳ ಮಗನಾಗಿದ್ದು ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಕಮಲಿನಿಯವರು ತರಬೇತಿಯನ್ನು ನೀಡಿರುತ್ತಾರೆ.

Leave a Reply

Your email address will not be published. Required fields are marked *