ಪಾದೆಮಠ ಕ್ಷೇತ್ರ ಮಹಾತ್ಮೆ ಪ್ರಸಂಗ ರಚನೆಗೆ ಚಾಲನೆ
ಕೊಕ್ಕರ್ಣೆ: ಪುರಾಣ ಮತ್ತು ಇತಿಹಾಸ ಪ್ರಸಿದ್ಧ ಕೊಕ್ಕರ್ಣೆ ಸಮೀಪದ ಪಾದೆಮಠ ಶ್ರೀ ವೀರೇಶ್ವರ ಕ್ಷೇತ್ರ ಮಹಾತ್ಮೆ ಪ್ರಸಂಗ ರಚಿಸಲು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಡಗಿನ ಯಕ್ಷಗಾನ ಪ್ರಸಂಗಕರ್ತ ಪಿ ವಿ ಆನಂದ ಸಾಲಿಗ್ರಾಮ ಅವರಿಗೆ ಕ್ಷೇತ್ರದ ಮೊಕ್ತೇಸರರಾದ ಶಶಿಧರ ಶೆಟ್ಟಿಯವರ ಸೂಚನೆಯಂತೆ ನ 2 ರಂದು ಪ್ರಸಾದ ಪ್ರದಾನವನ್ನು ಮಾಡಲಾಯಿತು.
ಪಿ ವಿ ಆನಂದರು ಇದನ್ನು ತಮ್ಮ 79ನೆಯ ಪ್ರಸಂಗವಾಗಿ ರಚನೆ ಮಾಡಲಿದ್ದು, ಕಳವಾಡಿ ಶ್ರೀ ಈಶ್ವರ ಮಾರಿಕಾಂಬ ಕೃಪಾಪೋಷಿತ ಯಕ್ಷಗಾನ ಮಂಡಳಿಯವರು ಈ ಸಾಲಿನ ತಿರುಗಾಟದಲ್ಲಿ ಪ್ರದರ್ಶನ ಮಾಡಲಿದ್ದಾರೆ.
ಕ್ಷೇತ್ರದ ಪ್ರಧಾನ ಅರ್ಚಕರು ಮತ್ತು ತಂತ್ರಿಗಳಾದ ಪಿ ಪ್ರಭಾಕರ ಅಡಿಗ ಪ್ರಸಾದ ವಿತರಣೆ ಮಾಡಿದ್ದು, ಕಳವಾಡಿ ಮೇಳದ ಸಂಚಾಲಕರಾದ ಉದಯ್ ಕುಮಾರ್ ಸಂತೆಕಟ್ಟೆ, ಮೇಳದ ಪ್ರತಿನಿಧಿ ಅರುಣ್ ಕುಮಾರ್ ಮತ್ತು ಕ್ಷೇತ್ರದ ಕಚೇರಿ ಸಹಾಯಕ ಬಾಲಕೃಷ್ಣ ಉಪಸ್ಥಿತರಿದ್ದರು.

