ಕೀಳಂಜೆ ಸತೀಶ್ ಪೂಜಾರಿ ಕೋರಿಕೆ ಮೇರೆಗೆ ಬಸ್ ನಿಲ್ದಾಣ ದುರಸ್ಥಿ

ಉಡುಪಿಯ ಜಿಲ್ಲೆಯ ಸಾಮಾಜಿಕ ಹೋರಾಟಗಾರ ಸತೀಶ್ ಪೂಜಾರಿ ಕೀಳಂಜೆ ಇವರ ನಿರಂತರ ಹೋರಾಟದ ಮತ್ತು ವಿಶೇಷ ಕಾಳಜಿ ಮೇರೆಗೆ ಉಡುಪಿ ಜಿಲ್ಲೆಯ ಉಪ್ಪೂರು ಗ್ರಾಮದ ಉದ್ಯಮಿಯೊಬ್ಬರು ಹಾವಂಜೆ ಗ್ರಾಮದ ಬ್ಯಾಂಕ್ ಆಫ್ ಬರೋಡ ಎದುರುಗಡೆ ಇರುವ ಬಸ್ಟಾಂಡ್ ಅನ್ನು ನವೀಕರಣಗೊಳಿಸಲು ಸಜ್ಜಾಗಿದ್ದಾರೆ. ಹಾವಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಲಗಿರಿ ಇಲ್ಲಿನ ಶಿಥಿಲ ವ್ಯವಸ್ಥೆಯಲ್ಲಿ ಇದ್ದ ಬಸ್ ಸ್ಟ್ಯಾಂಡ್ ಅವ್ಯವಸ್ಥೆ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ವರದಿ ಆಗಿತ್ತು. ಈ ಬಸ್ ನಿಲ್ದಾಣದ ನಾಲ್ಕು ಪಿಲ್ಲರೂ ಕೂಡ ಸಂಪೂರ್ಣ ಕುಸಿದಿದ್ದು ಮತ್ತು ಇಂದೋ ನಾಳೆ ಬೀಳುವ ಸನ್ನಿವೇಶ ಇರುವ ಬಗ್ಗೆ ಪತ್ರಿಕೆಯಲ್ಲಿ ಮಾಹಿತಿ ಪ್ರಕಟಗೊಂಡಿತ್ತು. ಇದು ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ಮಳೆ ಮತ್ತು ಗಾಳಿ ಬರುವ ಸಮಯದಲ್ಲಿ ಅಪಾಯಕಾರಿಯಾಗಿ ಪರಿಣಮಿಸಿತ್ತು. ಸಾಮಾಜಿಕ ಕಾರ್ಯಕರ್ತರಾದ ಸತೀಶ್ ಪೂಜಾರಿ ಕೀಳಂಜಿಯವರು ಪ್ರಯಾಣಿಕರ ಕಾಳಜಿಯ ಉದ್ದೇಶ ಇಟ್ಕೊಂಡು ಪರಿಣಾಮ , ಈ ಮೊದಲು ವಿಜಯ ಬ್ಯಾಂಕ್ ನವರು ಈ ಬಸ್ ಸ್ಟಾಂಡ್ ಅನ್ನು ನಿರ್ಮಿಸಿದ್ದರು. ಕಾಲಕ್ರಮೇಣ ಶಿಥಿಲ ಬಸ್ ಸ್ಟ್ಯಾಂಡ್ ಬೀಳುವ ಸನ್ನಿವೇಶ ಇದ್ದಿತ್ತು. ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಇದನ್ನು ನಿರ್ಮಿಸಿದ ಬ್ಯಾಂಕಿಗೂ ಸತೀಶ್ ಪೂಜಾರಿಯವರು ತಿಳಿಸಿದ್ದರು. ಆದರೂ ಯಾರೂ ಕೂಡ ಎಚ್ಚೆತ್ತುಕೊಳ್ಳದ ಸಮಯದಲ್ಲಿ ಉದಾರ ದಾನಿ ಆಗಿ ಬಂದ ಉಪ್ಪೂರಿನ ಹೆಸರಾಂತ ಉದ್ಯಮಿಯಾದ ಕೊಡಗೈದಾನಿ ರಾಯಲ್ ರತ್ನಾಕರ್ ಶೆಟ್ಟಿ ಅವರು. ದಿವಂಗತ ಡಾಕ್ಟರ್ ರಾಘವೇಂದ್ರ ಭಟ್ ಆರೂರು ಇವರ ಸ್ವರ್ಣಾರ್ಥವಾಗಿ ಬಸ್ ಸ್ಟಾಂಡ್ ಅನ್ನು ನಿರ್ಮಿಸಲು ನಿರ್ಧರಿಸಿದ್ದಾರೆ. ಬಸ್ ಸ್ಟಾಂಡಿನ ಅಡಿಪಾಯ ಈ ಮೊದಲು ಇದ್ದದ್ದೇ ಆಗಿರುತ್ತದೆ. ಇದಕ್ಕೆ 4 ಕಬ್ಬಿಣದ ಪಿಲ್ಲರ್ ಮತ್ತು ರೂಪಿನ್ ಶೀಟನ್ನು. ಹೊಸತಾಗಿ ಅಳವಡಿಸುವುದು ಎಂದು ನಿರ್ಧರಿಸಲಾಗಿದೆ. ಇದು ಪ್ರಯಾಣಿಕರಿಗೆ ಸಂತಸ ತಂದಿದೆ. ಊರಿನ ಈ ಸಾರ್ವಜನಿಕ ಸಮಸ್ಯೆಗೆ ಹೋರಾಟಕ್ಕೆ ಉದ್ಯಮಿಯೊಬ್ಬರು ಮುಂದೆ ಬಂದು ನಿರ್ಮಿಸಿ ಬಸ್ ಸ್ಟ್ಯಾಂಡ್ ಮೇಲ್ಚಾವಣಿಯನ್ನು ಮಾಡಿ ಕೊಟ್ಟಿರುವುದು. ಪ್ರಯಾಣಿಕರಲ್ಲಿ ಸಂತಸ ತಂದಿದೆ. ಈ ಉದ್ಯಮಿಯವರ ಕುಟುಂಬಕ್ಕೆ ಉದ್ಯಮಿಯವರಿಗೆ ದೇವರು ಸದಾ ಆರೋಗ್ಯ ಸಂಪತ್ತನ್ನು ನೀಡಲಿ ಎಂದು ಹಾವಂಜೆ ಸಾರ್ವಜನಿಕರ ಪರವಾಗಿ ಸತೀಶ್ ಪೂಜಾರಿ ಕೀಳಂಜೆ ಅವರು ಹಾರೈಸಿದ್ದಾರೆ.

Leave a Reply

Your email address will not be published. Required fields are marked *