ಕುಂದಾಪುರ ಕುಲಾಲ ಸಂಘದಿಂದ ಜೂನ್ 7ರಂದು ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಕುಂದಾಪುರ ಕುಲಾಲ ಸಂಘ ಮತ್ತು ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆಗಳ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟದ (ರಿ) ಮಂಗಳೂರು ಇವರ ನೇತೃತ್ವದಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮವು ಕುಲಾಲ ಸಮುದಾಯದ ಭವನದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಕುಲಾಲ ಹೆಮ್ಮಾಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕುಂದಾಪುರ ವೆಂಕಟರಮನ ಪಿಯು ಕಾಲೇಜು ಇದರ ಪ್ರಾಂಶುಪಾಲರಾದ ಶ್ರೀ ಸಂದೀಪ ಗಾಣಿಗ ಅವರು ಭಾಗವಹಿಸಿ ವಿಧ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು ಇದೆ ಸಂದರ್ಭದಲ್ಲಿ ಶ್ರೀಯುತರನ್ನು ಸಂಘದ ಪರವಾಗಿ ಅಭಿನಂದಿಲಾಯಿತು. ಕಾರ್ಯಕ್ರಮದಲ್ಲಿ ಸಂಘದ ವತಿಯಿಂದ ನಡೆಸಿರುವ ಪ್ರಬಂಧ ಸ್ಪರ್ಧೆ ವಿಜೇತರನ್ನು ಘೋಷಿಸಿ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನರವರಿಂದ ನಗದು ಸಹಿತ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ಕುಂಬಾರರ ಮಹಾಸಭಾ ಇದರ ರಾಜ್ಯ ಪ್ರಧಾನಕಾರ್ಯದರ್ಶಿಯಾದ ಶ್ರೀ ಸತೀಶ್ ಕುಲಾಲ ಕಡಿಯಾಳಿ , ವಲಯ ಅರಣ್ಯ ಅಧಿಕಾರಿಯಾದ ಪ್ರಭಾಕರ್ ಕುಲಾಲ ಜನ್ಸಾಲೆ , ಕುಂದಾಪುರ ಸಮಾಜ ಕಲ್ಯಾಣ ಇಲಾಖೆಯ ಕಛೇರಿ ಅಧಿಕ್ಷಕರಾದ ಶ್ರೀ ರಮೇಶ್ ಕುಲಾಲ ಕಾವ್ರಾಡಿ , ಉದ್ಯಮಿಗಳಾದ ಶ್ರೀ ಸುರೇಶ್ ಕುಲಾಲ ವಕ್ವಾಡಿ , ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಸತೀಶ್ ಕುಲಾಲ ನಡೂರು , ಯುವ ವೇದಿಕೆ ಉಡುಪಿ ಜಿಲ್ಲಾ ಅಧ್ಯಕ್ಷರಾದ ಮಂಜುನಾಥ ಕುಲಾಲ ಜನ್ಸಾಲೆ , ಮಹಿಳಾ ಘಟಕದ ಅಧ್ಯಕ್ಷರಾದ ಅನೀತಾ ಅಶೋಕ ಕುಲಾಲ ನೂಜಿ, ಯುವ ವೇದಿಕೆ ಬೈಂದೂರು ಅದ್ಯಕ್ಷರಾದ ಸುರೇಶ್ ಕುಲಾಲ ಮೆಟ್ಟಿನಹೊಳೆ , ಯುವ ವೇದಿಕೆ ಕುಂದಾಪುರ ಅಧ್ಯಕ್ಷರಾದ ಶ್ರೀ ಹರೀಶ್ ಕುಲಾಲ ಕಟ್ಕೇರೆ , ಮೆಕ್ಕೆಕಟ್ಟು ಕುಲಾಲ ಸಂಘದ ಅಧ್ಯಕ್ಷ ರಾದ ಶ್ರೀ ಕೃಷ್ಣ ಕುಲಾಲ ನಡೂರು , ಯುವ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ್ ಕುಲಾಲ್ ಮೊಳಹಳ್ಳಿ, ಮಹಿಳಾ ಘಟಕದ ಕಾರ್ಯದರ್ಶಿ ದಿವ್ಯ ಸುರೇಶ್ ಕುಲಾಲ್ ನಿಡ್ಲಾಡಿ, ಹರೀಶ್ ಕುಲಾಲ್ ಕೆದೂರು ಉಪಸ್ಥಿತರಿದ್ದರು .
ಕಾರ್ಯಕ್ರಮದಲ್ಲಿ 90% ಮೇಲ್ಪಟ್ಟು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 4 ನೇ ರ್ಯಾಂಕ್ ಪಡೆದ ಕಾವ್ಯ ಶಿರ್ವ ಹಾಗೂ ವಿಜ್ಞಾನ ವಿಭಾಗದಲ್ಲಿ 10ನೇ ರ್ಯಾಂಕ್ ಬಂದ ಮಹಿಮಾ ಸಿದ್ಧಾಪುರ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಶ್ರೀಮತಿ ರೇಖಾ ಪ್ರಭಾಕರ್ ಕುಲಾಲ ನಿರೂಪಿಸಿದರು , ವಿಠಲ ಕುಲಾಲ ಹೆಸ್ಕೂತ್ತೂರು ಪ್ರಸ್ತಾವನೆ ಮಾಡಿದರು, ರಾಜು ಕುಲಾಲ ನೂಜಿ ಸ್ವಾಗತ ಮಾಡಿದರು, ಸಂಘದ ಕಾರ್ಯದರ್ಶಿ ಸುರೇಶ್ ಕುಲಾಲ ಆಜ್ರಿ ಧನ್ಯವಾದ ಹೇಳಿದರು. ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು , ಸಂಘದ ಸದಸ್ಯರು, ಸಂಘದ ಪದಾಧಿಕಾರಿಗಳು, ಯುವ ವೇದಿಕೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

