ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಮುಲ್ಕಿ– ಕಾರ್ನಾಡ್ .ಶಾಖೆನಬಾರ್ಡ್ ಸಹಯೋಗದೊಂದಿಗೆ ಗ್ರಾಹಕರಿಗೆ ಆರ್ಥಿಕ ಅರಿವುಜಾಗೃತಿ ಕಾರ್ಯಕ್ರಮ
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಮುಲ್ಕಿ– ಕಾರ್ನಾಡ್ ಶಾಖೆಯ ವತಿಯಿಂದ ನಬಾರ್ಡ್ ಸಹಯೋಗದೊಂದಿಗೆ ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮವನ್ನು ದಿನಾಂಕ 09.09.2026 ರಂದು ಶಾಖಾ ವಠಾರದಲ್ಲಿ ಆಯೋಜಿಸಲಾಯಿತು.ಕಾರ್ಯಕ್ರಮವನ್ನು ಬ್ಯಾಂಕಿನ ನಿರ್ದೇಶಕರಾದ ಶ್ರೀ ಮೋನಪ್ಪ ಶೆಟ್ಟಿ, ಎಕ್ಕಾರು ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಹಕರು ಬ್ಯಾಂಕಿನ ವಿವಿಧ ಸಾಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು, ಸಾಲವನ್ನು ನಿಗದಿತ ಸಮಯದಲ್ಲಿ ಮರುಪಾವತಿಸುವುದರ ಜೊತೆಗೆ ತಮ್ಮ ಆರ್ಥಿಕ ವ್ಯವಹಾರಗಳ ಬಗ್ಗೆ ಸದಾ ಜಾಗೃತರಾಗಿರಬೇಕು ಎಂದು ತಿಳಿಸಿದರು.ಲೀಡ್ ಬ್ಯಾಂಕಿನ FLC ಅಧಿಕಾರಿ ಶ್ರೀ ಲತೇಶ್ ಅವರು ಗ್ರಾಹಕರಿಗೆ ಆರ್ಥಿಕ ಅರಿವು ಮತ್ತು ಜಾಗೃತಿಯ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು. ಉಳಿತಾಯದ ಮಹತ್ವ, ಸಾಲ ಸೌಲಭ್ಯಗಳ ಸರಿಯಾದ ಬಳಕೆ, ಹಣಕಾಸಿನ ಯೋಜನೆ ಹಾಗೂ ಸುರಕ್ಷಿತ ಬ್ಯಾಂಕಿಂಗ್ ವ್ಯವಹಾರಗಳ ಕುರಿತು ವಿವರಿಸಿದರು.ಮುಲ್ಕಿ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿಯಾದ ಶ್ರೀಮತಿ ಸ್ವಾತಿ ಅವರು ಸೈಬರ್ ಸುರಕ್ಷತೆ ಮತ್ತು ಸೈಬರ್ ಅಪರಾಧಗಳ ಕುರಿತು ವಿವರವಾದ ಮಾಹಿತಿ ನೀಡಿದರು. ಆನ್ಲೈನ್ ವಂಚನೆ, OTP, PIN, ಪಾಸ್ವರ್ಡ್ ಹಾಗೂ ಬ್ಯಾಂಕ್ ಖಾತೆಯ ಮಾಹಿತಿಯನ್ನು ಅಪರಿಚಿತರಿಗೆ ಹಂಚಿಕೊಳ್ಳದಂತೆ ಗ್ರಾಹಕರಿಗೆ ಎಚ್ಚರಿಕೆ ನೀಡಿದರು.ಬ್ಯಾಂಕಿನ ನಿವೃತ್ತ ಹಿರಿಯ ನಿರೀಕ್ಷಕರಾದ ಶ್ರೀ ಪ್ರಭೋದಚಂದ್ರ ಹೆಜಮಾಡಿ ಅವರು ಬ್ಯಾಂಕಿನ ವಿವಿಧ ಆಕರ್ಷಕ ಹಾಗೂ ಗ್ರಾಹಕ ಸ್ನೇಹಿ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ನವೋದಯ ಸ್ವಸಹಾಯ ಸಂಘಗಳ ಪ್ರೇರಕಿ ಶ್ರೀಮತಿ ಆಶಾ ಶಿವರಾಮ್, ಕಿಲ್ಪಾಡಿ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಶ್ರೀಮತಿ ಮಾಧುರಿ ಬಿ. ಶೆಟ್ಟಿ, ಕಾರ್ನಾಡ್ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಶ್ರೀಮತಿ ಭಾರತಿ, ಹಿರಿಯ ಕೃಷಿಕರಾದ ಶ್ರೀ ರಾಮಣ್ಣ ಶೆಟ್ಟಿ ಸೇರಿದಂತೆ ಹಲವಾರು ಗಣ್ಯರು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಶಾಖಾ ಸಿಬ್ಬಂದಿಯಾದ ಶ್ರೀಮತಿವಿನಯ ಅವರು ನಿರೂಪಿಸಿದರು. ಶಾಖಾ ವ್ಯವಸ್ಥಾಪಕರಾದ ಶ್ರೀಮತಿ ಲಾವಣ್ಯ ಅವರು ಸ್ವಾಗತಿಸಿದರು. ಶಾಖಾ ಸಿಬ್ಬಂದಿಯಾದ ಶ್ರೀ ಪ್ರಮೋದ್ ಪಾಟೀಲ್ ಅವರು ಧನ್ಯವಾದ ಸಮರ್ಪಿಸಿದರು.ಕಾರ್ಯಕ್ರಮವು ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳು, ಆರ್ಥಿಕ ನಿರ್ವಹಣೆ ಹಾಗೂ ಸೈಬರ್ ಸುರಕ್ಷತೆಯ ಕುರಿತು ಉಪಯುಕ್ತ ಮಾಹಿತಿಯನ್ನು ನೀಡುವ ಮೂಲಕ ಯಶಸ್ವಿಯಾಗಿ ನೆರವೇರಿತು

