ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮುದರಂಗಡಿ ಶಾಖೆ – ನಬಾರ್ಡ್ ಸಹಯೋಗದೊಂದಿಗೆ ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಾಗಾರ/ಜನ ಸಂಪರ್ಕ ಸಭೆ.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮುದರಂಗಡಿ ಶಾಖೆ – ನಬಾರ್ಡ್ ಸಹಯೋಗದೊಂದಿಗೆ ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಾಗಾರ/ಜನ ಸಂಪರ್ಕ ಸಭೆಯು ದಿನಾಂಕ 09.09.2026 ರಂದು ಶಾಖಾ ವಠಾರದಲ್ಲಿ ಜರುಗಿತು.
ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಶಾಖಾ ವ್ಯವಸ್ಥಾಪಕರಾದ ಸುನಿಲ್ ಕುಮಾರ್ ಎಂ ರವರು ವಹಿಸಿದ್ದರು. ದ. ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾದ ರಾಜೇಶ್ ರಾವ್ ಪಾಂಗಾಳ ಕಾರ್ಯಗಾರ ಉದ್ಘಾಟಿಸಿ ಗ್ರಾಹಕರು ಆರ್ಥಿಕ ವ್ಯವಹಾರಗಳ ಬಗ್ಗೆ ಜಾಗೃತರಾಗ ಬೇಕೆಂದು ಕರೆಯಿತ್ತರು.
ಮುಖ್ಯ ಅತಿಥಿಗಳಾಗಿ ಬ್ಯಾಂಕಿನ ನಿವೃತ್ತ ಡಿ. ಜಿ. ಎಂ ನಿತ್ಯಾನಂದ ಶೇರಿಗಾರ, FLC ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಮೀರಾ, ಪ್ರದೀಪ್ ಕುಮಾರ್, ರುಡ್ಸೆಟ್ ಬ್ರಹ್ಮಾವರ ಇದರ ಸಿಬ್ಬಂದಿ ಚೈತ್ರ, ಇವರು ಭಾಗವಹಿಸಿ ಉಪಯುಕ್ತ ಮಾಹಿತಿಗಳನ್ನು ನೀಡಿದರು.ನವೋದಯ ಸ್ವ ಸಹಾಯ ಸಂಘಗಳ ಪ್ರೇರಕಿ ಶ್ರೀಮತಿ ಗೀತಾ ಸಿ.ಎಸ್, ಸೊಸೈಟಿ ಸೂಪರ್ ವೈಸರ್ ಬಾಲಗೋಪಾಲ್ ಬಲ್ಲಾಳ್, ಶಾಖೆಯ ಉಸ್ತುವಾರಿ ಅಧಿಕಾರಿ ಡೈನಾ ಡಿಸೋಜ,ಸಿಬ್ಬಂದಿ ಗಳಾದ, ನಮಿತಾ ಎಸ್. ಎನ್, ಮಾನಸ, ಮಿಥುನ್ ಸಾಲ್ಯಾನ್, ಪಿಗ್ಮಿ ಸಂಗ್ರಹಗಾರರಾದ ಸುಲೋಚನಾ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.
ಮನೋಹರ್ ಹೆಜಮಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸ್ವ ಸಹಾಯ ಸಂಘದ ಸದಸ್ಯೆ ಶ್ರೀಮತಿ ಪುಷ್ಪ ರವರು ಪ್ರಾರ್ಥನೆ ಗೈದರು.

