ನೀರೆ -ಬೈಲೂರು ಬಿ.ಇ.ಯಂ ಶಾಲಾ ಪ್ರಾರಂಭೋತ್ಸವ, ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ಶಾಶ್ವತ ಕುಡಿಯುವ ನೀರಿನ ಯೋಜನೆಯ ಲೋಕಾರ್ಪಣೆ.
ಕಾರ್ಕಳ ನೀರೆ -ಬೈಲೂರು ಬಿ.ಇ.ಯಂ ಶಾಲಾ ನೂತನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ , ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ವಿಶಿಷ್ಟ ಶ್ರೇಣಿ ಮತ್ತು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡ ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ಶಾಶ್ವತ ಕುಡಿಯುವ ನೀರಿನ ಯೋಜನೆಯ ಲೋಕಾರ್ಪಣೆ ಕಾರ್ಯಕ್ರಮವು ಜೂನ್ ಒಂದರಂದು ಶಾಲೆಯಲ್ಲಿ ಜರಗಿತು.
ಸಂಸ್ಥೆಯ ಹಳೆವಿದ್ಯಾರ್ಥಿಗಳು ಪುಷ್ಪಾರ್ಪಚನೆ ಗೈದು ವಿದ್ಯಾರ್ಥಿಗಳನ್ನು ಸ್ವಾಗತಿಸಿದರು, ಎಸ್.ಎಸ್.ಎಲ್.ಸಿ ಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಕುಮಾರಿ ಲಿಸಾ ಬರ್ಬೋಜ 625 ರಲ್ಲಿ 624 ಅಂಕ ಮತ್ತು ಒಂಬತ್ತನೇ ಸ್ಥಾನ ಪಡೆದ ದಿಯಾ, ವಿಶಿಷ್ಟ ಶ್ರೇಣಿಯಲ್ಲಿ ಪಾಸ್ ಆದ ಕೆ.ಹರ್ಷಿತ್, ಭವಿಷ್ ಶೆಟ್ಟಿಗಾರ್, ದಿಯಾ ಕೆ ಸುವರ್ಣ ಫಾತಿಮಾತುಲ್ ಹುಧಾ, ಆಝಾ ಎನ್, ಶಿವಪ್ರಸಾದ್ ಆರ್, ಪ್ರಾಚಿ ಹೆಗ್ಡೆ, ಅಯುಷ್ಯ ಶೈಮಾ, ಶ್ರೀಶನ್ ಆರ್ ಪೂಜಾರಿ, ಶ್ರಾವ್ಯ ಎಚ್ ಶೆಟ್ಟಿ, ಸಿಂಚನ ,ಎಸ್ ಶೆಟ್ಟಿ, ಮತ್ತು ಪಿ.ಯುಸಿ ಯಲ್ಲಿ ಲೆನಿಷಾ ಬರ್ಬೋಜ , ಪ್ರಣಮ್ಯ ಆಚಾರ್ಯ, ಶ್ರೇಯಸ್ . ಪ್ರೀಯಾ ಡಿ ಓ ವಿ ಕೊಪ್ಪ, ರಜತ್ ಶೆಟ್ಟಿ, ಆನ್ಸನ್ ವಿಶಾಲ್ ಡಿಸೋಜ, ಭೈರವಿ, ಮನ್ವಿತ್, ಪ್ರಸಾದ್ ಎಸ್ ನಾಯಕ್, ಮಹಮ್ಮದ್ ಇಶಾನ್ ಉಮ್ಮಾರ್, ಇವರುಗಳನ್ನು ಮತ್ತು ಶಾಲೆಯಲ್ಲಿ ಪ್ರತಿಭಾವಂತರಾದ ಚೈತ್ರಾ ಮನೀಷ್, ದಿವಿಷಾ, ಶ್ರೀ ರಕ್ಷಾ, ನೇಹನ್ ಹುಸೇನ್, ಅನ್ವಿತಾ, ಸಿದ್ದಿ ಎಸ್ ಶೆಟ್ಟಿ, ಶ್ರೇಯಾ, ಶ್ರಾವ್ಯ, ಐಶಾನಿ ಎನ್ ಪೋಜಾರಿ, ಯಶ್ವಿತ್ ಎಸ್, ಕೆ ಮೊಹಮ್ಮದ್ ಈಶಾನ್, ಇವರುಗಳನ್ನು ಗೌರವಿಸಿ ಶುಭ ಹಾರೈಸಲಾಯಿತು.
ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು, ಯೋಜನೆಯ ಕೆಲಸ ಕಾರ್ಯದಲ್ಲಿ ಸಹಕರಿಸಿದ , ಶಂಕರ್ ಆಚಾರ್ಯ , ದಿವಿನ್ ಗುಂಡಿಯಡ್ಕ, ಶಬ್ಬೀರ್, ಪ್ರಕಾಶ್ ಅಂಚನ್, ರವರನ್ನು ಅಭಿನಂಧಿಸಲಾಯಿತು.
ಕುಡಿಯುವ ನೀರಿನ ಯೋಜನೆಯ ಪ್ರಮುಖ ರುವಾರಿ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಅರ್ನವ ಕ್ಯಾಶೂಸ್ ನ ಮಾಲಕ ರಮೇಶ್ ಕಿಣಿಯವರನ್ನು ವಿಶೇಷವಾಗಿ ಗೌರವಿಸಲಾಯಿತು ಸಂಸ್ಥೆಯ ಗೌರಾವಾಧ್ಯೆಕ್ಷೆ ಪ್ರೇಮಲತಾ ಜತ್ತನ್ನ ದೀಪ ಬೆಳಗಿಸುವದರ ಮೂಲಕ ಯೋಜನೆಯನ್ನು ಉದ್ಘಾಟಿಸಿದರು. ಯೋಜನೆಗೆ ವಿಶೇಷ ಸಹಕಾರ ನೀಡಿದ ಜೆ.ಸುಧೀರ್ ಹೆಗ್ಡೆ, ಮತ್ತು ಸಂತೋಷ್ ವಾಗ್ಲೆ ಯವರನ್ನು ಸಂಘಟಕರು ಅಭಿನಂದಿಸಿದರು.
ಈ ಸಂಧರ್ಭದಲ್ಲಿ ಪೋಷಕರ ಸಭೆಯನ್ನು ಅಯೋಜಿಸಲಾಯಿತು.
ಜತ್ತನ್ನ ಎಜ್ಯುಕೇಶನ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಸುಜಯ್ ಜತ್ತನ್ನ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಶಾಲಾ ಹಳೆ ವಿದ್ಯಾರ್ಥಿ ಹಾಗು ಮಾಜಿ ಗ್ರಾಮ ಪಂಚಾಯತ್ ಸದಸ್ಯ ಹೈದರ್ ಆಲಿ, ಆಡಳಿತ ಮಂಡಳಿ ಸದಸ್ಯ ಗೋಡ್ವಿನ್ ಬೆರ್ನ್ಹಾರ್ಡಟ್, ಮುಖ್ಯಶಿಕ್ಷಕ ಸುಬ್ರಹ್ಮಣ್ಯ ಪ್ರಭು, ಉಪ ಪ್ರಾಂಶುಪಾಲೆ ಲವಿನ ಮರಿಯ ಕಾರ್ಯಕ್ರಮ ನಿರೂಪಿಸಿದರು, ಅನಿತ ಪ್ರಭು ಸ್ವಾಗತಿಸಿ, ರೇಖ ವಂದಿಸಿದರು, ದಿವ್ಯ ಅಶ್ವಿನಿ, ಸಹಕರಿಸಿದರು.

