ಹೊಸಂಗಡಿ ಕೆರೆಕಟ್ಟೆ ಶ್ರೀ ಶಾಂತೇಶ್ವರ ದೇವಸ್ಥಾನದಲ್ಲಿ28ನೇ ವರ್ಷದ ಪ್ರತಿಷ್ಠ ವರ್ಧಂತಿ ಮತ್ತು ಬ್ರಹ್ಮಕಲಶೋತ್ಸವ ಸಂಪನ್ನ
ಶ್ರೀ ಶಾಂತೇಶ್ವರ ದೇವಸ್ಥಾನ ಕೆರೆಕಟ್ಟೆ, ಹೊಸಂಗಡಿ
ಇದರ 28ನೇ ವರ್ಷದ ಪ್ರತಿಷ್ಠ ವರ್ಧಂತಿ ಮತ್ತು ಬ್ರಹ್ಮಕಲಶೋತ್ಸವ ಜೂನ್ 2ರಂದು ವೇ | ಮೂ | ಸೂರ್ಯನಾರಾಯಣ ಬಾಯರು, ಶಂಕರನಾರಾಯಣ ಇವರ ನೇತೃತ್ವದಲ್ಲಿ ನೆರವೇರಿತು. ಬೆಳಿಗ್ಗೆ ಪುಣ್ಯಾಹವಾಚನ, ಪಂಚವಿಂಶತಿಕಲಶ, ಬ್ರಹ್ಮಕುಂಭ ಸ್ಥಾಪನೆ, ಪ್ರಧಾನ ಕಲಾತತ್ವಾಧಿವಾಸ ಹೋಮ, ರುದ್ರಾಭಿಷೇಕ, ಹಾಗು ಮಹಾಮಂಗಳಾರತಿ ಪೂಜೆ ನಡೆಯಿತು.
ಬಳಿಕ ಮಹಾ ಅನ್ನಸಂತರ್ಪಣೆ ನೆರೆವೇರಿತು.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಆಡಳಿತ ಮುಕ್ತೆಸರರಾದ ಹೆಚ್. ರಾಮಕೃಷ್ಣ ಆಚಾರ್ಯ ಹಾಗು ಅರ್ಚಕರು. ಆಡಳಿತ ಮಂಡಳಿ ಸದಸ್ಯರು ಹಾಗು ಗ್ರಾಮಸ್ಥರು ಉಪಸ್ಥಿತಿ ಇದ್ದರು

