ರಮೋಲಜೆ. ಹೆಜಮಾಡಿ ನುಡಿನಮನ ಕಾರ್ಯಕ್ರಮ

ಹೆಜಮಾಡಿ : ಜೈ ಕರ್ನಾಟಕ ಮಹಿಳಾ ಸಮಾಜ (ರಿ.), ಹೆಜಮಾಡಿಯ ಸ್ಥಾಪಕಾಧ್ಯಕ್ಷೆ ಹಾಗೂ ಗೌರವಾಧ್ಯಕ್ಷೆಯಾಗಿದ್ದ ದಿವಂಗತ ಶ್ರೀಮತಿ ರಮೋಲ ಜೆ. ಹೆಜಮಾಡಿ ಅವರ ನುಡಿನಮನ ಕಾರ್ಯಕ್ರಮವು ಇತ್ತೀಚೆಗೆ ಹೆಜಮಾಡಿಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜನಪ್ರಿಯ ನಾಯಕ ವಿನಯ ಕುಮಾರ್ ಸೊರಕೆ ಅವರು ರಮೋಲ ಅಮ್ಮನವರು ಮಹಿಳಾ ಸಬಲೀಕರಣ, ಸಮಾಜಸೇವೆ ಹಾಗೂ ಸಂಘಟನಾ ಕ್ಷೇತ್ರದಲ್ಲಿ ಸಲ್ಲಿಸಿದ ಅಮೂಲ್ಯ ಸೇವೆಯನ್ನು ಸ್ಮರಿಸಿ ನುಡಿನಮನ ಸಲ್ಲಿಸಿದರು. ಬಿಲ್ಲವ ಸಂಘದ ಅಧ್ಯಕ್ಷ ಮೋಹನದಾಸ್ ಹೆಜಮಾಡಿ ಅವರು ಮಾತನಾಡಿ, ಜೈ ಕರ್ನಾಟಕ ಮಹಿಳಾ ಸಮಾಜವನ್ನು ಸ್ಥಾಪಿಸಿ ಮಹಿಳೆಯರನ್ನು ಸಂಘಟಿಸಿದ ರಮೋಲ ಅಮ್ಮನವರ ದೂರದೃಷ್ಟಿ, ನಾಯಕತ್ವ ಹಾಗೂ ಸಮಾಜಮುಖಿ ಕಾರ್ಯಗಳನ್ನು ಸ್ಮರಿಸಿದರು.

ಜೈ ಕರ್ನಾಟಕ ಯುವ ಸಂಸ್ಥೆಯ ಅಧ್ಯಕ್ಷ ಪ್ರಬೋಧ್ ಚಂದ್ರ ಹೆಜಮಾಡಿ ಪ್ರಸ್ತಾವಿಕ ಭಾಷಣ ಮಾಡಿದರು.. ಜೈ ಕರ್ನಾಟಕ ಮಹಿಳಾ ಸಮಾಜದ ಅಧ್ಯಕ್ಷೆ ಶಾರದ ಎಸ್. ಬಂಗೇರ, ಜೈ ಕರ್ನಾಟಕ ಯುವತಿ ಮಂಡಲದ ಅಧ್ಯಕ್ಷೆ ವಿಮಲಾ ದಯಾನಂದ್, ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ವಿಶಾಲ್ ವಿ. ಬಂಗೇರ ಹಾಗೂ ಜಿನರಾಜ್ ಬಂಗೇರ, ಮಾದವ ಸನಿಲ್ ಅವರು ರಮೋಲಅಮ್ಮನವರ ಮಾರ್ಗದರ್ಶನ, ನಾಯಕತ್ವ ಮತ್ತು ಸಮಾಜಸೇವೆಯನ್ನು ಸ್ಮರಿಸಿ ನುಡಿನಮನ ಸಲ್ಲಿಸಿದರು.

ಕಾರ್ಯಕ್ರಮವನ್ನು ಸಂತೋಷ್ ಪಡುಬಿದ್ರಿ ಅವರು ನಿರೂಪಿಸಿದರು.ಕಾರ್ಯಕ್ರಮದಲ್ಲಿ ದಿವಂಗತ ರಮೋಲ ಜೆ. ಹೆಜಮಾಡಿ ಅವರ ಪುತ್ರಿಯರಾದ ಡಾ. ಶೋಭಾ ಹಾಗೂ ಸಾರಿಕಾ, ಅಳಿಯಂದಿರಾದ ಮನೋಜ್ ಕುಮಾರ್ ಮತ್ತು ಅನೋಜ್ ಕುಮಾರ್ ಮತ್ತು ರಮೋಲರವರ ಕಾಲೇಜು ಸಹ ಪಾಟಿ ಗಳಾದ ಭುವನೇಶ್ವರಿ ಬಿ ಮಾರ್ಲ,ರಾಧ ಜೆ ಶೆಟ್ಟಿ ,ಉಪಸ್ಥಿತರಿದ್ದರು. ಜೈ ಕರ್ನಾಟಕ ಯುವ ಸಂಸ್ಥೆ, ಜೈ ಕರ್ನಾಟಕ ಮಹಿಳಾ ಸಮಾಜ, ಜೈ ಕರ್ನಾಟಕ ಯುವತಿ ಮಂಡಲದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *