ಲಯನ್ಸ್ ಕ್ಲಬ್ ಕುಂದಾಪುರ ವೆಯಿಟ್ ಝೋನ್ ಇದರ ಅಧ್ಯಕ್ಷ ರಾಗಿ ಹುಸೇನ್ ಹೈಕಾಡಿ ಪ್ರಮಾಣ ವಚನ ಸ್ವೀಕಾರ,

ಕುಂದಾಪುರ : ಲಯನ್ಸ್ ಕ್ಲಬ್ ಕುಂದಾಪುರ ವೆಯಿಟ್ ಝೋನ್ ಇದರ ಅಧ್ಯಕ್ಷರಾಗಿ ಹುಸೇನ್ ಹೈಕಾಡಿ ಯವರಿಗೆ ಲಯನ್ 317 ಸಿ ಯಾ ಎಲ್ ಸಿ ಐ ಎಫ್ ಸಂಯೋಜಕರಾದ ಎಮ್ ಜೆ ಎಫ್ ಲಯನ್ ಹೃಷಿಕೇಶ್ ಹೆಗ್ಡೆ ಯವರು ಪ್ರಮಾಣ ವಚನ ನೀಡಿನಾಯಕತ್ವ ಎಂಬುದು ಒಂದು ಸಾಮೂಹಿಕ ಕ್ರಿಯೆ ಎಂಬುದನ್ನು ಲಯನ್ಸ್ ಬಲವಾಗಿ ನಂಬಿದೆ,ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಸಧ್ಯಸ್ಯನಲ್ಲೂ ನಾಯಕತ್ವ ಗುಣವನ್ನು ಬೆಳೆಸಿವುದು ನಮ್ಮ ಉದ್ದೇಶ, ಪ್ರತಿಯೊಬ್ಬ ರೂ ಅವರು ಇರುವ ಕ್ಷೇತ್ರ ದಲ್ಲಿ ತಮ್ಮ ಚಾಪನ್ನು ಮೂಡಿಸಬೇಕಾದರೆ ನಾಯಕತ್ವ ದ ಶಕ್ತಿ ಬಹುಮುಖ್ಯವಾಗಿರುತ್ತದೆ.ಇದರಿಂದಲೇ ನಾಯಕತ್ವದ ಬೆಳವಣಿಗೆ ಮಹತ್ವ ನೀಡುತ್ತಿದ್ದೇವೆ ಎಂದು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಸಮಾಜದ ಕಟ್ಟಕಡೆಯ ಮನುಷ್ಯ ಕೂಡ ಗೌರವಯು ತವಾದ ಬದುಕನ್ನು ಬಾಳಬೇಕು. ಇದು ಲಯನ್ಸ್ ನ ನಿಜವಾದ ಆಶಯ. ಹಲವಾರು ಕಾರಣ ಗಳಿಂದ ಇಂದು ಕೋಟ್ಯಾoತರ ಜನರು ಬಡತನ ದಿಂದ ಬದುಕುವoತಾಗಿದೆ, ಅವರಿಗೆ ಗೌರವಯುತವಾದ ಬದುಕನ್ನು ನೀಡಬೇಕಂದರೆ ಅವರನ್ನು ಬಡತನದಿಂದ ಬಿಡುಗಡೆಗೊಳಿಸಬೇಕಾಗಿದೆ ಎಂದು ನುಡಿದರು.

ಲಯನ್ ಜಿಲ್ಲಾ 317 ಸಿ ಯಾ ಪ್ರಾಂತಿಯ ಅಧ್ಯಕ್ಷರಾದ ಪ್ರತಾಪಚಂದ್ರ ಶೆಟ್ಟಿ ಸಭೆಯನ್ನು ಉದ್ದೇಶಿಸಿ ಸದ್ಯಸಯರು ರಕ್ತ ದಾನ ಮಾಡುದರ ಮೂಲಕ ಇನ್ನೊಬ್ಬರ ಪ್ರಾಣ ಉಳಿಸಬಹುದು ಈ ರಕ್ತ ದಾನ. ರಕ್ತ ದಾನ ಮಾಡಿದವರ ಹಾಗು ರಕ್ತ ವನ್ನು ಸ್ವೀಕರಿಸಿದವರ ಅರೋಗ್ಯ ಗಣನಿಯವಾಗಿ ಉತ್ತಮ ಗೊಳ್ಳುದು ರಕ್ತದಾನ ಮನುಷತ್ವದ ಇನ್ನೊಂದು ರೂಪ.ಲಯನ್ಸ್ ಕ್ಲಬ್ ರಕ್ತದಾನಕ್ಕೂ ಬಹಳ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದು ಮಾತನಾಡಿದರು.

ಲಯನ್ಸ್ ಜಿಲ್ಲಾ ವಲಯ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ನಮ್ಮ ದೇಶದಲ್ಲಿ ಅಪರಾವಾದ ಮಾನವ ಸಂಪನ್ಮೂಲ ಇದೆ, ಇದನ್ನು ಮನುಷ್ಯನ ಮತ್ತು ರಾಷ್ಟ್ರದ ಅಭಿವೃದ್ಧಿ ಗೆ ಬಳಸಿಕೊಳ್ಳುವು ದು ಅತ್ಯಂತ ಮುಖ್ಯವಾದುದು. ಮಾನವ ಸಂಪನ್ಮೂಲ ವನ್ನು ಬೆಳೆಸಲು ತರಬೇತಿ ಅತೀ ಮುಖ್ಯವಾದ ಟೂಲ್ ಆಗಿದೆ ಎಂದು ನುಡಿದರು.ಜ್ಞಾನ ಕೌಶಲ್ಯ ಹಾಗು ಜೀವನ ಮೌಲ್ಯಗಳನ್ನು ಹೆಚ್ಚಿಸುವು ದು ವಿದ್ಯಾಭ್ಯಾಸ ದ ಮೂಲ ಆಶಯ ಆದರೆ ಕೆಲವೊಂದು ಕಾರಣದಿಂದಾ ಗಿ ಸಾರ್ವರ್ತಿಕ ಸಾಕ್ಷಾರತೇ ಸಾಧ್ಯವಾಗುತ್ತಿಲ್ಲ, ಲಯನ್ಸ್ ಸಂಸ್ಥೆಗಳು ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನು ಇಡಬೇಕಾಗಿದೆ ಎಂದು ಲಯನ್ಸ್ 317 ಸಿ ಯಾ ಜಿ ಎಮ್ ಟಿ ಸಂಯೋಜಕರಾದ ರೋವನ್ ಡಿ ಕೋಸ್ಟ ನುಡಿದರು.

ಸಭಾ ಕಾರ್ಯಕ್ರಮ ದಲ್ಲಿ ಶಿಕ್ಷಣ ಹಾಗು ವೈದ್ಯಕೀಯ ನೆರವು ವನ್ನು ಹೇಮಲತಾ ಹಾಗು ಪ್ರಜ್ವಲ್ ರವರಿಗೆ ನೀಡಲಾಯಿತು.ಸಭೆಯ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಕುಂದಾಪುರ ವೆಯಿಟ್ ಝೋನ್ ನ ಅಧ್ಯಕ್ಷರಾದ ಹುಸೇನ್ ಹೈಕಾಡಿ ವಹಿಸಿದರು,ನಿಕಟಪೂರ್ವ ಅಧ್ಯಕ್ಷ ವಿಜಯ ಬಂಡಾರಿ ಸ್ವಾಗತಿಸಿದರು.ಉಪಾಧ್ಯಕ್ಷರಾದ ಪ್ರಸನ್ನ ಕುಮಾರ್, ತ್ರಿವಿಕ್ರಮ ನಾಯಕ್ ದ್ವಜಾವಂದನೆ ಹಾಗುಲಯನ್ಸ್ ನೀತಿ -ಸಂಹಿತೆ ಓದಿದರು.ರಾಘವೇಂದ್ರ ಚರಣ್ ನಾವಡ, ಕಿರಣ್ ದೇವಾಡಿಗ ಸಂದೀಪ್ ಕಾಮತ್ ಅತಿಥಿಗಳನ್ನು ಪರಿಚಯ ಮಾಡಿದರು ಕಾರ್ಯದರ್ಶಿ ಪ್ರದೀಪ್ ಬಂಗೇರ ವಂದಿಸಿದರು.

Leave a Reply

Your email address will not be published. Required fields are marked *